ಮಡಿಕೇರಿ, ಜು. 8: ಸುಂದರ ಮಡಿಕೇರಿ ನಗರದ ರಸ್ತೆಗಳಂತೂ ಪೂರಾ ಹಳ್ಳ ಹತ್ತಿ ಹೋಗಿದೆ. ಕಾಂಕ್ರಿಟ್ ರಸ್ತೆಗಳು ಕೂಡ ಕೆಸರುಮಯವಾಗಿದೆ. ಇದ್ದುದರಲ್ಲಿ ಹೆದ್ದಾರಿಗಳಾದರೂ ಪರವಾಗಿಲ್ಲ ಅಂದುಕೊಂಡರೆ ಅದೂ ಕೂಡ ಅಲ್ಲಲ್ಲಿ ಕುಸಿಯಲಾರಂಭಿಸಿದೆ.

ಮಡಿಕೇರಿಯಿಂದ ಮೂರ್ನಾಡು ಕಡೆಗೆ ತೆರಳುವ ರಸ್ತೆಯ ಚಿಕ್ಕಪೇಟೆ ಜಂಕ್ಷನ್‍ನಲ್ಲಿ ಒಂದಷ್ಟು ಕುಸಿದಿದ್ದು, ರಸ್ತೆ ಬಹುತೇಕ ಬಿರುಕು ಬಿಟ್ಟಿದೆ. ಈ ಬಾರಿ ಮಳೆ ಕಡಿಮೆಯಿರುವದರಿಂದ ಸದ್ಯ ಬಚಾವಾಗಿದೆ. ಆದರೆ ಬಿರುಕು ಬಿಟ್ಟಿರುವ ಭಾಗ ಭಾರೀ ವಾಹನಗಳ ಸಂಚಾರ ಸಂದರ್ಭ ಯಾವದೇ ಸಂದರ್ಭದಲ್ಲೂ ಕುಸಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅನಾಹುತ ಸಂಭವಿಸುವ ಮುನ್ನ ಸಂಬಂಧಿಸಿದವರು ಅಗತ್ಯ ಕ್ರಮಕೈಗೊಳ್ಳುವದೊಳಿತು. -ಪಿ.ಪಿ. ಸುಕುಮಾರ್