ಚೆಟ್ಟಳ್ಳಿ, ಜು. 8: ಕರ್ನಾಟಕೊಡವ ಸಾಹಿತ್ಯಅಕಾಡೆಮಿ ಹಾಗು ಮೈಸೂರಿನ ಶ್ರೀ ಭಗವತಿಕೊಡವ ಅಸೋಸಿಯೇಷನ್‍ನ ಸಂಯುಕ್ತ ಆಶ್ರಯದಲ್ಲಿ ಕೊಡವ ಸಂಸ್ಕ್ರತಿಯ ವಿಶಿಷ್ಟ ಆಚರಣೆಯಲ್ಲೊಂದಾದ ಕೊಡವ “ಪೈತಾಂಡೆ ನಮೆ”್ಮಯನ್ನು ತಾ. 12ರಂದು ಮೈಸೂರಿನ ಕೊಡವ ಸಮಾಜದಲ್ಲಿ ಏರ್ಪಡಿಸಲಾಗಿದೆ. ತಾ. 12ರ ಸಂಜೆ 5 ಗಂಟೆಗೆ ಕರ್ನಾಟ ಕೊಡವ ಸಾಹಿತ್ಯ ಅಕಾಡೆವಿ ಅಧ್ಯಕ್ಷ ಬಿದ್ದಾಟಂಡ ಎಸ್ .ತಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮೇಜರ್ ಜನರಲ್ ಕೋದಂಡ ಕೆ. ಕರುಂಬಯ್ಯ ಅವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮೈಸೂರಿನ ಸೂಪರಿಟೆಂಡೆಂಟ್ ಆಫ್ ಪೋಲೀಸ್ ಅಧಿಕಾರಿ ಅರಮಣಮಾಡ ಕೆ. ಸುರೇಶ್, ಮೈಸೂರು ಶ್ರೀ ಭಗವತಿ ಕೊಡವ ಅಸೋಸಿಯೇಷನ್‍ನ ಅಧ್ಯಕ್ಷ ಬಲ್ಲಚಂಡ ಡಿ. ಸುಬ್ಬಯ್ಯ, ಮೈಸೂರು ಕೊಡವ ಸಮಾಜದ ಅದ್ಯಕ್ಷ ಮೂವೆರ ಕೆ. ಕುಟ್ಟಪ್ಪ, ಉದ್ಯಮಿ ಹಾಗೂ ಬಿಬಿಎಂಪಿಯ ಮಾಜಿ ಸದಸ್ಯ ಕದ್ದಣಿಯಂಡ ಹರೀಶ್ ಬೋಪಣ್ಣ ಭಾಗವಹಿಸಲಿರುವರು.

ಮರೆಯಾಗುತಿರುವ ಕೊಡವ ಆಚಾರ ಹಾಗೂ ಸಂಪ್ರದಾಯದ ಬಗ್ಗೆ ಕೀತಿಯಂಡ ಕವಿತಾ ಕುಟ್ಟಪ್ಪ ವಿಚಾರ ಮಂಡಿಸಲಿದ್ದು, ಬರಹಾಗಾರ್ತಿ ಉಳುವಂಗಡ ಕಾವೇರಿ ಉದಯ ಬರೆದ ‘ಕೊದಿರ ಪೂಮಳೆ’ ಪುಸ್ತಕ ಬಿಡುಗಡೆ, 1985ರಲ್ಲಿ ತಮ್ಮು ಪೂವಯ್ಯ ಅವರು ಅಂಬಿಕಾ ನಾದ ಲಹರಿಯಲ್ಲಿ ಬಿಡುಗಡೆಗೊಳಿಸಿದ ದಿ.ನಾಪಂಡ ತಿಮ್ಮಯ್ಯ ಹಾಗೂ ಸಂಗಡಿಗರು ಹಾಡಿರುವ ಬಾಳೋಪಾಟ್ ಸಿಡಿಯ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಕೊಡವರ ಸಾಂಪ್ರದಾಯಿಕ ಆಚರಣೆಯಾದ ಕೊಡವ ನರಿಮಂಗಲ ಸಾಂಸ್ಕ್ರತಿಕ ಕಾರ್ಯಕ್ರಮ, ವಿವಿಧ ಆಟ್ ಪಾಟ್ ಪ್ರದರ್ಶನ, ಅಕಾಡೆಮಿ ಹೊರತಂದಿರುವ ಪುಸ್ತಕ ಪ್ರದರ್ಶನ ಹಾಗೂ ಮಾರಾಟವಿದೆ.

ಹೆಣ್ಣೊಬ್ಬಳು ಹತ್ತು ಮಕ್ಕಳನ್ನು ಹೆತ್ತು ಅರುವತ್ತೊಂದನೇ ದಿನದಲ್ಲಿ ಆ ಹೆಣ್ಣಿಗೆ ಕನ್ನಿಮಂಗಲ ಮಾಡುವ ಸಂಪ್ರದಾಯದ ಕೊಡವ ಪೈತಾಂಡೆ ನಮ್ಮೆಯ ವಿಶಿಷ್ಟ ಈ ಕಾರ್ಯಕ್ರಮಕೆ ್ಕಕೊಡಗಿನಿಂದಲ್ಲದೆ ಮೈಸೂರಿನ ಕೊಡವ ಸಮಾಜದ ಸದಸ್ಯರೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ಕೊಡವ ಸಾಂಸ್ಕ್ರತಿಕ ತಂಡಗಳು ಈಗಾಲೇ ತರಬೇತಿ ಹೊಂದುತಿದ್ದಾರೆಂದು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ ತಿಳಿಸಿದ್ದಾರೆ.