ಮಡಿಕೇರಿ, ಜು. 9: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಶ್ರೀಮಂಗಲ ಕುಮಟೂರು ಜೆ.ಸಿ.ಸ್ಕೂಲ್ ಇವರ ಸಂಯುಕ್ತಾಶ್ರಯದಲ್ಲಿ ತಾ. 10 ರಂದು (ಇಂದು) ಬೆಳಗ್ಗೆ 11 ಗಂಟೆಗೆ ಶ್ರೀಮಂಗಲ ಕಾಕೂರು ಪ್ರೌಢಶಾಲೆ ಜೆ.ಸಿ.ಸ್ಕೂಲ್‍ನಲ್ಲಿ ಆಟ್-ಪಾಟ್ ತರಬೇತಿ ಸಮಾರೋಪ ಸಮಾರಂಭ ನಡೆಯಲಿದೆ.

ಕಾರ್ಯಕ್ರಮದಲ್ಲಿ ಶ್ರೀಮಂಗಲ ಗ್ರಾ.ಪಂ.ಅಧ್ಯಕ್ಷ ಅಜ್ಜಮಾಡ ಮುತ್ತಮ್ಮ ನಾಚಪ್ಪ, ಜಿ.ಪಂ.ಸದಸ್ಯ ಮುಕ್ಕಾಟ್ಟಿರ ಶಿವುಮಾದಪ್ಪ, ಜೆ.ಸಿ.ಸ್ಕೂಲ್ ಕಮಟೂರು ಶ್ರೀಮಂಗಲ ಸ್ಥಾಪಕ ಅಧ್ಯಕ್ಷ ಕೊಟ್ರಂಗಡ ಎಂ.ಸುಬ್ರಮಣಿ, ತಾ.ಪಂ.ಸದಸ್ಯ ಪೊಯೇಲೇಂಗಡ ಪಲ್ವಿನ್ ಪೂಣಚ್ಚ ಇವರುಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಆಟ್-ಪಾಟ್ ತರಬೇತಿ ಪಡೆದ ಮಕ್ಕಳಿಂದ ಸಾಂಸ್ಕøತಿಕ ನೃತ್ಯ ಪ್ರದರ್ಶನವಿರುತ್ತದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ ತಿಳಿಸಿದ್ದಾರೆ.

ಹುದಿಕೇರಿ ಲಿಟಲ್ ಫ್ಲವರ್ ಶಾಲೆಯಲ್ಲಿ ತಾ. 10 ರಂದು (ಇಂದು) ಮಧ್ಯಾಹ್ನ 2.30 ಗಂಟೆಗೆ ಹುದಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ “ಆಟ್-ಪಾಟ್ ತರಬೇತಿ ಸಮಾರೋಪ ಸಮಾರಂಭ” ನಡೆಯಲಿದೆ.

ಕಾರ್ಯಕ್ರಮದಲ್ಲಿ ಹುದಿಕೇರಿ ಗ್ರಾ.ಪಂ.ಅಧ್ಯಕೆÀ್ಷ ಮತ್ರಂಡ ರೇಖಾ ಪೊನ್ನಪ್ಪ, ತಾ.ಪಂ.ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಚೆರಿಯಪಂಡ ರಾಜನಂಜಪ್ಪ, ಹುದಿಕೇರಿ ಗ್ರಾ.ಪಂ. ಸದಸ್ಯರುಗಳಾದ ಮೀದೇರಿರ ನವೀನ್, ಚಂಗುಲಂಡ ಸೂರಜ್, ಲಿಟಲ್ ಫ್ಲವರ್ ಸ್ಕೂಲ್‍ನ ಕಾರ್ಯದರ್ಶಿ ಎ.ಎಸ್.ಆಶಾಜ್ಯೋತಿ ಇತರರು ಪಾಲ್ಗೊಳ್ಳಲಿದ್ದಾರೆ.