ಮಡಿಕೇರಿ, ಜು.9 : ಜನನ ಆಕಸ್ಮಿಕವಾದರೆ, ಮರಣ ನಿಶ್ಚಿತ. ಇವುಗಳ ನಡುವಿನ ಬದುಕು ಅನಿವಾರ್ಯವಾಗಿದ್ದು, ಇಂತಹ ಬದುಕನ್ನು ಉತ್ತಮ ಆರೋಗ್ಯದೊಂದಿಗೆ ನಿಭಾಯಿಸುವದು ಅತ್ಯಗತ್ಯವೆಂದು ಖ್ಯಾತ ವೈದ್ಯರು ಹಾಗೂ ವಾಗ್ಮಿಗಳಾದ ಡಾ|ಕೆ.ಬಿ. ಪÀÅತ್ತೂರಾಯ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕೆಳಗಿನ ಗೌಡ ಸಮಾಜದಲ್ಲಿ ನಡೆದ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್‍ನ 13ನೇ ಅಧ್ಯಕ್ಷರಾಗಿ ಅನಿಲ್ ಹೆಚ್.ಟಿ. ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮುಖ್ಯ ಭಾಷಣ ಮಾಡಿದರು. ತಮ್ಮ ಹಾಸ್ಯಭರಿತ ಭಾಷಣದ ಮೂಲಕ ಸಭಿಕರನ್ನು ನಗೆಗಡಲಲ್ಲಿ ಮುಳುಗಿಸುವದರ ಜೊತೆಯಲ್ಲೆ ಬದುಕಿಗೆ ಅಮೂಲ್ಯ ಸಂದೇಶಗಳನ್ನು ನೀಡುವ ಮೂಲಕ ಗಮನ ಸೆಳೆÉದರು.

ಬದುಕಿನ ‘ಸಂತೋಷ’ ಹೊರ ಪ್ರಪಂಚದ ವಿಚಾರಗಳಿಂದ ನಮಗೆ ದೊರಕುವದಿಲ್ಲ. ಬದಲಾಗಿ, ಸಂತೋಷವೆನ್ನುವದು ನಮ್ಮೊಳಗೆ ಇದ್ದು, ತನ್ನ ಬದುಕು ಸಂತೋಷದಿಂದ ಇರಬೇಕೆನ್ನುವ ನಿರ್ಧಾರವನ್ನು ಆಯಾ ವ್ಯಕ್ತಿಯೇ ತಳೆÉಯುವ ಮೂಲಕ ಸುಂದರವಾದ ಬದುಕÀನ್ನು ತನ್ನದಾಗಿಸಿಕೊಳ್ಳಬೇಕು. ಇಂತಹ ಸಂತೋಷದ ಬದುಕಿಗೆ ಉತ್ತಮವಾದ ಆಹಾರ ಕ್ರಮ, ಅಭ್ಯಾಸ ಮತ್ತು ದುಶ್ಚಟಗಳಿಂದ ದೂರವಿರುವ ಮನಸ್ಥಿತಿ ಅತ್ಯವಶ್ಯ ಎಂದು ಡಾ|ಕೆ.ಬಿ. ಪÀÅತ್ತೂರಾಯ ಹೇಳಿದರು.

ಪ್ರತಿಯೊಬ್ಬ ವ್ಯಕ್ತಿಯಲ್ಲೂ ವೈಯಕ್ತಿಕ, ವೃತ್ತಿ, ಸಾಮಾಜಿಕ ಮತ್ತು ಕೌಟುಂಬಿಕ ಎನ್ನುವ ನಾಲ್ಕು ಬದುಕುಗಳಿರುತ್ತವೆ. ವೃತ್ತಿಯಲ್ಲಿ ಅತ್ಯಂತ ದೊಡ್ಡ ಯಶಸ್ಸನ್ನು ಕಂಡಾತನ ಕೌಟುಂಬಿಕ ಬದುಕು ವಿಫಲವಾಗಿರಬಹುದು. ಈ ನಾಲ್ಕು ಬದುಕುಗಳು ಸಮಾನವಾಗಿ ಇರುವಂತೆ ನೋಡಿಕೊಳ್ಳುವದು ಅತ್ಯಗತ್ಯ. ಹಣ ಹೊಂದಿರುವ ವ್ಯಕ್ತಿಗೆ ಸಮಾಜದಿಂದ ಗೌರವ ದೊರಕುತ್ತದೆ, ಆದರೆ ಅದು ಆತನ ಹಣಕ್ಕಾಗಿ ಮಾತ್ರವಾಗಿರುತ್ತದೆ, ಅಧಿಕಾರ ಹೊಂದಿರುವಾತನಿಗೆ ಆತನ ಅಧಿಕಾರಕ್ಕಾಗಿ ಜನ ಗೌರವವನ್ನು ನೀಡುತ್ತಾರಷ್ಟೇ. ಹಣ ಮತ್ತು ಅಧಿಕಾರ ಹೋದಂತೆಯೇ ಜನರು ಅವರಿಂದ ದೂರವಾಗುವದನ್ನು ಕಾಣಬಹುದು. ಆದರೆ, ಬಾಹ್ಯ ಸೌಂದರ್ಯಕ್ಕೂ ಮಿಗಿಲಾಗಿ ಆಂತರಿಕ ಸೌಂದರ್ಯ ವನ್ನು ಹೊಂದಿರುವ ವ್ಯಕ್ತಿ ಸದಾ ಸಮಾಜದ ಗೌರವಕ್ಕೆ ಪಾತ್ರನಾಗುತ್ತಾನೆಂದು ಡಾ|ಕೆ.ಬಿ. ಪುತ್ತೂರಾಯ ಅಭಿಪ್ರಾಯಪಟ್ಟರು.

ನಾನು ಮತ್ತು ನಮ್ಮವರು ಎನ್ನುವದು ಬಿಟ್ಟು ಪರರಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಸೇವೆಯೇ ಸಮಾಜಸೇವೆಯೆಂದು ಅನಿಸಿಕೆ ವ್ಯಕ್ತಪಡಿಸಿದ ಡಾ| ಪುತ್ತೂರಾಯ, ಪ್ರತಿಯೊಬ್ಬರು ಪರೋಪಕಾರದ ಗುಣವನ್ನು ಹೊಂದಿರಬೇಕು ಹಾಗೂ ತಾವು ಮಾಡಿದ ಉಪಕಾರವನ್ನು ಕೂಡಲೇ ಮರೆಯಬೇಕೆಂದು ಕಿವಿ ಮಾತುಗಳನ್ನಾಡಿ, ಇತರರು ಮಾಡಿದ ಉಪಕಾರವನ್ನೆಂದಿಗೂ ಮರೆಯಬೇಡ ಮತ್ತು ಅದನ್ನು ಸ್ಮರಿಸಿಕೊಳ್ಳಬೇಕೆಂದು ಕಿವಿಮಾತುಗಳನ್ನಾಡಿದರು.

ಮನೆಯ ಹೊಸ್ತಿಲನ್ನು ದಾಟುತ್ತಿರುವಂತೆಯೇ ನಮ್ಮ ಜಾತಿಯನ್ನು ಅಲ್ಲೇ ಬಿಟ್ಟು ಹೊರಬರಬೇಕು. ನಾವೆಲ್ಲರೂ ಮನುಷ್ಯರೆ ಎನ್ನುವ ಸತ್ಯವನ್ನಷ್ಟೇ ಎಲ್ಲರೂ ಅರಿತುಕೊಳ್ಳುವದು ಅಗತ್ಯವೆಂದರು.

ಪದಗ್ರಹಣ

ಮಿಸ್ಟಿ ಹಿಲ್ಸ್ ನೂತನ ಅಧ್ಯಕ್ಷ ಅನಿಲ್ ಹೆಚ್.ಟಿ., ಕಾರ್ಯದರ್ಶಿ ಯಾಗಿ ಪಿ.ಯಂ. ಸಂದೀಪ್ ಹಾಗೂ ಪದಾಧಿಕಾರಿಗಳ ಪದಗ್ರಹಣವನ್ನು ರೋಟರಿ ಜಿಲ್ಲಾ ಗವರ್ನರ್ ಮಾತಂಡ ಸುರೇಶ್ ಚಂಗಪ್ಪ ನಡೆಸಿಕೊಟ್ಟರು.

ಈ ಸಂದರ್ಭ ಸುರೇಶ್ ಚಂಗಪ್ಪ ಮಾತನಾಡಿ, 2003-04ನೇ ಸಾಲಿನಲ್ಲಿ ಹಿರಿಯರು ಹೆಚ್ಚಾಗಿದ್ದ ರೋಟರಿ ಸಂಸ್ಥೆ ಅತ್ಯಂತ ಕಟ್ಟು ನಿಟ್ಟು ಮತ್ತು ಶಿಸ್ತಿಗೆ ಒಳಪಟ್ಟಿದ್ದರಿಂದ ಸದಸ್ಯರ ನೋಂದಣಿ ತ್ರಾಸದಾಯಕವಾಗಿತ್ತು. ಆ ಸಂದರ್ಭದಲ್ಲಿ ಅತ್ಯಂತ ಉತ್ಸಾಹಿ ಬಿ.ಜಿ. ಅನಂತಶಯನ ಅವರ ಅಧ್ಯಕ್ಷತೆಯಲ್ಲಿ ನೂತನವಾಗಿ ರೋಟರಿ ಮಿಸ್ಟಿ ಹಿಲ್ಸ್‍ಅನ್ನು ಸ್ಥಾಪಿಸಲಾಗಿದ್ದು, ಇದೀಗ 69 ಸದಸ್ಯರನ್ನು ಹೊಂದಿ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವದಾಗಿ ಸಂತಸ ವ್ಯಕ್ತಪಡಿಸಿದರು. ತನ್ನ ಒಂದು ವರ್ಷದ ಅಧಿಕಾರದ ಅವಧಿಯಲ್ಲಿ ರೋಟರಿ ಜಿಲ್ಲಾ ವ್ಯಾಪ್ತಿಯಲ್ಲಿ 1 ಲಕ್ಷ ಗಿಡಗಳನ್ನು ನೆಟ್ಟು ಪೋಷಿಸುವ ಗುರಿಯನ್ನು ಹೊಂದಿರುವದಾಗಿ ತಿಳಿಸಿದರು.

ರೋಟರಿ ಮಿಸ್ಟಿ ಹಿಲ್ಸ್ ನೂತನ ಅಧ್ಯಕ್ಷ ಅನಿಲ್ ಹೆಚ್.ಟಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಹತ್ತು ಹಲವು ಸೇವಾ ಕಾರ್ಯಗಳನ್ನು ನಡೆಸುತ್ತಿದ್ದು, ಶೈಕ್ಷಣಿಕವಾದ ಸೌಲಭ್ಯಗಳನ್ನು ಒದಗಿಸಲು ಗರ್ವಾಲೆ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು. ‘ಮೇಕಿಂಗ್ ಎ ಡಿಫರೆನ್ಸ್’ ಘೋಷ ವಾಕ್ಯದೊಂದಿಗೆ ಕಾರ್ಯನಿರ್ವ ಹಿಸುವದಾಗಿ ತಿಳಿಸಿದರು.

9 ಸದಸ್ಯರಿಗೆ ಪ್ರಮಾಣ ವಚನ

ರೋಟರಿ ಮಿಸ್ಟಿ ಹಿಲ್ಸ್‍ನ ನೂತನ 9 ಮಂದಿ ಸದಸ್ಯರುಗಳಾದ ಅನಿತಾ ಪೂವಯ್ಯ, ಸವಿತಾ ಅರುಣ್, ಅಕ್ಷತಾ ಸತೀಶ್ ಕುಮಾರ್, ಕಟ್ಟೆಮನೆ ಸೋನಾಜಿತ್, ಕಾಂಗೀರ ಸತೀಶ್, ಸಂತೋಷ್ ಚಂಗಪ್ಪ ಕೆ.ಎನ್, ಹೆಚ್.ಎಸ್.ವೆಂಕಟೇಶ್ ಪ್ರಸಾದ್, ರಿಶ್ಚಿತ್ ಮಾದಯ್ಯ, ಯೋಗೇಂದ್ರ ಬಾಳೆಕಜೆ ಅವರಿಗೆ ರೋಟರಿ ಜಿಲ್ಲಾ ಗವರ್ನರ್ ಸುರೇಶ್ ಚಂಗಪ್ಪ ಪ್ರಮಾಣ ವಚನವನ್ನು ಬೋಧಿಸಿದರು.

ಬುಲೆಟಿನ್ ಬಿಡುಗಡೆ

ರೋಟರಿ ಮಿಸ್ಟಿ ಹಿಲ್ಸ್‍ನ ‘ಬುಲೆಟಿನ್’ ಅನ್ನು ರೊಟೇರಿಯನ್ ಮಹೇಶ್ ನಲ್ವಾಡೆ ಅವರು ಅನಾವರಣಗೊಳಿಸಿದರೆ, ರೋಟರಿ ಮಿಸ್ಟಿಹಿಲ್ಸ್ ‘ಬ್ರೋಷರ್’ನ್ನು ರೊ|ಅಂಬೆಕಲ್ ವಿನೋದ್ ಕುಶಾಲಪ್ಪ ಬಿಡುಗಡೆ ಮಾಡಿದರು.

ಸನ್ಮಾನ

ಸಮಾರಂಭದಲ್ಲಿ ರೊಟರಿ ಮಿಸ್ಟಿ ಹಿಲ್ಸ್ ಸ್ಥಾಪಕ ಅಧ್ಯಕ್ಷರಾದ ಬಿ.ಜಿ. ಅನಂತ ಶಯನ, ಜಯಶ್ರೀ ಅನಂತಶಯನ, ಹಿಂದಿನ ಸಾಲಿನ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಡಾ| ಪ್ರಶಾಂತ್ ಮತ್ತು ಡಾ|ಎನ್.ಎಸ್. ನವೀನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭ ಶೈಕ್ಷಣಿಕವಾಗಿ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿದ ರೋಟರಿ ಸದಸ್ಯರ ಮಕ್ಕಳನ್ನು ಅವರ ಪೆÀÇೀಷಕರೊಂದಿಗೆ ಕಿರುಕಾಣಿಕೆ ನೀಡಿ ಪ್ರೋತ್ಸಾಹಿಸಲಾಯಿತು.

ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಡಾ| ಪುತ್ತೂರಾಯ ಅವರನ್ನು ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.