ಆಲೂರುಸಿದ್ದಾಪುರ, ಜು. 9: ಇಲ್ಲಿಗೆ ಸಮೀಪದ ಮುಳ್ಳೂರು ಜಂಕ್ಷನ್‍ನಲ್ಲಿ ಯಾರೊ ಅಪರಿಚಿತರು ಸಣ್ಣ ನಾಯಿ ಮರಿಗೆ ವಾಹನವನ್ನು ಡಿಕ್ಕಿಪಡಿಸಿದ್ದರಿಂದ ಸ್ಥಳದಲ್ಲೇ ನಾಯಿಮರಿ ಸಾವನ್ನಪ್ಪಿದೆ. ಇದನ್ನು ಕಂಡು ಅದರ ತಾಯಿ ಸುಮಾರು 2 ಗಂಟೆಗಳ ಕಾಲ ರೋದಿಸುತ್ತಾ, ರಸ್ತೆಯಲ್ಲೆ ಮಲಗಿದ್ದ ದೃಶÀ್ಯ ಮನ ಕಲಕುವಂತಿತ್ತು.
-ದಿನೇಶ್