ಸುಂಟಿಕೊಪ್ಪ, ಜು. 10: ಸುಂಟಿಕೊಪ್ಪ ಸುತ್ತಮುತ್ತಲಿನ ತೋಟಗಳಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು,ಬೆಳೆ ಫಸಲುಗಳು ನಾಶಗೊಂಡು ತೋಟದ ಮಾಲೀಕರು ಸಂಕಷ್ಟಕ್ಕೀಡಾಗಿದ್ದಾರೆ.

ಇಲ್ಲಿಗೆ ಸಮೀಪದ ಕಂಬಿಬಾಣೆ ಗ್ರಾಮ ಪಂಚಾಯಿತಿಗೆ ಸೇರಿದ ಎಂ ಎಂ ಬಿದ್ದಪ್ಪ ಅವರ ದುರ್ಗ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ತೋಟದಲ್ಲಿರುವ ಕಾಫಿ,ಕಿತ್ತಳೆ ಫಸಲುಗಳನ್ನು ನಾಶ ಮಾಡಿದಲ್ಲದೆ ಅಂಗಳದಲ್ಲಿ ಕಾಫಿ ನರ್ಸರಿ ಮಾಡಿದ್ದ ಗಿಡಗಳನ್ನು ತುಳಿದು ದ್ವಂಸಗೊಳಿಸಿ ನಂತರ ಮುಂಭಾಗದಲ್ಲಿ ನಿಲ್ಲಿಸಿದ್ದ ಸ್ಯಾಂಟ್ರೋ ಕಾರಿಗೆ ಕೋರೆಯಿಂದ ತಿವಿದು ಮನೆಯ ಕಿಟಕಿ ಗಾಜು ಹಂಚುಗಳನ್ನು ಒಡೆದು ಹಾಕಿ ಸುಮಾರು 20 ಸಾವಿರ ನಷ್ಟ ಸಂಭವಿಸಿರುವದಾಗಿ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ

ಕಳೆದ ಹಲವು ದಿನಗಳಿಂದ ಈ ಭಾಗದಲ್ಲೇ ಕಾಡಾನೆಗಳ ಗುಂಪು ನೆಲೆವೂರಿದ್ದು ಸುತ್ತಮುತ್ತಲಿನ ತೋಟಗಳ ಫಸಲನ್ನು ಧÀ್ವಂಸಗೊಳಿಸುತ್ತಿದೆ. ಈ ಬಗ್ಗೆ ಮಾತನಾಡಿದ ಎಂ.ಎಂ. ಬಿದ್ದಪ್ಪ. ತೋಟದಲ್ಲಿಯೇ ಕಾಡಾನೆಗಳು ಬೀಡುಬಿಡುತ್ತಿದ್ದು, ಅನೇಕ ಕೃಷಿ ಫಸಲುಗಳನ್ನು ನಷ್ಟಪಡಿಸಿವೆ. ಕಾಡಾನೆಗಳು ಸಂಚರಿಸುವ ಸ್ಥಳಗಳಲ್ಲಿ ಕಾಫಿ ಗಿಡಗಳು ಸಂಪೂರ್ಣ ಹಾಳಾಗುತ್ತಿವೆ. ಮುಂದಿನ ದಿನಗಳಲ್ಲಿ ಹೀಗೆಯೇ ಮುಂದುವರೆದರೆ ಜೀವನ ಸಾಗಿಸುವದಕ್ಕೂ ಕಷ್ಟ ಪಡಬೇಕಾಗುತ್ತದೆ. ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರ ಕಾಡಾನೆ ಹಾವಳಿಯನ್ನು ಕೂಡಲೇ ನಿಯಂತ್ರಿಸದಿದ್ದಲ್ಲಿ ರೈತರು ಕೃಷಿಯನ್ನು ನಂಬಿ ಬದುಕುವದು ಕಷ್ಟ ಸಾಧÀ್ಯವಾಗಿದೆ.

ಕಂಬಿಬಾಣೆಯ ಸುತ್ತಮುತ್ತಲಿನ ತೋಟದ ಕಾರ್ಮಿಕರು ಈ ಕಾಡಾನೆಗಳ ಹಾವಳಿಯಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಕಾಲಕಳೆಯುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು ಕಾಡಾನೆಗಳು ಧಾಳಿ ಮಾಡಿರುವ ಸ್ಥಳಗಳಿಗೆ ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.