ಮಡಿಕೇರಿ, ಜು. 9: ದೆಹಲಿ ಇಂಟಾಕ್ ಹೆರಿಟೇಜ್ ಎಕ್ಸ್ಪ್ರೆಸ್ ಮೈಂಡ್ಸ್ ಜತೆಗೂಡಿ ಜಿಲ್ಲಾಮಟ್ಟದ ಸಿಟಿ ರೌಂಡ್ ಇಂಟಾಕ್ ಹೆರಿಟೇಜ್ ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆ-2017 ನ್ನು ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದರು. ಇದರಲ್ಲಿ 8 ಶಾಲೆಗಳ 29 ತಂಡಗಳು ಭಾಗವಹಿಸಿದ್ದವು. ಕೊಡಗರಹಳ್ಳಿಯ ಶಾಂತಿನಿಕೇತನ ಶಾಲೆಯ ವಿದ್ಯಾರ್ಥಿನಿಯರಾದ ಕೆ.ಡಿ. ಭೂಮಿಕ ಮತ್ತು ರಿಶಾ ಎಸ್. ನಾಯರ್ ಇವರ ತಂಡವು ಪ್ರಥಮ ಸ್ಥಾನವನ್ನು ಪಡೆದು ಬೆಂಗಳೂರಿನಲ್ಲಿ ನಡೆಯಲಿರುವ ವಲಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ರಸಪ್ರಶ್ನೆಯನ್ನು ಬೆಂಗಳೂರಿನ ಹೆಚ್.ಎಂ. ಮೇಘವಿ ನಡೆಸಿಕೊಟ್ಟರು.