ಮಡಿಕೇರಿ, ಜು. 11: ಕೊಡಗು ಕೇಂದ್ರಾಡಳಿತ ಪ್ರದೇಶ ರಚನೆ ಮತ್ತು ಕೊಡವ ಲ್ಯಾಂಡ್ ಸ್ವಾಯತ್ತತೆ ರಚನೆಗೆ ಮುಂದಾಗಿ ಭಾರತದ ಫೆಡರಲ್ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಲು ಆಗ್ರಹಿಸಿ ಸಿ.ಎನ್.ಸಿ. ವತಿಯಿಂದ ತಾ. 14 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಶಾಂತಿಯುತ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

ತಾ. 14 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದ್ದು, ಸೆಪ್ಟೆಂಬರ್ 12ರ ನಂತರ ಕೊಡಗಿನಾದ್ಯಂತ ಜನಜಾಗೃತಿ ಜಾಥಾ ನಡೆಸÀಲಾಗುವದಲ್ಲದೇ ನವೆಂಬರ್ 1 ರಂದು ನವದೆಹಲಿಯಲ್ಲಿ ಪಾರ್ಲಿಮೆಂಟ್ ಭವನದ ಮುಂದೆ “ಇನ್ವೇಷನ್ ಡೇ” - “ಆಕ್ರಮಣ ದಿನವಾಗಿ” ಸತ್ಯಾಗ್ರಹ ಹಮ್ಮಿಕೊಳ್ಳಲಾಗುವದು ಮತ್ತು ನವೆಂಬರ್ 24 ರಂದು ಮಡಿಕೇರಿ ಗಾಂಧಿ ಮೈದಾನದಲ್ಲಿ “27ನೇ ಕೊಡವ ನ್ಯಾಷನಲ್ ಡೇ” ಆಚರಿಸಲಾಗುವದು ಹಾಗೂ ಆಗಸ್ಟ್ 3 ರಂದು “21ನೇ ವರ್ಷದ ಕಕ್ಕಡ ಪದಿನೆಟ್” ನಮ್ಮೆ ಹಾಗೂ ಆಗಸ್ಟ್ 9 ರಂದು “ವಿಶ್ವ ಆದಿಮಸಂಜಾತ ಮೂಲ ನಿವಾಸಿ ಜನಾಂಗಗಳ ಹಕ್ಕುಗಳ ದಿನಾಚರಣೆ” ಅಂಗವಾಗಿ ಸತ್ಯಾಗ್ರಹ ನಡೆಸಲಾಗುವದು. ಸೆಪ್ಟೆಂಬರ್ 1 ರಂದು 22ನೇ ವರ್ಷದ ಸಾರ್ವತ್ರಿಕ ಕೈಲ್ ಪೊವ್ದ್ ನಮ್ಮೆಯನ್ನು ಆಚರಿಸಲಾಗುವದು ಎಂದು ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.