ಮಡಿಕೇರಿ, ಜು. 12: ರಾಜ್ಯ ಸರ್ಕಾರದ ಶಿಕ್ಷಣ ಸಚಿವಾಲಯ ಮತ್ತು ಕಾಲೇಜು ಶಿಕ್ಷಣ ಮಂಡಳಿ ಆಯುಕ್ತರು ರಾಜ್ಯದ ಎಲ್ಲಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಸಮಯವನ್ನು ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭಿಸಲು ಮಾಡಿರುವ ಆದೇಶವನ್ನು ಹಿಂದಕ್ಕೆ ಪಡೆಯಲು ಜೆಡಿಎಸ್ ಆಗ್ರಹಿಸಿದೆ.

ಗುಡ್ಡಗಾಡಿನ ಪ್ರದೇಶವಾದ ಕೊಡಗು ಜಿಲ್ಲೆಯ ಮಕ್ಕಳಿಗೆ ಮತ್ತು ಅಧ್ಯಾಪಕರಿಗೆ ಬೆಳಿಗ್ಗೆ 8 ಗಂಟೆಗೆ ಕಾಲೇಜು ತಲಪುವದು ಅಸಾಧÀ್ಯ. ಇಲ್ಲಿ ಸರಿಯಾದ ವಾಹನ ಸೌಕರ್ಯ ಇಲ್ಲ ಮತ್ತು ಕೂಲಿ ಕಾರ್ಮಿಕರ ಮಕ್ಕಳು ಮನೆ ಕೆಲಸ ಮುಗಿಸಿ ಶಾಲೆಗೆ ಬರಬೇಕಿದೆ. ಕೊಡಗಿನ ಬಹುತೇಕ ಹಳ್ಳಿಯ ಮಕ್ಕಳು ಸುಮಾರು ದೂರದಿಂದ ನಡೆದು ಬರಬೇಕಿದ್ದು, ಇದೀಗ ಕಾಡಾನೆ ಕಾಟದಿಂದ ಜನರು ಮಕ್ಕಳು ಬೆಳಿಗ್ಗೆ, ರಾತ್ರಿ ವೇಳೆ ಜೀವಕ್ಕೆ ಹೆದರಿ ಜೀವನ ನಡೆಸುತ್ತಿದ್ದಾರೆ. ಇಂತಹ ಸಮಯದಲ್ಲಿ ಸರಕಾರ ಯಾವದೇ ಪೂರ್ವ ಭಾವಿ ಮಾಹಿತಿ ಪಡೆಯದೆ, ಏಕಾಏಕಿಯಾಗಿ ಸಮಯ ಬದಲಾಯಿಸಿದ್ದು ಸರಿಯಲ್ಲ. ಕಾಲೇಜಿನಲ್ಲಿ ಹಾಸ್ಟೆಲ್ ವ್ಯವಸ್ಥೆ ಇದ್ದರೆ ಮಾತ್ರ ಈ ಬದಲಾವಣೆ ಸರಿಯಾಗುವದು. ಮಕ್ಕಳಿಗೆ ಸರಿಯಾದ ವಾಹನ ವ್ಯವಸ್ಥ್ತೆ ಮಾಡಬೇಕಿದೆ ಮತ್ತು ಉತ್ತಮ ಶಿಕ್ಷಣಕ್ಕೆ ಬದಲಾವಣೆ ತರಬೇಕಿದೆ, ಕಾಲೇಜಿನಲ್ಲಿ ಹೆಚ್ಚು ಶುಲ್ಕ ಪಡೆÉಯುತ್ತಿದ್ದು, ಈ ಬಗ್ಗೆ ಸರಕಾರ ಗಮನ ವಹಿಸಬೇಕಿದೆ. ಸರಕಾರ ತಕ್ಷಣ ನೂತನ ಆದೇಶವನ್ನು ಹಿಂದಕ್ಕೆ ಪಡೆದುಕೊಳ್ಳಲು ಮುಂದಾಗುವಂತೆ ಜೆಡಿಎಸ್ ವಕ್ತಾರ ಎಂ.ಟಿ. ಕಾರ್ಯಪ್ಪ ಆಗ್ರಹಿಸಿದ್ದಾರೆ.