ಮೂರ್ನಾಡು, ಜು. 12 : ಸಮಾಜಕ್ಕೆ ಉತ್ತಮ ನಾಯಕತ್ವ ಗುಣಗಳನ್ನು ಹೊಂದಿರುವವರ ಅಗತ್ಯತೆ ಹೆಚ್ಚಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಹಂತ ದಲ್ಲಿಯೇ ನಾಯಕತ್ವ ಗುಣಗಳನ್ನು ಅಳವಡಿಸಿಕೊಳ್ಳುವಂತೆ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ.ಅನಂತಶಯನ ಕರೆ ನೀಡಿದರು.

ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜು ಸಂಯುಕ್ತಾಶ್ರ ಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕಾಲೇಜಿನ ಎನ್‍ಎಸ್‍ಎಸ್ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಫೇಸ್ ಬುಕ್, ವಾಟ್ಸಪ್‍ಗಳಂತಹ ಮಾಧ್ಯಮಗಳ ದಾಸರಾದ ಪರಿಣಾಮ ಇವುಗಳಿಲ್ಲದೇ ಜೀವನವೇ ಇಲ್ಲ ಎಂಬಂತಹ ದಯನೀಯ ಪರಿಸ್ಥಿತಿ ಎದುರಾಗಿದೆ. ಆಧುನಿಕ ಸಂವಹನಗಳು ನಮ್ಮ ಜೀವನದ ಸಂತಸವನ್ನೇ ಕಸಿದು ಕೊಂಡಿವೆ ಎಂದು ಅಭಿಪ್ರಾಯಪಟ್ಟರು.

ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಸಿ.ಎಂ. ಪೆಮ್ಮಯ್ಯ ಮಾತನಾಡಿ, ಸೇವಾ ಮನೋಭಾವನೆ ಹೊಂದಿರುವ ರೋಟರಿ ಮಿಸ್ಟಿ ಹಿಲ್ಸ್ ಜತೆ ಕಾಲೇಜು ಮುಂದಿನ ದಿನಗಳಲ್ಲಿಯೂ ಅನೇಕ ಸಾಮಾಜಿಕ ಹೊಣೆಗಾರಿಕೆಯುಳ್ಳ ಕಾರ್ಯಯೋಜನೆಗಳನ್ನು ಆಯೋಜಿಸುತ್ತದೆ ಎಂದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, 12 ವರ್ಷಗಳ ಇತಿಹಾಸದ ರೋಟರಿ ಮಿಸ್ಟಿ ಹಿಲ್ಸ್ ಪ್ರತೀ ವರ್ಷವೂ ಹಲವಾರು ಶೈಕ್ಷಣಿಕ, ಸಾಮಾಜಿಕ, ಆರೋಗ್ಯ ಸಂಬಂಧಿತ ಕಾರ್ಯಕ್ರಮ ಗಳನ್ನು ಆಯೋಜಿಸುತ್ತಾ ಬರುತ್ತಿದೆ. ಈ ವರ್ಷವೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಎಂ. ಸಂದೀಪ್ ಮಾತನಾಡಿ, ಆತ್ಮವಿಶ್ವಾಸದ ಕೊರತೆಯಿಂದ ಹೊರಬಂದು ವಿಶ್ವಾಸದಿಂದ ಶೈಕ್ಷಣಿಕ ಸಾಧನೆಯ ಹಾದಿಯಲ್ಲಿ ಮುನ್ನುಗ್ಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮಿಸ್ಟಿ ಹಿಲ್ಸ್ ಮಾಜಿ ಅಧ್ಯಕ್ಷ, ಜಿಲ್ಲಾ ರೋಟರಿ ಸಮಿತಿಯ ಸಾರ್ಜೆಂಟ್ ಎಟ್ ಆಮ್ರ್ಸ್ ದೇವಣಿರ ತಿಲಕ್ ಮಾತನಾಡಿ, ಕಲಿತ ವಿದ್ಯಾಸಂಸ್ಥೆಗೆ ಭವಿಷ್ಯದಲ್ಲಿ ವಿದ್ಯಾರ್ಥಿಗಳು ಉತ್ತಮ ಕೊಡುಗೆ ನೀಡುವಂತಾಗಬೇಕೆಂದರು.

ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕಿ ಮಾತನಾಡಿ, ಕಾಲೇಜಿನಿಂದ ಮುಂದಿನ ದಿನಗಳಲ್ಲಿ ಸ್ವಚ್ಛತೆ ಸೇರಿದಂತೆ ವನಮಹೋತ್ಸವದಂತಹ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವದಾಗಿ ಹೇಳಿದರು.

ಮಿಸ್ಟಿ ಹಿಲ್ಸ್ ಟೀಚ್ ಕಾರ್ಯ ಕ್ರಮ ನಿರ್ದೇಶಕ ಪಿ.ಆರ್.ರಾಜೇಶ್, ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಖಜಾಂಜಿ ಪಿ.ಸಿ.ಸುಬ್ರಮಣಿ, ನಿರ್ದೇಶಕರುಗಳಾದ ಎನ್.ಪಿ.ರಾಜಾ ಮಾದಪ್ಪ, ಪಿ.ಎಂ.ವೇಣು ಅಪ್ಪಣ್ಣ, ಎ.ಎಂ.ಶೈಲಾ, ಈ.ಯು. ಸೋಮಣ್ಣ, ಬಿ.ಕೆ. ಸುಬ್ರಹ್ಮಣಿ, ಕಾಲೇಜಿನ ಎನ್‍ಎಸ್‍ಎಸ್ ಘಟಕದ ನಾಯಕಿ ಯಶಿಕಾ ಹಾಜರಿದ್ದರು.

ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಕಾಲೇಜಿನ ವಿದ್ಯಾರ್ಥಿನಿ ಯರಿಗೆ ಕೊಡುಗೆಯಾಗಿ ನೀಡಲ್ಪಟ್ಟ ಶುಚಿತ್ವ ಯಂತ್ರವನ್ನು ಡಾ. ಶುಭಾ ರಾಜೇಶ್ ಕಾಲೇಜು ಪ್ರಾಂಶುಪಾಲೆ ಪಿ.ಎಂ. ದೇವಕಿ ಅವರಿಗೆ ಹಸ್ತಾಂತರಿಸಿ ದರು. ಪೆÇನ್ನಮ್ಮ ಪ್ರಾರ್ಥಿಸಿ, ಉಪನ್ಯಾಸಕಿ ಪಿ.ಬಿ. ಕುಮುದಾ ಕಾರ್ಯಕ್ರಮ ನಿರೂಪಿಸಿ, ಎನ್‍ಎಸ್‍ಎಸ್ ಘಟಕ ಯೋಜನಾಧಿಕಾರಿ ವಿ.ಸಿ.ಮಾಲತಿ ವಂದಿಸಿದರು. ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಖಜಾಂಜಿ ಪಿ.ಸಿ.ಸುಬ್ರಮಣಿ, ನಿರ್ದೇಶಕರುಗಳಾದ ಎನ್.ಪಿ.ರಾಜಾ ಮಾದಪ್ಪ, ಪಿ.ಎಂ.ವೇಣು ಅಪ್ಪಣ್ಣ, ಎ.ಎಂ.ಶೈಲಾ, ಈ.ಯು. ಸೋಮಣ್ಣ, ಬಿ.ಕೆ. ಸುಬ್ರಹ್ಮಣಿ, ಕಾಲೇಜಿನ ಎನ್‍ಎಸ್‍ಎಸ್ ಘಟಕದ ನಾಯಕಿ ಯಶಿಕಾ ಹಾಜರಿದ್ದರು.

ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಕಾಲೇಜಿನ ವಿದ್ಯಾರ್ಥಿನಿ ಯರಿಗೆ ಕೊಡುಗೆಯಾಗಿ ನೀಡಲ್ಪಟ್ಟ ಶುಚಿತ್ವ ಯಂತ್ರವನ್ನು ಡಾ. ಶುಭಾ ರಾಜೇಶ್ ಕಾಲೇಜು ಪ್ರಾಂಶುಪಾಲೆ ಪಿ.ಎಂ. ದೇವಕಿ ಅವರಿಗೆ ಹಸ್ತಾಂತರಿಸಿ ದರು. ಪೆÇನ್ನಮ್ಮ ಪ್ರಾರ್ಥಿಸಿ, ಉಪನ್ಯಾಸಕಿ ಪಿ.ಬಿ. ಕುಮುದಾ ಕಾರ್ಯಕ್ರಮ ನಿರೂಪಿಸಿ, ಎನ್‍ಎಸ್‍ಎಸ್ ಘಟಕ ಯೋಜನಾಧಿಕಾರಿ ವಿ.ಸಿ.ಮಾಲತಿ ವಂದಿಸಿದರು.