ಗೋಣಿಕೊಪ್ಪಲು, ಜು. 12: ಕಾಫಿ ತೋಟಗಳಲ್ಲಿ ಬೆಣ್ಣೆ ಹಣ್ಣನ್ನು ನಾಲ್ಕನೇ ಬೆಳೆಯಾಗಿ ಬೆಳೆಯುವ ಮೂಲಕ ಆರ್ಥಿಕ ಸಬಲತೆಗೆ ಹೆಚ್ಚುವರಿ ಆದಾಯಕ್ಕೆ ಅವಕಾಶವಿದೆ ಎಂದು ಚೆಟ್ಟಳ್ಳಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಸೆಂಥಿಲ್ ಕುಮಾರ್ ಸಲಹೆ ನೀಡಿದರು.ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾರತೀಯ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ನಡೆದ ಬೆಣ್ಣೆ ಹಣ್ಣುಗಳ ಮಾಹಿತಿ ಕಾರ್ಯಾ ಗಾರದಲ್ಲಿ ಬೆಣ್ಣೆ ಹಣ್ಣುಗಳ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಕೊಡಗಿನ ವಾತಾವರಣಕ್ಕೆ ಈ ಕೃಷಿಯು ಸೂಕ್ತ ವಾಗಿರುವದರಿಂದ ವಾರ್ಷಿಕವಾಗಿ ಹೆಚ್ಚುವರಿ ಆದಾಯ ಪಡೆಯಲು ಕೃಷಿಕರಿಗೆ ಅವಕಾಶವಿದೆ. ಕಾಫಿ, ಕಾಳು ಮೆಣಸು, ಕಿತ್ತಳೆ ನಂತರದ ಬೆಳೆಯಾಗಿ ತೋಟ ಗಳಲ್ಲಿ ಬೆಣ್ಣೆಹಣ್ಣುಗಳ ಗಿಡಗಳ ಕೃಷಿ ಮಾಡುವ ಮೂಲಕ ವಾರ್ಷಿಕವಾಗಿ ಇನ್ನಷ್ಟು ಆದಾಯ ಪಡೆಯಬಹುದು ಎಂದರು.

ಮಾರುಕಟ್ಟೆಯಲ್ಲಿ ಆವಕಾಡೊ (ಬೆಣ್ಣೆಹಣ್ಣು) ಹಣ್ಣಿಗೆ ಉತ್ತಮ ದರ ಸಿಗುತ್ತಿದ್ದು, ಮಿಶ್ರಕೃಷಿಯಲ್ಲಿ ಬೆಳೆಯಬಹುದು ಎಂದರು. ಇದರೊಂದಿಗೆ

(ಮೊದಲ ಪುಟದಿಂದ) ಈ ಕೃಷಿಯ ಸಸಿಮಡಿ ತಯಾರಿಕೆ, ರೋಗಗಳ ಹತೋಟಿ, ಪರಾಗ ಸ್ಪರ್ಶ ಹಾಗೂ ಸೂಕ್ತ ತಳಿಗಳ ಆಯ್ಕೆ ಬಗ್ಗೆ ಮಾಹಿತಿ ನೀಡಿದರು. ಆವಕಾಡೊ ಹಣ್ಣಿನಿಂದ ತಯಾರಾದ ಪೇಶ್ಟ್ರಿ ಕೇಕ್ ಹಾಗೂ ವಿವಿಧ ತಳಿಗಳ ಹಣ್ಣುಗಳ ಪ್ರದರ್ಶನ ನಡೆಯಿತು. ಸುತ್ತಮುತ್ತಲಿನ ಕೃಷಿಕರು ಪಾಲ್ಗೊಂಡು ಕೃಷಿ ಮಾಹಿತಿ ಪಡೆದರು. ಈ ಸಂದರ್ಭ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸಾಜು ಜಾರ್ಜ್, ಚೆಟ್ಟಳ್ಳಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ದೊರೆಪ್ಪಗೌಡ, ವಿಜ್ಞಾನಿ ಡಾ. ಪ್ರಭಾಕರ್ ಉಪಸ್ಥಿತರಿದ್ದರು.