ಮಡಿಕೇರಿ, ಜು. 12: ಮಡಿಕೇರಿಯ ಬ್ರೈನೋ ಬ್ರೈನ್ ಅಬಾಕಸ್ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಪದವಿ ಪ್ರದಾನ ಸಮಾರಂಭ ಹೊಟೇಲ್ ಕೂರ್ಗ್ ಇಂಟರ್‍ನ್ಯಾಷನಲ್‍ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಬ್ರೈನೋ ಬ್ರೈನ್ ಸಂಸ್ಥೆಯ ಕರ್ನಾಟಕ ವಲಯ ನಿರ್ದೇಶಕ ರಾಮಕೃಷ್ಣ ಮತ್ತು ಸಂಸ್ಥೆಯ ಮುಖ್ಯಸ್ಥೆ ಮಾಪಂಗಡ ಕವಿತಾ ಕರುಂಬಯ್ಯ ಉಪಸ್ಥಿತರಿದ್ದರು.

14ನೇ ಬ್ಯಾಚ್‍ನ ವಿದ್ಯಾರ್ಥಿಗಳಾದ ಆಯಿಷ ನಿಫಾ, ಬಿ.ಡಿ. ಧನುಶ್ರೀ, ಸುಜಲ್ ರಾವ್, ಸಾಯಿ ಸಜನ್, ಸುನೈನ ಮುತ್ತಣ್ಣ, ಎ.ಡಿ. ಪೃತ್ವಿನ್, ಟಿ.ಎಸ್. ವೈಭವ್, ಸೋಹಾ ಶಿರೀನ್, ಮಸ್ರೂರ್ ಅಹಮದ್, ಟಿ.ಎಲ್. ಚಾರ್ವಿ, ನಮ್ರತಾ ಚೌದ್ರಿ, ಎಂ.ಎಸ್. ಶಶಾಂಕ್, ಸಾತ್ವಿಕ್ ಸುಬ್ಬಯ್ಯ, ಎಂ.ಎ. ರಿಮ್‍ನ, ಎಂ.ಎ. ರಿಶನ್, ಭೂಮಿಕ ಚನ್ನರಾಜ್, ಆರ್ನವ್ ಚನ್ನರಾಜ್, ಶಿಝಾ ಫಾತಿಮಾ, ಶ್ರೀಜಾ ಉತ್ತಪ್ಪ, ಸರೀನಾ ಶೇಝಾ, ಅರುಣ್ ದಿನೇಶ್ ಮೆನನ್, ಅತಿರ ದಿನೇಶ್ ಮೆನನ್ ಮತ್ತು ಎಸ್.ಎನ್. ರಾಹುಲ್ ಪದವಿ ಪ್ರದಾನ ಸ್ವೀಕರಿಸಿದರು.