ಕೂಡಿಗೆ, ಜು. 13: ಕೃಷಿ ಇಲಾಖೆಯ ವತಿಯಿಂದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದ ಪ್ರಗತಿಪರ ರೈತರಾದ ಕೆ.ಆರ್. ರಂಗಸ್ವಾಮಿ ಮತ್ತು ರಾಮಕೃಷ್ಣ ಅವರ ಮನೆಯ ಮುಂಭಾಗದಲ್ಲಿ ಭತ್ತದ ಸಸಿ ಮಡಿಯ ತಯಾರಿಸುವಿಕೆಯ ಪ್ರಾತ್ಯಕ್ಷಿತೆ ಕಾರ್ಯಾಗಾರ ನಡೆಯಿತು.

ತಾಲೂಕು ಕೃಷಿ ನಿರ್ದೇಶಕ ಡಾ. ರಾಜಶೇಖರ್ ಮಾತನಾಡಿ, ಸಸಿ ಮಡಿಗಳನ್ನು ತಯಾರಿಸಲು ಗದ್ದೆಯಲ್ಲಿ ಅಥವ ಮನೆಯ ಮುಂಭಾಗ, ತಾರಸಿನ ಮೇಲೂ ಸೂರ್ಯನ ಬೆಳಕು ಬರುವ ಜಾಗದಲ್ಲಿ ಬಿತ್ತನೆ ಮಾಡಬಹುದು. ಮುಂದುವರೆದು ಮಾತನಾಡಿ, 2016-17ನೇ ಸಾಲಿನಲ್ಲಿ ಸರ್ಕಾರದ ನಿಯಮಾÀನುಸಾರ ಭತ್ತದ ಬೆಳೆಯಲ್ಲಿ ಯಾಂತ್ರೀಕೃತ ನಾಟಿ ಪದ್ಧತಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದರು.

ಈ ಸಂದರ್ಭ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಾಡಿಗೆ ಯಾಂತ್ರೀಕರಣದ ಸೇವಾ ಸಂಸ್ಥೆಯ ಮೇಲ್ವಿಚಾರಕ ಸದಾಶಿವ, ಕುಶಾಲನಗರ ರೈತ ಸಂಪರ್ಕಾಧಿಕಾರಿ ಪೂಣಚ್ಚ, ಹೆಬ್ಬಾಲೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ರಜಿನಿ, ತಾಲೂಕು ಆತ್ಮಯೋಜನೆಯ ತಾಂತ್ರಿಕ ಅಧಿಕಾರಿ ಪಲ್ಲವಿ, ಭೂ ಚೇತನ ಅಧಿಕಾರಿ ಮಂಜುನಾಥ್, ಉದಯ್, ಕೃಷಿ ಇಲಾಖೆಯ ಹಾಗೂ ಮಣ್ಣು ಪರೀಕ್ಷಾ ಕೇಂದ್ರದ ಅಧಿಕಾರಿಗಳಾದ ಸಂಧ್ಯಾ, ಶಾರದ, ದೀಪಿಕ, ಪೂಜ, ಅಶ್ವಿನ್, ರೈತರುಗಳಾದ ಚಂದ್ರಶೇಖರ್, ಸಿದ್ಧಲಿಂಗಪ್ಪ, ಮಂಜುನಾಥ್, ಕೃಷ್ಣಮೂರ್ತಿ, ರಮೇಶ್, ಯೋಗೇಶ ಸೇರಿದಂತೆ ಮತ್ತಿತರರು ಇದ್ದರು.