ಶನಿವಾರಸಂತೆ, ಜು. 13: ಕೇಂದ್ರ ಸರಕಾರ ರೈತರ ಬಗ್ಗೆ ಕಾಳಜಿ ತೋರದೆ ರೈತರ ಕಷ್ಟಗಳಿಗೆ ಸ್ಪಂದಿಸದೆ, ರೈತರು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಮಾಡಿರುವ ಸಾಲವನ್ನು ಮರು ಪಾವತಿ ಮಾಡಲು ಸಾಧ್ಯವಾಗದೆ, ಸತತ ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ.
ರಾಜ್ಯ ಸರಕಾರ ರೂ. 50 ಸಾವಿರ ಮನ್ನಾ ಮಾಡಿದ್ದು, ರೈತರ ನೆರವಿಗೆ ಬರುವದರ ಮೂಲಕ ರೈತರ ಕಷ್ಟಗಳಿಗೆ ಸ್ಪಂದಿಸಿದೆ. ಅದೇ ರೀತಿಯಲ್ಲಿ ಕೇಂದ್ರ ಸರಕಾರವು ರೈತರ ನೆರವಿಗೆ ಬರುವದರ ಮೂಲಕ ರೈತರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸುವ ನಿಟ್ಟಿನಲ್ಲಿ ತಾ. 15ರಂದು ಹೋಬಳಿ ಕಾಂಗ್ರೆಸ್ ಮತ್ತು ರೈತರ ಸಮ್ಮುಖದಲ್ಲಿ ಶನಿವಾರಸಂತೆ ಕಿತ್ತೂರುರಾಣಿ ಚೆನ್ನಮ್ಮ ವೃತ್ತದಿಂದ 1ನೇ ವಿಭಾಗದ ನಾಡಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಹೋಬಳಿ ಮತ್ತು ನಗರ ಅಧ್ಯಕ್ಷರು, ಹಿರಿಯ ಕಾಂಗ್ರೆಸ್ ಮುಖಂಡರುಗಳು, ಚುನಾಯಿತ ಜನಪ್ರತಿನಿಧಿಗಳು, ರೈತ ಮುಖಂಡರುಗಳು ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.