ಮಡಿಕೇರಿ, ಜು. 13: ಮಂಗಳೂರು ವಿಶ್ವ ವಿದ್ಯಾನಿಲಯದ ಅಧೀನದಲ್ಲಿ ಬರುವ ಮಡಿಕೇರಿಯ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ 2017-18ನೇ ಶೈಕ್ಷಣಿಕ ವರ್ಷದಲ್ಲಿ (ಪ್ರಸಕ್ತ ಸಾಲು) ನೂತನವಾಗಿ ಸ್ನಾತಕೋತ್ತರ ಡಿಪ್ಲೋಮೊ ಇನ್ ಯೋಗಿಕ್ ಸೈನ್ಸ್ ಕೋರ್ಸ್ ಪ್ರಾರಂಭವಾಗುತ್ತಿದೆ. ಒಂದು ವರ್ಷದ ಅವಧಿಯ ಕೋರ್ಸ್ ಇದಾಗಿದ್ದು, ಇದಕ್ಕೆ ಸಂಬಂಧಿಸಿದ ಮಾಹಿತಿ ಇಂತಿದೆ. ಇದರ ಶೈಕ್ಷಣಿಕ ಅವಧಿ 1 ವರ್ಷ.

ಅರ್ಹತೆ: ಯಾವದೇ ಪದವಿ ಪರೀಕ್ಷೆಯಲ್ಲಿ ಪಾಸಾಗಿರಬೇಕು. ಅಥವ ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯಗಳಿಂದ ತತ್ಸಮಾನ ಪದವಿಯಲ್ಲಿ ಡಿಪ್ಲೋಮಾ ಕೋರ್ಸ್ ಮತ್ತು ಪರೀಕ್ಷೆ ಪಾಸಾಗಿರಬೇಕು. ವಯಸ್ಸಿನ ನಿರ್ಬಂಧವಿಲ್ಲ.

ಆಯ್ಕೆ: ಸರಕಾರದ ನಿಯಮಾವಳಿಗಳ ನೀತಿಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವದು. ಯಾವದೇ ಸ್ನಾತಕೋತ್ತರ ವಿದ್ಯಾರ್ಥಿಗಳು ಅಥವ ಸಂಶೋಧನಾ ವಿದ್ಯಾರ್ಥಿಗಳು ಈ ಡಿಪ್ಲೋಮಾ ತರಗತಿಗೆ ಸೇರಬಹುದು. ತರಗತಿಗಳನ್ನು ಬೆಳಿಗ್ಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಡೆಸಲಾಗುವದು.

ದಾಖಲಾತಿ ಪ್ರಕ್ರಿಯೆ: ಆಸಕ್ತರು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಚೇರಿಯಿಂದ ಅರ್ಜಿಯನ್ನು ಪಡೆದುಕೊಂಡು ಸಮರ್ಪಕವಾಗಿ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿಗಳನ್ನು ಸಂಯೋಜಕ ಡಾ. ಶ್ರೀಧರ್ ಹೆಗ್ಡೆ, ಹಿಂದಿ ವಿಭಾಗ ಇವರಿಗೆ 30.7.2017 ರೊಳಗೆ ಸಲ್ಲಿಸಬೇಕು. ತರಗತಿಗಳು ಆಗಸ್ಟ್ ತಿಂಗಳಿನಿಂದ ಪ್ರಾರಂಭವಾಗುವದು.

ಸಾಮಾನ್ಯ ವರ್ಗದವರಿಗೆ ರೂ. 9,835 ಹಾಗೂ ಪರಿಶಿಷ್ಟ ಜಾತಿ-ಪಂಗಡಕ್ಕೆ ರೂ. 2,635 ಶುಲ್ಕವಿರುವದಾಗಿ ಕಾಲೇಜಿನ ಪ್ರಾಂಶುಪಾಲೆ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.