ನಾಪೆÇೀಕ್ಲು, ಜು. 13: ಕೊಡಗು ಕೃಷಿ ಪ್ರಧಾನವಾದ ಜಿಲ್ಲೆ. ಹಿಂದಿನಿಂದಲೂ ಇಲ್ಲಿನ ಜನ ಭತ್ತದ ಕೃಷಿಯನ್ನೇ ನಂಬಿ, ಆರಾಧಿಸಿ, ಪೂಜಿಸುವದರ ಮೂಲಕ ತಮ್ಮ ನೆಮ್ಮದಿಯ ಬದುಕು ಕಂಡುಕೊಂಡವರು. ಕೊಡಗಿನ ಹಬ್ಬಗಳೂ ಕೂಡ ಭತ್ತದ ಕೃಷಿಯನ್ನೇ ಆಧರಿಸಿದ್ದಾಗಿದೆ.

ವಿಶು ಸಂಕ್ರಮಣದಂದು ಭತ್ತದ ಗದ್ದೆಗಳಲ್ಲಿ ಉಳುಮೆ ಆರಂಭಿಸುವ ಮೂಲಕ ಆರಂಭಗೊಳ್ಳುವ ಕೊಡಗಿನ ಸಾಂಪ್ರದಾಯಿಕ ಹಬ್ಬಗಳಾದ ಕಕ್ಕಡ ಪದ್‍ನೆಟ್, ಕೈಲ್ ಪೆÇೀಳ್ದ್, ಕಾವೇರಿ ಸಂಕ್ರಮಣ, ಪುತ್ತರಿ ಎಲ್ಲವೂ ಭತ್ತದ ಕೃಷಿಗೆ ಸಂಬಂಧಿಸಿದಾಗಿದೆ. ಭತ್ತದ ಕೃಷಿಯಿಲ್ಲದಿದ್ದರೆ ಕೊಡಗಿನಲ್ಲಿ ಹಬ್ಬಗಳೂ ಇಲ್ಲ ಎಂಬದು ಅರಿವಾಗಲಿದೆ. ಆದರೆ ಇಂದು ವೈಜ್ಞಾನಿಕ ಬೆಳೆಗಳಾದ ಕಾಫಿ, ಕಾಳು ಮೆಣಸು ಬೆಳೆಗಳದ್ದೇ ಕಾರುಬಾರು, ಭತ್ತದ ಕೃಷಿಯ ಬಗ್ಗೆ ಬಹುತೇಕ ಜನರಲ್ಲಿ ತಾತ್ಸಾರ ಭಾವನೆ ಮೂಡಿದೆ. ಅದರ ಪರಿಣಾಮ ದಕ್ಷಿಣ ಕಾಶ್ಮೀರ ಎಂದು ಕರೆಯಲ್ಪಡುವ ಕೊಡಗಿನಲ್ಲಿ ನೀರಿನ ಕೊರತೆ, ಮಳೆಯ ಕೊರತೆ ಕಾಣಿಸಿಕೊಂಡಿದೆ. ಮೈದುಂಬಿ ಹರಿಯಬೇಕಿದ್ದ ಮಾತೆ ಕಾವೇರಿ ಕೃಶಳಾಗಿದ್ದಾಳೆ. ಇದಕ್ಕೆ ಕಾರಣ ಭತ್ತದ ಕೃಷಿಯ ಬಗೆಗಿನ ನಿರಾಸಕ್ತಿ ಎಂಬ ಕೂಗು ಕೇಳಿ ಬರುತ್ತಿದೆ. ಕೂಲಿಯಾಳುಗಳ ಸಮಸ್ಯೆ, ಹೆಚ್ಚಿದ ಕೂಲಿ, ರೈತರು ಬೆಳೆದ ಭತ್ತಕ್ಕೆ ಸೂಕ್ತ ಬೆಲೆಯಿಲ್ಲದೆ ಭತ್ತದ ಕೃಷಿ ಲಾಭದಾಯಕವಲ್ಲ ಎನ್ನುತ್ತಿದ್ದಾರೆ ರೈತರು. ಇದರಲ್ಲಿ ಸೂಕ್ತ ಬದಲಾವಣೆಯಾಗಬೇಕಾದರೆ ಸರಕಾರ ಭತ್ತದ ಕೃಷಿಕರಿಗೆ ಹೆಚ್ಚಿನ ಪೆÇ್ರೀತ್ಸಾಹ, ಸಹಕಾರ ನೀಡುವ ಅಗತ್ಯವಿದೆ ಎಂಬದು ಜಿಲ್ಲೆಯ ಕೃಷಿಕರ ಅಭಿಮತ.

ಭತ್ತದ ಕೃಷಿಯ ಹಿನ್ನಡೆಯ ಕಾರಣದಿಂದ ಕೊಡಗಿನಲ್ಲಿ ಮಳೆಯ ಅಭಾವ ತಲೆದೋರಿದೆ. ಭತ್ತದ ಕೃಷಿಯಲ್ಲಿ 6 ತಿಂಗಳುಗಳ ಕಾಲ ಭತ್ತದ ಗದ್ದೆಯಲ್ಲಿ ನೀರನ್ನು ಶೇಖರಿಸಿಡುವ ಕಾರಣ ಅಂತರ್ಜಲ ವೃದ್ಧಿಗೂ ಸಹಕಾರವಾಗುತ್ತಿತ್ತು ಎನ್ನುವದು ಅನುಭವಿ ಕೃಷಿಕರ ಮಾತು.

ಭತ್ತವನ್ನು ಲಾಭದ ಉದ್ದೇಶದಿಂದ ಬೆಳೆಯುವದು ಸರಿಯಲ್ಲ. ಕೊಡಗಿನ ಸಾಂಪ್ರದಾಯಿಕ ಹಬ್ಬಗಳಿಗೆ ಭತ್ತದ ಕೃಷಿಯೇ ಮೂಲ ಕಾರಣ. ಕನಿಷ್ಠ ತಮ್ಮ ಮನೆ ಖರ್ಚಿಗೆ ಬೇಕಾಗುವಷ್ಟು ಭತ್ತ ಬೆಳೆಯುವದರಿಂದ ರಾಸಾಯನಿಕ ಮುಕ್ತ ಭೋಜನ ಸಾಧ್ಯ. ತಮ್ಮ ನೆರೆ ಹೊರೆಯವರಿಗೂ ಭತ್ತದ ಕೃಷಿಯಲ್ಲಿ ಸಹಕಾರ ನೀಡಿದರೆ; ಎಲ್ಲರೂ ಭತ್ತದ ಕೃಷಿಯಲ್ಲಿ ಪಾಲ್ಗೊಳ್ಳಲು ಸಾಧ್ಯ. ಕಾಡಾನೆ, ಕಾಡು ಹಂದಿ, ಮತ್ತಿತರ ಪ್ರಾಣಿಗಳ ಉಪಟಳದಿಂದ ಭತ್ತದ ಕೃಷಿ ಸವಾಲಾಗಿ ಪರಿಣಮಿಸಿದೆ. ಇದನ್ನು ಸವಾಲಾಗಿ ಸ್ವೀಕರಿಸಿದರೆ ಮಾತ್ರ ಭತ್ತದ ಕೃಷಿ ಸಾಧ್ಯ.

ಕೃಷಿಗೆ ಬೇಕಾದ ಟಿಲ್ಲರ್ ಮತ್ತಿತರ ಯಂತ್ರೋಪಕರಣಗಳಿಗೆ ಶೇ 100 ಸಹಾಯಧನ ನೀಡಿದರೆ ಮಾತ್ರ ಭತ್ತದ ಕೃಷಿಯ ಅಭಿವೃದ್ಧಿ ಸಾಧ್ಯ ಎನ್ನುತ್ತಾರೆ ನೆಲಜಿ ಗ್ರಾಮದ ಪ್ರಗತಿ ಕೃಷಿಕ ಮುಕ್ಕಾಟಿರ ವಿನಯ್.

ವರದಿ: ಪಿ.ವಿ. ಪ್ರಭಾಕರ್