ಕೂಡಿಗೆ, ಜು. 13: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಗ್ರಾಮಸ್ಥರಿಗೆ ಹಾಗೂ ಆದಿವಾಸಿ ಕೇಂದ್ರದ ನಿವಾಸಿಗಳಿಗೆ ಕೇಂದ್ರದ ಸಭಾಂಗಣ ವೊಂದರಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ವತಿಯಿಂದ ಸುಧಾರಿತ ಬೀಟ್ ಕಾನೂನು ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸೋಮವಾರ ಪೇಟೆ ಉಪ ಅಧೀಕ್ಷಕ ಸಂಪತ್ ಕುಮಾರ್, ಸರ್ಕಾರದ ಹೊಸ ಬೀಟ್ ವ್ಯವಸ್ಥೆಯಲ್ಲಿ ಆಯಾ ಎರಡು ಗ್ರಾಮಗಳನ್ನೊಳಗೊಂಡಂತೆ ಒಬ್ಬ ಹೆಡ್ ಕಾನ್ಸೆಟೇಬಲ್‍ಅನ್ನು ನೇಮಕ ಮಾಡಲಾಗಿದ್ದು, ಸಾರ್ವಜನಿಕರು ಮತ್ತು ಗ್ರಾಮಸ್ಥರು ಅಕ್ರಮ ಚಟುವಟಿಕೆಗಳು ಮತ್ತು ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಬೀಟ್ ಪೊಲೀಸರಿಗೆ ಸಹಕಾರ ನೀಡಬೇಕು ಎಂದರು.

ಕುಶಾಲನಗರ ವೃತ್ತ ನಿರೀಕ್ಷಕ ಕ್ಯಾತೆಗೌಡ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳದೆ ಸಂಬಂಧಪಟ್ಟ ಪೊಲೀಸ್ ಇಲಾಖೆಯವರಿಗೆ ತಿಳಿಸುವ ಮೂಲಕ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ನಮ್ಮೊಂದಿಗೆ ಸಹಕರಿಸಬೇಕು ಎಂದರು.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಜೆ.ಇ. ಮಹೇಶ್ ಮಾತನಾಡಿ, ಬ್ಯಾಡಗೊಟ್ಟ ಗ್ರಾಮಸ್ಥರಿಗೆ ಹಾಗೂ ಆದಿವಾಸಿಗಳಿಗೆ ಕಾನೂನಿನ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ಕಾನೂನು ಅರಿವನ್ನು ಮೂಡಿಸಿ ದರು. ಈ ಸಂರ್ದಭ ಬ್ಯಾಡಗೊಟ್ಟ ವ್ಯಾಪ್ತಿಯ ಬೀಟ್ ಪೇದೆ ಸುರೇಶ್, ಗ್ರಾಮಸ್ಥರುಗಳಾದ ಎಂ.ಆರ್. ವಾಸು, ಹಾಡಿಯ ಮುಖಂಡರುಗಳು ಬ್ಯಾಡಗೊಟ್ಟ ಗ್ರಾಮದ ವಿವಿಧ ಮಹಿಳಾ ಸಂಘಟನೆಗಳ ಮುಖ್ಯಸ್ಥರು, ಯುವಕ ಮತ್ತು ಯುವತಿ ಸಂಘದ ಪದಾಧಿ ಕಾರಿಗಳು ಸೇರಿದಂತೆ ಆದಿವಾಸಿಗಳ 328 ಕುಟುಂಬಗಳ ಸದಸ್ಯರು ಪಾಲ್ಗೊಂಡಿದ್ದರು.