ಕುಶಾಲನಗರ, ಜು. 14: ಮುಳ್ಳುಸೋಗೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸ ವಿಲೇವಾರಿಗೊಳಿಸುವ ಸಂಬಂಧ ತಾಲೂಕು ತಹಶೀಲ್ದಾರ್ ಪಿ.ಎಸ್. ಮಹೇಶ್ ನೇತೃತ್ವದಲ್ಲಿ ಕಂದಾಯ ಹಾಗೂ ಪಂಚಾಯ್ತಿ ಜನಪ್ರತಿನಿಧಿ ಗಳಿಂದ ಸ್ಥಳ ಪರಿಶೀಲನೆ ನಡೆಯಿತು. ಮುಳ್ಳುಸೋಗೆ ಗ್ರಾಮಪಂಚಾಯ್ತಿಯ ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡ ಹಿನ್ನೆಲೆ ಗುಮ್ಮ&divound; Àಕೊಲ್ಲಿಯ ಸರ್ವೆ ನಂ 5/1ರ ಸ್ಥಳ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭ ಸ್ಥಳದಲ್ಲಿದ್ದ ಇಬ್ಬರು ವ್ಯಕ್ತಿಗಳು ಉದ್ದಟತನದಿಂದ ವರ್ತಿಸಿ ಗೊಂದಲ ಉಂಟುಮಾಡಿದ ಕಾರಣ ಅಧಿಕಾರಿಗಳು ಸ್ಥಳದಿಂದ ಹಿಂತೆರಳಲು ಮುಂದಾದ ಪ್ರಸಂಗವೂ ನಡೆಯಿತು. ನಂತರ ಸ್ಥಳದಲ್ಲಿದ್ದ ಪಂಚಾಯ್ತಿ ಜನಪ್ರತಿನಿಧಿಗಳ ಕೋರಿಕೆಯೊಂದಿಗೆ ಪರಿಶೀಲನೆ ಮುಂದುವರೆಸಿದರಾದರೂ ಸ್ಥಳೀಯ ನಿವಾಸಿಗಳು ಸದರಿ ಸ್ಥಳದಲ್ಲಿ ಕಸ ವಿಲೇವಾರಿಗೊಳಿಸಲು ವಿರೋಧ ವ್ಯಕ್ತಪಡಿಸಿದ ಕಾರಣ ಅಧಿಕಾರಿಗಳು ಅರ್ಧಕ್ಕೆ ನಿಲ್ಲಿಸಿ ಹಿಂತಿರುಗಿದರು.

ಸ್ಥಳೀಯ ಎರಡು ಗುಂಪಿನ ಸದಸ್ಯರು ಅವಾಚ್ಯ ಶಬ್ಧಗಳೊಂದಿಗೆ ನಿಂದಿಸುವದರೊಂದಿಗೆ ಅಧಿಕಾರಿಗಳ ಕೆಲಸಕ್ಕೆ ಅಡ್ಡಿ ಮಾಡಿದ ಹಿನೆÀ್ನಲೆಯಲ್ಲಿ ಸ್ಥಳಕ್ಕೆ

(ಮೊದಲ ಪುಟದಿಂದ) ಪೊಲೀಸರು ಬರುವಂತಾಯಿತು. ಜನರ ಸಹಕಾರ ದೊರೆಯದಿದ್ದಲ್ಲಿ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲು ಅಸಾಧ್ಯ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದುದು ಕಂಡುಬಂತು.

ಸರ್ವೆ ಕಾರ್ಯ

ಮುಳ್ಳುಸೋಗೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕಸ ವಿಲೇವಾರಿಗೆ ಸೂಕ್ತ ಸ್ಥಳ ಪರಿಶೀಲನೆ ನಡೆಸಿದ ಕಂದಾಯ ಅಧಿಕಾರಿಗಳು 2 ಎಕರೆ ಜಾಗದ ಸರ್ವೆ ಕಾರ್ಯ ನಡೆಸಿದರು.

ಗುಮ್ಮನಕೊಲ್ಲಿಯ ಸರ್ವೆ ನಂ 5/1 ರಲ್ಲಿನ ಒಟ್ಟು 3 ಎಕರೆ ಪೈಸಾರಿ ಜಾಗದ ವ್ಯಾಪ್ತಿಯಲ್ಲಿ 2 ಎಕರೆ ಸರಕಾರಿ ಜಾಗವನ್ನು ಕಂದಾಯ ಅಧಿಕಾರಿ ನಂದಕುಮಾರ್ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆಸಲಾಯಿತು. ಕಸ ವಿಲೇವಾರಿ ಘಟಕ ಸ್ಥಾಪನೆಗೆ 1 ಎಕರೆ ಹಾಗೂ ಸ್ಮಶಾನಕ್ಕಾಗಿ 1 ಎಕರೆ ಜಾಗವನ್ನು ಗುರುತಿಸಲಾಯಿತು. ಕಸ ವಿಲೇವಾರಿಗೆ ಸೂಕ್ತ ಸ್ಥಳಾವಕಾಶಕ್ಕಾಗಿ ಮುಳ್ಳುಸೋಗೆ ಪಂಚಾಯ್ತಿ ಆಡಳಿತ ಮಂಡಳಿ ಉಪವಾಸ ಸತ್ಯಾಗ್ರಹ ನಡೆಸಿದ ಹಿನೆÀ್ನಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಕಂದಾಯ ಅಧಿಕಾರಿ ನಂದಕುಮಾರ್ ತಿಳಿಸಿದ್ದಾರೆ. ಸರ್ವೆ ಕಾರ್ಯ ಸಂದರ್ಭ ಕೆಲವು ಸ್ಥಳೀಯರು ಹಾಗೂ ಕಳೆದ ಹಲವು ವರ್ಷಗಳಿಂದ ಜಾಗದಲ್ಲಿ ನೆಲೆಸಿದ್ದ ಗ್ರಾಮಸ್ಥರು ವಿರೋಧಿಸಿದ ಹಿನ್ನೆಲೆಯಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಜೆ.ಇ. ಮಹೇಶ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.