ಮಡಿಕೇರಿ, ಜು. 14: ಮೈಸೂರು ತಾಲೂಕಿನ ಕೆ.ಆರ್. ನಗರದ ನಾಡಪ್ಪನಹಳ್ಳಿ ನಿವಾಸಿ ರೂಪಾ ಎಂಬಾಕೆಯನ್ನು 19.10.2012 ರಂದು ಕುಶಾಲನಗರ ಆನೆಕಾಡು ಅರಣ್ಯದಲ್ಲಿ ಕೊಂದು ಪರಾರಿಯಾಗಿದ್ದ ಆರೋಪಿ ಪಿರಿಯಾಪಟ್ಟಣ ಬಳಿಯ ಕೆಳಗನಹಳ್ಳಿ ನಿವಾಸಿ ಕೆ.ಎಂ. ಈಶ್ವರ ಎಂಬಾತನಿಗೆ ಇಲ್ಲಿನ 1ನೇ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಆರೋಪಿಯು ರೂಪಾಳನ್ನು ಮದುವೆಯಾಗುವದಾಗಿ ವಂಚಿಸಿದ್ದಲ್ಲದೆ, ಕೊಡಗಿಗೆ ಕರೆತಂದು ಮಾರ್ಗ ಮಧ್ಯೆ ಕೊಲೆಗೈದು ಆನೆಕಾಡುವಿನಲ್ಲಿ ಶವದ ಗುರುತು ಸಿಗದಂತೆ ಮುಖಕ್ಕೆ ಕಲ್ಲಿನಿಂದ ಜಜ್ಜಿ ಪರಾರಿಯಾಗಿದ್ದ. ಈ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡಿದ್ದ ಕುಶಾಲನಗರ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ದುಷ್ಕøತ್ಯ ಸಾಬೀತುಗೊಂಡ ಮೇರೆಗೆ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ, ರೂ. 7,500 ದಂಡ ಹಾಗೂ ಸಾಕ್ಷಿ ನಾಶಕ್ಕೆ ಯತ್ನಿಸಿದಕ್ಕಾಗಿ ಮತ್ತೆ 5 ವರ್ಷ ಕಠಿಣ ಶಿಕ್ಷೆ ಮತ್ತು ರೂ. 5 ಸಾವಿರ ದಂಡ ವಿಧಿಸಿದೆ.
ಈ ಹಣದಲ್ಲಿ ರೂ. 10 ಸಾವಿರವನ್ನು ಮೃತಳ ತಂದೆಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಧೀಶರಾದ ಡಿ. ಪವನೇಶ್ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಸರಕಾರಿ ಅಭಿಯೋಜಕರಾದ ಎಂ. ಕೃಷ್ಣವೇಣಿ ಅವರು ಈ ಸಂಬಂಧ ವಾದ ಮಂಡಿಸಿದ್ದರು.