* ಸಿದ್ದಾಪುರ, ಜು. 14: ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಯ ದುಬಾರೆ ಶಾಲೆಯ ಪಕ್ಕದಲ್ಲೇ ತೆರೆದ ಬಾವಿಯೊಂದಿದ್ದು, ಇದರ ಸಮೀಪದಲ್ಲೇ ಮಕ್ಕಳು ಆಟವಾಡುತ್ತಿದ್ದಾರೆ. ಅನಾಹುತ ಸಂಭವಿಸುವದಕ್ಕಿಂತ ಮುಂಚಿತವಾಗಿ ಬಾವಿಯನ್ನು ಮುಚ್ಚಬೇಕೆಂದು ಶಾಲೆಯ ಮುಖ್ಯೋಪಾಧ್ಯಾಯರು ಸೇರಿದಂತೆ ಗ್ರಾಮಸ್ಥರು ಇತ್ತೀಚೆಗೆ ನಡೆದ ಗ್ರಾಮ ಸಭೆಯಲ್ಲಿ ಒತ್ತಾಯಿಸಿದ್ದರು.

ಅಲ್ಲದೆ ಗ್ರಾಮ ಪಂಚಾಯತಿಯ ಗಮನಕ್ಕೆ ವಿಷಯ ತಿಳಿಸಿದರೂ ಗ್ರಾ.ಪಂ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದ್ದರು.

ಈ ಸಂದರ್ಭ ಗ್ರಾಮ ಸಭೆಯಲ್ಲಿ ಹಾಜರಿದ್ದ ಜಿ.ಪಂ. ಸದಸ್ಯೆ ಸರಿತಾ ಪೂಣಚ್ಚ ಮಾತನಾಡಿ, ವಿಷಯ ನನ್ನ ಗಮನಕ್ಕೆ ಬಂದಿದೆ. ಕೂಡಲೇ ಸಮಸ್ಯೆ ಬಗ್ಗೆ ಹರಿಸುವದಾಗಿ ಭರವಸೆ ನೀಡಿದ್ದರು.

ಇದೀಗ ಸಭೆ ನಡೆದ 20 ದಿನದೊಳಗೆ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದು ಗ್ರಾ.ಪಂ. ಮೂಲಕ ಕೆಲಸಗಳನ್ನು ಪ್ರಾರಂಭಿಸಿ, ತೆರೆದ ಬಾವಿಯನ್ನು ಸ್ವಚ್ಛಗೊಳಿಸಿ ಶಾಲೆ ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಕುಡಿಯುವ ನೀರು ಸಿಗುವಂತೆ ಮಾಡಿದ್ದಾರೆ.

ಸಿದ್ದಾಪುರ ಕ್ಷೇತ್ರದಲ್ಲಿ ಗ್ರಾಮ ಪಂಚಾಯತಿಗೆ ಮುಖ್ಯ ಮಂತ್ರಿಗಳ ವಿಶೇಷ ಅನುದಾನದ ಮೂಲಕ ರೂ. 50 ಲಕ್ಷದ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸಿದ್ದಾರೆ ಗುಹ್ಯ - ಪಳ್ಳಕೇರೆ ಸಂರ್ಪಕ ಸೇತುವೆ ಭಾಗ್ಯ ಕಲ್ಪ್ಪಿಸಿದ್ದಾರೆ

ಅವರೆಗುಂದ ಹಾಡಿಯಲ್ಲಿ 60 ವರ್ಷಗಳಿಂದ ಮೂಲ ಸೌಕರ್ಯ ಇಲ್ಲದೆ ಹಲವು ಸಮಸ್ಯೆಗಳ ಬಗ್ಗೆ ಜಿ.ಪಂ. ಸದಸ್ಯೆ ಸರಿತಾ ಸ್ಪಂದಿಸಿ ವಿದ್ಯುತ್, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಿದ್ದಾರೆ.