ಸೋಮವಾರಪೇಟೆ, ಜು. 14: ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆ ವತಿಯಿಂದ ನಡೆಸುತ್ತಿರುವ ಕಾರ್ಯಕ್ರಮಗಳನ್ನು ಗುರುತಿಸಿ ಜೇಸೀ ವಲಯ 14ರ ವಿನ್ನಿಂಗ್ ಅವಾರ್ಡ್ ನೀಡಲಾಗಿದೆ.

ಇತ್ತೀಚೆಗೆ ಯಶಸ್ವಿಯಾಗಿ ನಡೆಸಿದ ಸ್ಟಾರ್ ಸಿಂಗರ್ಸ್ ನೈಟ್ ಕಾರ್ಯಕ್ರಮಕ್ಕೆ ಜೇಸಿ ವಲಯ 14ರಿಂದ ಪ್ರಶಂಸೆ ವ್ಯಕ್ತವಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ನಡೆದ ಮಧ್ಯವಾರ್ಷಿಕ ಸಮ್ಮೇಳನ-ಸಮೃದ್ಧಿ 2017ರ ಸಮಾರಂಭದಲ್ಲಿ ವಲಯ ವ್ಯಾಪ್ತಿಯಲ್ಲಿನ ಅತ್ಯುತ್ತಮ ಕಾರ್ಯಕ್ರಮಕ್ಕೆ ನೀಡುವ ವಿನ್ನಿಂಗ್ ಅವಾರ್ಡ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದರೊಂದಿಗೆ ಸಂಸ್ಥೆಯ ಜನಪರ ಕಾರ್ಯಕ್ರಮಗಳು ಸೇರಿದಂತೆ ಜನಜಾಗೃತಿ ಶಿಬಿರಗಳನ್ನು ಆಯೋಜಿಸಿದನ್ನು ಗುರುತಿಸಿ ಪ್ರಶಸ್ತಿ ಸೇರಿದಂತೆ ಒಟ್ಟು ಬಹುಮಾನಗಳನ್ನು ನೀಡಲಾಯಿತು.

ಪ್ರಶಸ್ತಿಗಳನ್ನು ಜೂನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಭಾರತ ವಲಯ 14ರ ಅಧ್ಯಕ್ಷ ಸಿದ್ದಲಿಂಗಪ್ಪ, ಉಪಾಧ್ಯಕ್ಷ ರಿಚರ್ಡ್ ಮತಾಯಿಸ್ ಪ್ರದಾನ ಮಾಡಿದರು.

ಈ ಸಂದರ್ಭ ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ಅಧ್ಯಕ್ಷ ಬಿ.ಎಸ್. ಮನೋಹರ್, ಪ್ರಧಾನ ಕಾರ್ಯದರ್ಶಿ ಎಂ.ಎ. ರುಬೀನಾ, ಮಹಿಳಾ ಘಟಕದ ಅಧ್ಯಕ್ಷೆ ಮೀನಾ ಮಂಜುನಾಥ್, ವಲಯಾಧಿಕಾರಿ ಕೆ.ಜಿ. ಗಿರೀಶ್, ಸದಸ್ಯರುಗಳಾದ ಕೆ.ಜೆ. ಗುರುಪ್ರಸಾದ್, ಜಗದಾಂಭ ಉಪಸ್ಥಿತರಿದ್ದರು.