ಮಡಿಕೇರಿ, ಜು. 15: ತಾ. 14ರಂದು ವೀರಾಜಪೇಟೆ ನಗರದ ಬೇಟೋಳಿ ಗ್ರಾಮದ ಆನಂದರಾವ್ ಎಂಬವರಿಗೆ ಸೇರಿದ ಕಾಫಿ ಗೋದಾಮಿನಲ್ಲಿದ್ದ ಸುಮಾರು 8500 ರೂ. ಮೌಲ್ಯದ ಕಾಫಿ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ರೋಷನ್, ಉದಯ್, ಮಹೇಶ್ ಎಂಬವರು ಗಳನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸಿ ಕಳವು ಮಾಲನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ವೀರಾಜಪೇಟೆ ಉಪವಿಭಾಗದ ಡಿ.ವೈ.ಎಸ್ಪಿ. ನಾಗಪ್ಪ ಆದೇಶದ ಮೇರೆ ವೀರಾಜಪೇಟೆ ನಗರ ಠಾಣಾಧಿಕಾರಿ ಸಂತೋಷ್ ಕಶ್ಯಪ್, ಎ.ಎಸ್.ಐ. ಸುಬ್ರಮಣಿ, ಸಿಬ್ಬಂದಿಗಳಾದ ಸುನೀಲ್ ಎಂ.ಯು. ರಜತ್ ಕುಮಾರ್ ಹೆಚ್.ಜೆ. ಮುನೀರ್, ಪಿ.ಯು. ಸತೀಶ್ ಎನ್.ಹೆಚ್. ಹಾಗೂ ಚಾಲಕ ಯೋಗೇಶ್ ಭಾಗವಹಿಸಿದ್ದರು.