ಶಾಸಕ ಕೆ.ಜಿ. ಬೋಪಯ್ಯ

ವೀರಾಜಪೇಟೆ, ಜು. 15: ಗಿಡ ನೆಡುವುದು ಮರಗಳನ್ನು ಬೆಳೆಸುವ ಮೂಲಕ ಪ್ರತಿಯೊಬ್ಬರೂ ಕಾಡನ್ನು ಸಂರಕ್ಷಿಸಿದರೆ ಮಾತ್ರ ಮಳೆ, ಬೆಳೆ ಸಾಧ್ಯ ಎಂದು ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ವೀರಾಜಪೇಟೆ ಸಮೀಪದ ಕಾಕೋಟುಪರಂಬು ಪ್ರೌಢಶಾಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಯ ಸ್ವಚ್ಛ ಭಾರತ ಕೋಟಿ ವೃಕ್ಷ ಕಾರ್ಯ ವಿಸ್ತಾರಕ ಯೋಜನೆ ಹಾಗೂ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ಜಿ. ಬೋಪಯ್ಯ ಕೊಡಗಿನಲ್ಲಿ ಹಿಂದೆ ದೇವರ ಕಾಡುಗಳಿಗೆ ಯಾರೂ ಹೋಗುತ್ತಿರಲಿಲ್ಲ, ಇತ್ತೀಚಿನ ದಿನಗಳಲ್ಲಿ ದೇವರ ಕಾಡುಗಳು ನಾಶವಾಗುತ್ತಿರುವದು ವಿಷಾದನೀಯ. ಮುಂದಿನ ಯುವ ಪೀಳಿಗೆ ಪರಿಸರವನ್ನು ಉಳಿಸಿ ಬೆಳೆಸಬೇಕಾಗಿದೆ. ಹಿಂದೆ ಭತ್ತದ ಗದ್ದೆ ನಾಟಿ ಮಾಡುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ವಿಶಾಲವಾದ ಗದ್ದೆ ಪಾಳು ಬೀಳುವ ಸ್ಥಿತಿ ಬಂದಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ರಾಜ್ಯದಲ್ಲಿಯೇ ಕೊಡಗು ಜಿಲ್ಲೆ ಪರಿಸರವನ್ನು ಉಳಿಸಿಕೊಂಡಿ ರುವದು ಹೆಮ್ಮೆ ವಿಚಾರ, ಗಿಡ ಮರಗಳು ಗುಡ್ಡ ಬೆಟ್ಟಗಳ ನಾಡು ಕೊಡಗು ಪರಿಸರ ಉಳಿಸಿ ಎಂದರೆ ಸಾಲದು ಪ್ರತಿಯೊಬ್ಬರೂ ಗಿಡ ನೆಡುವ ಮೂಲಕ ಅದನ್ನು ಪೋಷಿಸಿ ಮರಗಳನ್ನು ಬೆಳೆಸಬೇಕು. ಇದರ ಬಗ್ಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಗಿಡ ಮರಗಳ ಮಹತ್ವದ ಅರಿವನ್ನು ತಿಳಿಸುವಂತಾಗ ಬೇಕು. ಸ್ವಚ್ಛ ಭಾರತ ಕೇಂದ್ರ ಸರ್ಕಾರದ ಯೋಜನೆಯಲ್ಲಿ ಪ್ರತಿಯೊಬ್ಬರೂ ಪಟ್ಟಣ ಗ್ರಾಮ, ತಮ್ಮ ಮನೆ ವಠಾರಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡಲ್ಲಿ ಗ್ರಾಮ, ಪಟ್ಟಣ ದೇಶವೇ ಸ್ವಚ್ಛ ಭಾರತ ಆಗಲು ಸಾಧ್ಯ ಎಂದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಿಂಗಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪರಿಸರ ಉಳಿಸುವದು ಹಾಗೂ ಸ್ವಚ್ಛತೆ ಕಾಪಾಡುವದು ಪ್ರತಿಯೊಬ್ಬರ ಕರ್ತವ್ಯ ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಬಿ.ಜೆ.ಪಿ. ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಬಿ. ಭಾರತೀಶ್ ಅವರು ಮಾತನಾಡಿ, ಗಾಂಧೀಜಿ ಅವರ ಕನಸಿನಂತೆ ಪ್ರಧಾನ ಮಂತ್ರಿ ದೇಶದೆಲ್ಲೆಡೆ ಹಸಿರೆ-ಉಸಿರು ಎಂಬಂತೆ ಗಿಡ ಮರಗಳನ್ನು ಬೆಳೆಸಿ ಪರಿಸರ ಉಳಿಸುವ ನಿಟ್ಟಿನಲ್ಲಿ ಸ್ವಚ್ಛತೆಗೂ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮೇವಡ ಅಚ್ಚಯ್ಯ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಕಾರ್ಯ ವಿಸ್ತಾರಕÀ ಎಂ.ಕೆ. ದೇಚಮ್ಮ, ಶಾಲಾ ಮುಖ್ಯ ಶಿಕ್ಷಕ ಪೊನ್ನೂರ ಸ್ವಾಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಿಡ ನೆಡುವ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಕೋದಂಡ ಮಂಜುಳ ಅಯ್ಯಪ್ಪ, ಬಿ.ಜೆ.ಪಿ. ಯೋಜನೆಯ ವೀರಾಜಪೇಟೆ ತಾಲೂಕು ಕಾರ್ಯ ವಿಸ್ತಾರಕÀ ಉಮನಾಥ್ ಎ. ಕೋಟಿಯನ್, ಅಪ್ಪಣ್ಣ, ಅಂಜಪರವಂಡ ಅನಿಲ್, ದಿವಾಕರ್ ಶೆಟ್ಟಿ, ಯೋಗೇಶ್ ನಾಯ್ಡು, ರಚನ್ ಮೇದಪ್ಪ ಹಾಗೂ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದ ಮುಂತಾದವರು ಭಾಗವಹಿಸಿದ್ದರು.