ಮಡಿಕೇರಿ, ಜು. 15: ಮಾಲ್ದಾರೆ ಬಾಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಇತ್ತೀಚೆಗೆ ನಡೆದ ಕರಿಮೆಣಸಿನ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೇರಿ ಸೇನೆÉ ಸಂಘಟನೆಯು ಸಂಘದ ಆಡಳಿತ ಮಂಡಳಿಯ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುತ್ತಿದೆ ಎಂದು ಸಂಘÀದ ಕೆಲವು ಸದಸ್ಯರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘÀದ ಸದಸ್ಯ ಪಿ.ಸಿ. ವಿಷ್ಣು, 104 ಚೀಲ ಕರಿಮೆಣಸು ದುರುಪಯೋಗ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆÉ ನಡೆದು ಆರೋಪಿಯನ್ನು ಬಂಧಿಸಲಾಗಿದೆ. ಆದರೂ, ಸಂಘದ ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕ ತೇಜೋವಧೆ ಮಾಡುವ ಕಾರ್ಯದಲ್ಲಿ ತೊಡಗಿರುವದು ಖಂಡನೀಯವೆಂದರು.
ಸಂಘಕ್ಕೆ ಸಂಬಂಧಪಡದೇ ಇರುವ ಕಾವೇರಿಸೇನೆಯ ಪದಾಧಿಕಾರಿಗಳು ವಿನಾಕಾರಣ ಪ್ರಕರಣದಲ್ಲಿ ಮೂಗು ತೂರಿಸಿ ಸಂಘದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಜಿಲ್ಲಾ ಅಪರಾಧ ಪತ್ತೆದಳದಿಂದ ಪಾರದರ್ಶಕ ರೀತಿಯಲ್ಲಿ ತನಿಖೆ ನಡೆದಿದ್ದರೂ ಕೆಲವರು ಪ್ರಯೋಜನಕ್ಕೆ ಬಾರದ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರವೃತ್ತಿ ಹೀಗೇ ಮುಂದುವರಿದರೆ ಸದಸ್ಯರೇ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ವಿಷ್ಣು ಎಚ್ಚರಿಕೆ ನೀಡಿದರು.
ಈಗಾಗಲೇ ಸಿಬ್ಬಂದಿ ಮೈಕೆಲ್ ಎಂಬವರನ್ನು ಬಂಧಿಸಲಾಗಿದ್ದು, ಪ್ರಕರಣದಲ್ಲಿ ಶಾಮೀಲಾಗಿರುವ ಇತರರನ್ನು ಕೂಡ ಪತ್ತೆ ಹಚ್ಚಬೇಕೆಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಸದಸ್ಯರುಗಳಾದ ಎಸ್.ಕೆ. ಯತೀಶ್, ಎಂ.ಸಿ. ಮೇದಪ್ಪ, ಟಿ.ಎನ್. ಗಣೇಶ್, ಪಿ.ಡಿ. ಕುಶಾಲಪ್ಪ ಹಾಗೂ ಎನ್.ಕೆ. ದೇವಯ್ಯ ಉಪಸ್ಥಿತರಿದ್ದರು.