ಆಲೂರು-ಸಿದ್ದಾಪುರ, ಜು. 15: ಇಲ್ಲಿಗೆ ಸಮೀಪದ ಮಾಲಂಬಿ ಬೆಟ್ಟದ ತುದಿಯಲ್ಲಿಂದು ಸಂಜೆ ಗಜ ದರ್ಶನ..., ಕಲ್ಲುಬಂಡೆಯ ತುತ್ತ ತುದಿಯಲ್ಲಿ ಮರಿ ಆನೆ ಸೇರಿದಂತೆ 5 ಆನೆಗಳ ಹಿಂಡು ಒಂದರ ಹಿಂದೆ ಒಂದರಂತೆ ನಡೆದುಕೊಂಡು ಹೋಗುತ್ತಿದ್ದ ದೃಶ್ಯ ನೋಡುಗರನ್ನು ಸೆಳೆಯಿತು. ಬೆಟ್ಟದ ಕೆಳಗಿನಿಂದ ಈ ಸುಂದರ ದೃಶ್ಯವನ್ನು ವೀಕ್ಷಿಸಿದರಲ್ಲದೆ ದೂರದಿಂದಲೇ ಫೋಟೋ ಕ್ಲಿಕ್ಕಿಸಿದರು. -ದಿನೇಶ್ ಮಾಲಂಬಿ.