ವಿರಾಜಪೇಟೆ, ಜು. 15: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲಿಷ್ಠ ಸಂಘಟನೆಗೆ ಜಾತ್ಯತೀತವಾಗಿ ಎಲ್ಲರೂ ಒಮ್ಮತದಿಂದ ದುಡಿಯಬೇಕು. ಪಕ್ಷದ ಕಾರ್ಯಕರ್ತರ ನಡುವಿನ ಹಿಂದಿನ ಭಿನ್ನಾಭಿಪ್ರಾಂiÀiವನ್ನು ಮರೆತು ಸಂಘಟಿತರಾಗಬೇಕು ಎಂದು ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಶಿವು ಮಾದಪ್ಪ ಹೇಳಿದರು.
ವೀರಾಜಪೇಟೆಯ ಪಕ್ಷದ ಕಚೇರಿಯಲ್ಲಿ ಇಂದು ಕಾರ್ಯ ಕರ್ತರನ್ನುದ್ದೇಶಿಸಿ ಮಾತನಾಡಿದ ಶಿವು ಮಾದಪ್ಪ ಅವರು, ಮುಂದಿನ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿದಂತೆ ಈಗಲಿಂದಲೇ ಬೂತ್ ಮಟ್ಟದಲ್ಲಿ ಸಮಿತಿಯನ್ನು ರಚಿಸಿ ತಳಮಟ್ಟದಿಂದಲೇ ಕಾರ್ಯಕರ್ತರು ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ವಿರಾಜಪೇಟೆ, ಜು. 15: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲಿಷ್ಠ ಸಂಘಟನೆಗೆ ಜಾತ್ಯತೀತವಾಗಿ ಎಲ್ಲರೂ ಒಮ್ಮತದಿಂದ ದುಡಿಯಬೇಕು. ಪಕ್ಷದ ಕಾರ್ಯಕರ್ತರ ನಡುವಿನ ಹಿಂದಿನ ಭಿನ್ನಾಭಿಪ್ರಾಂiÀiವನ್ನು ಮರೆತು ಸಂಘಟಿತರಾಗಬೇಕು ಎಂದು ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಶಿವು ಮಾದಪ್ಪ ಹೇಳಿದರು.
ವೀರಾಜಪೇಟೆಯ ಪಕ್ಷದ ಕಚೇರಿಯಲ್ಲಿ ಇಂದು ಕಾರ್ಯ ಕರ್ತರನ್ನುದ್ದೇಶಿಸಿ ಮಾತನಾಡಿದ ಶಿವು ಮಾದಪ್ಪ ಅವರು, ಮುಂದಿನ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿದಂತೆ ಈಗಲಿಂದಲೇ ಬೂತ್ ಮಟ್ಟದಲ್ಲಿ ಸಮಿತಿಯನ್ನು ರಚಿಸಿ ತಳಮಟ್ಟದಿಂದಲೇ ಕಾರ್ಯಕರ್ತರು ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ಸಮಿತಿಯೊಂದಿಗೆ ನೇರವಾಗಿ ಚರ್ಚಿಸಿ ಪಕ್ಷದ ವರಿಷ್ಠರ ಆದೇಶ ನಿರ್ಧಾರಗಳಿಗೆ ಬದ್ಧರಾಗಬೇಕು, ಪಕ್ಷದ ಸಮಾವೇಶದ ನಂತರ ಕಾರ್ಯಕರ್ತರು ಮನೆ ಮನೆಗೆ ತೆರಳಿ ಈಗಿನ ಸರಕಾರದ ಸಾಧನೆಗಳ ಕುರಿತು ಅರಿವು ಮೂಡಿಸಬೇಕು ಎಂದರು.
ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ ಮಾತನಾಡಿ, ಪಕ್ಷದ ವರಿಷ್ಠರು, ಪ್ರಮುಖರಿಗೆ, ಕಾರ್ಯಕರ್ತರು ಪಕ್ಷದ ಸಂಘಟನೆಯಲ್ಲಿ ಪರಸ್ಪರ ಸಹಕರಿಸ ಬೇಕು. ಪಕ್ಷದ ಸಂಘಟನೆಯಲ್ಲಿ ಒಗ್ಗಟ್ಟನ್ನು ತೋರಿಸಿ ಪಕ್ಷದ ಬಲ ವರ್ಧನೆಗೆ ಮುಂದಾಗಬೇಕು ಎಂದು ಹೇಳಿದರು.
ಪಕ್ಷದ ಜಿಲ್ಲಾ ಸಮಿತಿಯ ಕಾನೂನು ವಿಭಾಗದ ಡಿ.ಸಿ. ಧ್ರುವ ಮಾತನಾಡಿ, ವರಿಷ್ಠರು ಸೂಚಿಸುವ ಪಕ್ಷದ ರಾಜ್ಯ, ಜಿಲ್ಲಾ, ತಾಲೂಕು, ಬ್ಲಾಕ್ ಮಟ್ಟದ ನಾಯಕತ್ವವನ್ನು ಕಾರ್ಯಕರ್ತರು ಅವಿರೋಧವಾಗಿ ಬೆಂಬಲಿಸಬೇಕು, ಗೌರವಿಸಬೇಕು ಎಂದು ಹೇಳಿದರು.
ಈ ಕಾರ್ಯಕರ್ತರ ಸಭೆಯಲ್ಲಿ ತಾ. 30ರಂದು ವೀರಾಜಪೇಟೆ ಮಹಿಳಾ ಸಮಾಜದಲ್ಲಿ ಬ್ಲಾಕ್ ಮಟ್ಟದ ಪಕ್ಷದ ಸಮಾವೇಶ ನಡೆಸುವಂತೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಬ್ಲಾಕ್ ಸಮಿತಿಯ ಉಪಾಧ್ಯಕ್ಷರುಗಳಾದ ಮಾಳೇಟಿರ ಬೆಲ್ಲು ಬೋಪಯ್ಯ, ಪಿ.ಎ.ಹನೀಫ್, ವಕ್ತಾರರಾದ ಎಂ.ಎಸ್. ಪೂವಯ್ಯ, ಎಂ.ಎಸ್. ವೆಂಕಟೇಶ್, ನಗರ ಸಮಿತಿ ಅಧ್ಯಕ್ಷ ಜಿ.ಜಿ.ಮೋಹನ್, ಕಾರ್ಯ ದರ್ಶಿ ಎಂ.ಎಂ.ಶಶಿಧರನ್, ಸಿ.ಬಿ.ರವಿ, ತಾಲೂಕು ಪಂಚಾಯಿತಿ ಸದಸ್ಯ ಮಾಳೇಟಿರ ಪ್ರಶಾಂತ್, ಜೋನಲ್ ಅಧ್ಯಕ್ಷರುಗಳು, ಬ್ಲಾಕ್ನ ವಿವಿಧೆಡೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.