*ಗೋಣಿಕೊಪ್ಪಲು, ಜು. 15: ಪ್ರತಿಯೊಬ್ಬರು ಶಿಕ್ಷಣ ಪಡೆದುಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ದೇಶದ ಅಭಿವೃದ್ದಿ ಸಾಧÀ್ಯ ಎಂದು ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಭಾರತೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ತಿತಿಮತಿ ಪ್ರೌಢಶಾಲೆ ಜಗದೀಶ್ ಚಂದ್ರಬೋಸ್ ವಿಜ್ಞಾನ ಸಭಾಂಗಣದಲ್ಲಿ ನಡೆದ ಮಹಾಸಂಪರ್ಕ ಅಭಿಯಾನ ಮತ್ತು ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕೃಷಿ ಪ್ರಧಾನ ಭಾರತ ಪ್ರಬಲವಾಗಿ ಬೆಳೆಯಲು ಶಿಕ್ಷಣದಿಂದ ಮಾತ್ರ ಸಾಧ್ಯ. ದೇಶಗಳು ಇಂದು ಪೈಪೋಟಿಗೆ ಬಿದ್ದು, ಪ್ರಪಂಚದ ನಾಯಕತ್ವಕ್ಕಾಗಿ ಹೋರಾಡುತ್ತಿದೆ. ಆದರೆ ಭಾರತ ಇದೆಲ್ಲವನ್ನು ಮೆಟ್ಟಿ ನಿಂತು ಬಹು ಎತ್ತರಕ್ಕೆ ಬೆಳೆಯುತ್ತಿದೆ. ದೇಶದ ಪ್ರಧಾನಿಯ ನಾಯಕತ್ವವೆ ಭಾರತಕ್ಕೆ ಹೆಚ್ಚು ಗೌರವ ಸಿಗಲು ಕಾರಣವಾಗಿದೆ ಎಂದು ಹೇಳಿದರು.

ಮಂಗಳೂರು ಕ್ಷೇತ್ರ ಸಾಂಘಿಕ ಪ್ರಚಾರಕ ಶಿವನಂದ್ ಕೋಟಿಯಾಲ ಮಾತನಾಡಿ, ಬೆವರು ಸುರಿಸಿದರೆ ರೋಗ ಹರಡುವದಿಲ್ಲ. ಹಿಂದೆ ಹಿರಿಯರು ಶ್ರಮ ಪಟ್ಟು ದುಡಿಯುತ್ತಿದ್ದರು. ಇದೀಗ ದುಡಿಮೆಗಳಿಗೆ ಯಂತ್ರಗಳು ಬಂದ ನಂತರ ಮನುಷ್ಯ ಸೋಮಾರಿಯಾಗುತ್ತಿದ್ದಾನೆÉ. ಹೀಗಾಗಿ ಯೋಗಗಳ ಮೊರೆ ಹೋಗಬೇಕಾಗಿದೆ ಎಂದರು. ತಾಲೂಕು ವೈದ್ಯಾಧಿಕಾರಿ ಯತಿರಾಜ್ ಮಾತನಾಡಿ, ರಕ್ತ ಹೀನತೆಯಿಂದ ನೆನಪಿನ ಶಕ್ತಿ ಕುಂದುತ್ತದೆ. ತರಕಾರಿ, ಸೊಪ್ಪು, ಕಾಯಿ, ಪಲ್ಯಗಳನ್ನು ಸೇವಿಸುವದರಿಂದ ರಕ್ತ ಹೀನತೆಯನ್ನು ತಡೆಗಟ್ಟಬಹುದು.

ಆರ್ಟ್ ಆಫ್ ಲಿವಿಂಗ್‍ನ ಯೋಗಗುರು ಶಾಂತೆಯಂಡ ಮಧು ಮಾಚಯ್ಯ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ನಡೆಸಿ, ಯೋಗದ ಬಗ್ಗೆ ಮಾಹಿತಿ ನೀಡಿದರು.

ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಅವರು ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪುಟ್ಬಾಲ್ ಹಾಗೂ ವಾಲಿಬಾಲ್ ವಿತರಿಸಿದರು.

ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಜಿ.ಪಂ. ಮಾಜಿ ಅಧ್ಯಕ್ಷ ಶಿವಪ್ಪ, ಆರ್.ಎಂ.ಸಿ. ಸದಸ್ಯ ಗುಮ್ಮಟಿರ ಕಿಲನ್ ಗಣಪತಿ, ಹೆಚ್.ಎನ್. ಮೋಹನ್ ರಾಜ್, ತಿತಿಮತಿ ಗ್ರಾ.ಪಂ. ಸದಸ್ಯ ಹಾಗೂ ಸ್ಥಾನೀಯ ಸಮಿತಿ ಅಧ್ಯಕ್ಷ ಎನ್.ಎನ್. ಅನೂಪ್, ತಾ.ಪಂ. ಮಾಜಿ ಅಧ್ಯಕ್ಷೆ ರಾಣಿ ನಾರಾಯಣ, ಗೋಣಿಕೊಪ್ಪ ಗ್ರಾ.ಪಂ. ಸದಸ್ಯರುಗಳಾದ ನೂರೇರ ರತಿ ಅಚ್ಚಪ್ಪ, ರಾಮಕೃಷ್ಣ, ಕುಲ್ಲಚಂಡ ಬೋಪಣ್ಣ, ಸುರೇಶ್ ರೈ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರಾಜಣ್ಣ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ದಿನೇಶ್, ಪ್ರಮುಖರಾದ ಗಾಣಂಗಡ ಸುಂದರಿ, ಮಾಚಮಾಡ ಅನಿತಾ ಚಂಗಪ್ಪ ಉಪಸ್ಥಿತರಿದ್ದರು.