ಕೂಡಿಗೆ, ಜು. 15: ಸಮೀಪ ಹೆಬ್ಬಾಲೆ ಗ್ರಾಮ ಪಂಚಾಯಿತಿಯಲ್ಲಿ ಮಾಸಿಕ ಸಭೆಯು ಅಧ್ಯಕ್ಷೆ ಲತಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
14ನೇ ಹಣಕಾಸಿನ ಯೋಜನೆ ವಿಚಾರಗಳ ಬಗ್ಗೆ ಚರ್ಚೆ ಪ್ರಾರಂಭ ಗೊಂಡು ಆಯಾ ವಾರ್ಡುಗಳ ಕಾಮಗಾರಿಗಳನ್ನು ನಡೆಸುವ ಬಗ್ಗೆ ಚರ್ಚೆ ನಡೆಸಿ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ನೀಡಲಾಯಿತು. ಗ್ರಾಮದಲ್ಲಿರುವ ಮಳಿಗೆಗಳ ಮರು ಹರಾಜು ಮಾಡುವಂತೆ ತೀರ್ಮಾನ ಕೈಗೊಳ್ಳ ಲಾಯಿತು. ಅಲ್ಲದೆ, ಪಂಚಾಯಿತಿ ಯಲ್ಲಿ 14 ಜನ ಸದಸ್ಯರಿದ್ದು ತಾಲೂಕು ಪಂಚಾಯಿತಿಯಿಂದ ಹೆಬ್ಬಾಲೆ ಗ್ರಾ.ಪಂ.ಗೆ 7 ಮನೆಗಳು ಮಾತ್ರ ಮಂಜೂರಾಗಿದ್ದು, ತಾಲೂಕಿನ ಬೇರೆ ಗ್ರಾಮ ಪಂಚಾಯಿತಿಗಳಿಗೆ 25ಕ್ಕಿಂತ ಅಧಿಕ ಮನೆಗಳು ಮಂಜೂರಾಗಿವೆ. ಇದನ್ನು ಆಕ್ಷೇಪಿಸಿ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗೆ ಪತ್ರ ಬರೆಯಲು ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಯಿತು. ಅಲ್ಲದೆ, ಏಪ್ರಿಲ್ನಿಂದ ಜುಲೈವರೆಗಿನ ಬೀದಿ ದೀಪ ದುರಸ್ತಿ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಅಧಿಕ ಖರ್ಚು ವೆಚ್ಚಗಳನ್ನು ಮಾಡಿದ್ದಾರೆ. ಇದರ ಖರ್ಚು ವೆಚ್ಚಗಳನ್ನು ಲೆಕ್ಕ ಪರಿಶೀಲಿಸಲು ಮುಂದಾಗುವಂತೆ ಪಿಡಿಓಗೆ ಕೆಲವು ಸದಸ್ಯರು ಒತ್ತಾಯಿಸಿದರು.
ಸಾರ್ವಜನಿಕರ ಅರ್ಜಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಮನಬಂದಂತೆ ನಿರಾಕ್ಷೇಪಣಾ ಪತ್ರವನ್ನು ನೀಡಬಾರ ದೆಂದು ಸದಸ್ಯ ಹೆಚ್.ಟಿ. ದಿನೇಶ್ ಸಭೆಯಲ್ಲಿ ತಿಳಿಸಿದರು. ಇವರ ಮಾತಿಗೆ ಎಲ್ಲಾ ಸದಸ್ಯರುಗಳು ದನಿ ಗೂಡಿಸಿದರು. ಈಗಾಗಲೇ ಮಂಜೂ ರಾಗಿರುವ ಮನೆಗಳನ್ನು ಅವರವರಿಗೆ ಅನುಕೂಲವಾಗುವಂತೆ ನಿರ್ಮಿಸಿ ಕೊಳ್ಳಲು ಬಿಡುಗಡೆಯ ಹಣದ ಬಾಬ್ತು ನೀಡುವದರ ಜೊತೆಗೆ ಸ್ಥಳಗಳನ್ನು ಪರಿಶೀಲಿಸಿ ನೀಡುವದು. ಕೊಟ್ಟಿಗೆ ನಿರ್ಮಿಸಿಕೊಳ್ಳಲು ಆಯ್ಕೆಯಾದ ಫಲಾನುಭವಿಗಳಿಗೆ ಇನ್ನೂ ಹೆಚ್ಚಿನ ಹಣ ನೀಡಲು ಮೇಲಾಧಿಕಾರಿಗಳಿಗೆ ಪತ್ರ ಬರೆಯುವದು ಸೇರಿದಂತೆ ಗ್ರಾಮಗಳ ಪ್ರಗತಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.
ಆಯಾ ವಾರ್ಡಿನ ಸದಸ್ಯರು ತಮ್ಮ ವಾರ್ಡಿನ ಸಮಸ್ಯೆಗಳನ್ನು ಸವಿಸ್ತಾರವಾಗಿ ಸಭೆಯಲ್ಲಿ ತಿಳಿಸಿದರು. ಇವುಗಳಿಗೆ ಕ್ರಮಬದ್ಧವಾಗಿ ಪರಿಹಾರಕ್ಕೆ ಕಾರ್ಯೋನ್ಮುಖ ರಾಗಬೇಕೆಂದು ಆಯಾ ವಾರ್ಡಿನ ಸದಸ್ಯರು ಸಭೆಯಲ್ಲಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಲತಾ ಮಾತನಾಡುತ್ತಾ ಮಾಸಿಕ ಸಭೆಯ ಎಲ್ಲಾ ಸದಸ್ಯರುಗಳ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ನಿಯಮದನು ಸಾರವಾಗಿ ಗ್ರಾಮ ಪಂಚಾಯಿತಿಯ ಗ್ರಾಮಗಳ ಅಭಿವೃದ್ಧಿಗೆ ಸದಸ್ಯರಗಳ ಸಹಕಾರ ಪಡೆದು ಕಾರ್ಯ ನಿರ್ವಹಿಸಲಾಗುವದು ಎಂದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್, ಸಭೆಗೆ ಸರಕಾರದ ಯೋಜನೆಗಳನ್ನು ಸಭೆಗೆ ಸವಿಸ್ತಾರವಾಗಿ ತಿಳಿಸಿದರು. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಯಡಿಯಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ಸಭೆಗೆ ಮಾಹಿತಿ ನೀಡಿ ಸಾರ್ವಜನಿಕರಿಂದ ಬಂದ ಅರ್ಜಿಗಳ ಮಾಹಿತಿಯನ್ನು ಸಭೆಗೆ ಮಂಡಿಸಿದರು. 14ನೇ ಹಣಕಾಸಿನ ಯೋಜನೆಯ ನಿಯಮದನುಸಾರ ಕಾಮಗಾರಿಗಳನ್ನು ಕೈಗೊಳ್ಳಲಾಗುವದು ಎಂದು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಸರೋಜಮ್ಮ ಸದಸ್ಯರುಗಳಾದ ಹೆಚ್.ಎನ್. ಶಿವನಂಜಪ್ಪ, ವೆಂಕಟೇಶ್, ದೇವಮ್ಮ, ಹೆಚ್.ಎಸ್. ಚೇತನ್, ಮಧುಸೂದನ್, ಹೆಚ್.ಟಿ. ದಿನೇಶ್, ಅಶೋಕ್, ಹೆಚ್.ಆರ್. ವಿಜಯ್, ಪ್ರಮೀಳಾ, ಪ್ರೇಮ, ಮಂಜುಳಾ, ಪದ್ಮ ಇದ್ದರು.