ಗುಡ್ಡೆಹೊಸೂರು, ಜು. 15 : ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ಸೊಂದಕ್ಕೆ ಬೈಕ್‍ವೊಂದು ಸ್ಪರ್ಶಗೊಂಡ ವೇಗದಲ್ಲಿ ಸವಾರ ರಸ್ತೆಯಿಂದ ಪಕ್ಕಕ್ಕೆ ಎಸೆಯಲ್ಪಟ್ಟರೆ, ಹಿಂಬದಿಯಲ್ಲಿ ಕುಳಿತಿದ್ದ ಆತನ ಅಕ್ಕ ಬಸ್ ಹಿಂಭಾಗದ ಎರಡು ಚಕ್ರಗಳ ನಡುವೆ ಸಿಲುಕಿ ಪವಾಡ ಸದೃಶವೆಂಬಂತೆ ಬದುಕುಳಿದ ಅಚ್ಚರಿಯ ಪ್ರಸಂಗ ನಡೆದಿದೆ.ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ತಾ. 14 ರಂದು ಬಸ್ ಮತ್ತು ಬೈಕ್‍ನ ನಡುವೆ ಅಫಘಾತ ನಡೆದು ಭಾರಿ ಅನಾಹುತ ತಪ್ಪಿದಂತಾಯಿತು.

ಗುಡ್ಡೆಹೊಸೂರು ಬೊಳ್ಳೂರು ಗ್ರಾಮದ ನಿವಾಸಿ ರೀಟಾ ಮತ್ತು ಸಹೋದರ ಕುಶಾಲನಗರ ಕಡೆಯಿಂದ ತಮ್ಮ ಮನೆ ಬೊಳ್ಳ್ಳೂರಿಗೆ ಬೈಕ್ (ಕೆ.ಎ.12.ಜೆ.5074)ನಲ್ಲಿ ಬರುತ್ತಿದ್ದರು. ಈ ಸಂದÀರ್ಭ ಅವರ ಮನೆಗೆ ಹೋಗಲು ಇಲ್ಲಿನ ಶ್ರೀ ಚೌಡೇಶ್ವರಿ ದೇವಸ್ಥಾನ ರಸ್ತೆಯಲ್ಲಿ ತಿರುಗುವ ಸಂದÀರ್ಭ ರೀಟಾ ಅವರ ತಮ್ಮ ನವನೀತ್ (21) ಹಿಂಬದಿಯಿಂದ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್‍ಗೆ (ಕೆ.ಎ. 13. 2048) ಡಿಕ್ಕಿ ಪಡಿಸಿದ್ದಾನೆ. ಈ ಸಂದÀರ್ಭ ಬಸ್‍ನ ಚಾಲಕ ಮಂಜು ಅಪÀಘಾತ ತಪ್ಪಿಸಲು ಬಸ್ ಅನ್ನು ರಸ್ತೆಯ ಮತ್ತೊಂದು ದಿಕ್ಕಿಗೆ ಚಾಲಿಸಿದ್ದಾರೆ.

ಬಸ್‍ಗೆ ಬೈಕ್ ಡಿಕ್ಕಿಯಾದ ಸಂದÀರ್ಭ ನವನೀತ್ ಒಂದು ಭಾಗದಲ್ಲಿ ಬಿದ್ದಿದ್ದರೆ, ರೀಟಾ ಬಸ್‍ನ ಕೆಳಭಾಗದಲ್ಲಿ ಸಿಲುಕಿದ್ದರು. ಈ ಸಂದÀರ್ಭ ನವನೀತ್ ಬಸ್‍ನ ಕೆಳಭಾಗದಲ್ಲಿ ಸಿಕ್ಕಿಕೊಂಡ ತನ್ನ ಅಕ್ಕಳನ್ನು ಬಚಾವು ಮಾಡುತ್ತಾರೆ. ಕ್ಷಣ ಮಾತ್ರದಲ್ಲಿ ನಡೆದ ಈ ಎಲ್ಲಾ ಘಟನೆಗಳು ಸನಿಹದ ಕ್ರೌನ್ ಹೊಟೇಲ್‍ನ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಮುಖ್ಯ ಪೇದೆ ಸಹದೇವ ಸ್ಥಳಪೀಶೀಲನೆ ನಡೆಸಿದ್ದು, ಎರಡು ವಾಹನಗಳನ್ನು ಠಾಣೆಗೆ ತರಲಾಗಿದೆ.