ಗೋಣಿಕೊಪ್ಪಲು, ಜು. 15: ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗೆ ದಂಡ ಶಿಕ್ಷೆ ವಿಧಿಸಿ ಪೊನ್ನಂಪೇಟೆ ಸಿವಿಲ್ ಮತ್ತು ಜೆ.ಎಂ.ಎ¥sóï.ಸಿ. ನ್ಯಾಯಾಲಯ ತೀರ್ಪು ನೀಡಿದೆ. ಬಲ್ಯಮುಂಡೂರು ಗ್ರಾಮದ ಸಿ.ಬಿ. ಸೀತಮ್ಮ ದಂಡಕ್ಕೆ ಒಳಗಾದ ಆರೋಪಿಯಾಗಿದ್ದಾರೆ.

ವಿವರ: 20.3.2013 ರಂದು ಸಿ.ಬಿ. ಸೀತಮ್ಮ ಎಂಬವರು ಸುಳುಗೋಡು ಗ್ರಾಮದ ಮಲ್ಲಂಡ ಪಿ. ಬೋಪಯ್ಯ ಎಂಬವರಿಂದ ಸಾಲವಾಗಿ ರೂ. 5,00,000 ಪಡೆದುಕೊಂಡಿದ್ದರು. ಹಣ ಮರು ಪಾವತಿಗೆ ನೀಡಿದ್ದ ಎಸ್.ಬಿ.ಎಂ. ಬ್ಯಾಂಕಿನ ಚೆಕ್ಕು ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಬೋಪಯ್ಯ ಪೆÇನ್ನಂಪೇಟೆ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಪೆÇನ್ನಂಪೇಟೆ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶ ಬಿ.ಕೆ. ಮನು, ಆರೋಪಿ ಸಿ.ಬಿ. ಸೀತಮ್ಮ ಅವರಿಗೆ ಶಿಕ್ಷೆ ನೀಡಿ ತೀರ್ಪು ಘೋಷಿಸಿದರು. ಮಲ್ಲಂಡ ಪಿ. ಬೋಪಯ್ಯ ಅವರಿಗೆ ದಂಡವಾಗಿ ರೂ. 5,20,000 ವನ್ನು ಮತ್ತು ಸರಕಾರಕ್ಕೆ ವೆಚ್ಚವಾಗಿ ರೂ. 10,000 ಪಾವತಿ ಮಾಡುವಂತೆ ಮತ್ತು ತಪ್ಪಿದ್ದಲ್ಲಿ ಆರು ತಿಂಗಳು ಜೈಲು ಶಿಕ್ಷೆಯನ್ನು ಅನುಭವಿಸುವಂತೆ ತೀರ್ಪುನೀಡಿದೆ. ಪಿರ್ಯಾದುದಾರರ ಪರವಾಗಿ ವಕೀಲ ಮಚ್ಚಮಾಡ ಟಿ. ಕಾರ್ಯಪ್ಪ ವಾದ ಮಂಡಿಸಿದರು.