ನಾಪೆÉÇೀಕ್ಲು, ಜು. 15: ನಾಪೆÉÇೀಕ್ಲು ಪಟ್ಟಣದಲ್ಲಿ ಲೈಸನ್ಸ್ ಇಲ್ಲದೆ ವಾಹನ ಚಲಾಯಿಸುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ನಾಪೆÉÇೀಕ್ಲು ಪೆÇಲೀಸ್ ಠಾಣಾಧಿಕಾರಿ ಬಿ.ಎಸ್. ವೆಂಕಟೇಶ್ ಎಚ್ಚರಿಸಿದ್ದಾರೆ.
ನಾಪೆÉÇೀಕ್ಲು ಭಗವತಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಪೆÇಲೀಸ್ ಬೀಟ್ ಸಭೆಯಲ್ಲಿ ಅವರು ಮಾತನಾಡಿದರು. ಪ್ರತೀ ತಿಂಗಳು ಬೀಟ್ ಸಭೆ ನಡೆಸಲು ಜಿಲ್ಲಾ ಪೆÇಲೀಸ್ ಉನ್ನತಾಧಿಕಾರಿಗಳು ಸೂಚನೆ ನೀಡಿದ್ದಾರೆ. ನಾಪೆÉÇೀಕ್ಲು ಪೆÇಲೀಸ್ ಠಾಣಾ ಸರಹದ್ದಿಗೆ ಸುಮಾರು 31 ಗ್ರಾಮಗಳು ಒಳಪಡುತ್ತವೆ. ಸಿಬ್ಬಂದಿ ಕೊರತೆಯಿಂದ ಆರು ಗ್ರಾಮಗಳಿಗೆ ಓರ್ವ ಬೀಟ್ ಪೆÇಲೀಸ್ ಅನ್ನು ನೇಮಿಸಲಾಗಿದೆ. ಒಟ್ಟು 18 ಪೆÇಲೀಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದ ಅವರು, ಮುಂದಿನ ದಿನಗಳಲ್ಲಿ ಪ್ರತೀ ಗ್ರಾಮಕ್ಕೆ ಓರ್ವ ಬೀಟ್ ಪೆÇಲೀಸ್ ನೇಮಕ ಮಾಡಲಾಗುವದು ಎಂದು ಹೇಳಿದರು.
ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ಹೊರ ರಾಜ್ಯಗಳಿಂದ ಬಂದ ಸುಮಾರು 9 ಸಾವಿರ ಕೂಲಿ ಕಾರ್ಮಿಕರ ಹೆಸರನ್ನು ನೋಂದಾಯಿಸಿಕೊಳ್ಳಲಾಗಿದೆ. ಇನ್ನೂ ನೋಂದಾಯಿಸದ ಬೇರೆ ರಾಜ್ಯಗಳ ಕೂಲಿ ಕಾರ್ಮಿಕರ ಹೆಸರನ್ನು ಕೂಡಲೇ ನೋಂದಾಯಿಸಬೇಕೆಂದು ಅವರು ಮನವಿ ಮಾಡಿದರು. ಅಸ್ಸಾಂ ಮತ್ತು ಬಾಂಗ್ಲಾದೇಶದಿಂದ ಬಂದಿರುವ ಕಾರ್ಮಿಕರ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಮಾಲೀಕರಿಗೆ ಸೂಚಿಸಿದರು.
ಪಟ್ಟಣದಲ್ಲಿನ ಟ್ರಾಫಿಕ್ ಸಮಸ್ಯೆಯ ಬಗ್ಗೆ ಗ್ರಾಮಸ್ಥರಾದ ಮುಂಡಂಡ ಶಾಂತ, ಕುಂದೈರಿರ ರಾಜು ದೇವಯ್ಯ, ಎನ್.ಎಸ್. ರವಿಶಂಕರ್, ಕುಂಬಂಡ ಕೇಶವ, ಮಿಟ್ಟು, ಕೊಂಬಂಡ ವಿಠಲ ಮಾತನಾಡಿದರು. ಇದಕ್ಕೆ ಉತ್ತರಿಸಿದ ಠಾಣಾಧಿಕಾರಿ ಪಟ್ಟಣದಲ್ಲಿ ಇನ್ನು ಮುಂದೆ ಟ್ರಾಫಿಕ್ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಶಿವಚಾಳಿಯಂಡ ಜಗದೀಶ್, ಪೆÇಲೀಸ್ ಸಿಬ್ಬಂದಿಗಳಾದ ಭವಾನಿ, ಪ್ರತಿಮಾ, ಅಶ್ರಫ್ ಇದ್ದರು.