* ಗೋಣಿಕೊಪ್ಪ, ಜು. 15: ಸಂಸದರ ಅನುದಾನದಿಂದ ನಾಪೋಕ್ಲು ನಿವಾಸಿ ವಿಶೇಷ ಚೇತನ ಟಿ.ಕೆ. ಲವ ಅವರಿಗೆ ದ್ವಿಚಕ್ರ ವಾಹವನ್ನು ಸಂಸದ ಪ್ರತಾಪ್ ಸಿಂಹ ನೀಡಿದರು.
ಪೊನ್ನಂಪೇಟೆ ತಾ.ಪಂ. ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದರು ದ್ವಿಚಕ್ರ ವಾಹನವನ್ನು ವಿಶೇಷ ಚೇತನ ಲವ ಅವರಿಗೆ ವಿತರಿಸಿದರು.
ಈ ಸಂಧರ್ಭ ಶಾಸಕ ಕೆ.ಜಿ. ಬೋಪಯ್ಯ, ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅದ್ಯಕ್ಷ ಶಶಿ ಸುಬ್ರಮಣಿ, ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್, ಬಿಜೆಪಿ ಪ್ರಮುಖರಾz ಗಣೇಶ್, ಮುದ್ದಿಯಡ ಮಂಜು, ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಡ್ನೇಕರ್, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ದೇವರಾಜು, ತಾಲೂಕು ಡಿ.ವೈ.ಎಸ್.ಪಿ. ನಾಗಪ್ಪ, ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಜು ಹಾಜರಿದ್ದರು.