ವೀರಾಜಪೇಟೆ, ಜು. 17: ಅಮ್ಮತ್ತಿ-ಕಾರ್ಮಾಡು ಗ್ರಾಮದಲ್ಲಿ ಅನಾದಿ ಕಾಲದಿಂದಲೂ ನಡೆದು ಬರುತ್ತಿರುವ ವನ ದೇವತೆ ಚೌಡೇಶ್ವರಿಗೆ ದೇವಾಲಯ ನಿರ್ಮಾಣ ಸೂಕ್ತವಲ್ಲ. ಗ್ರಾಮದ ಲಿಂಗಾಯಿತರು ಇತರ ಸಮುದಾಯ, ಕಾರ್ಮಾಡು ಗ್ರಾಮಸ್ಥರ ಸಹಕಾರದೊಂದಿಗೆ ವರ್ಷಂಪ್ರತಿ ಉತ್ಸವವನ್ನು ಆಚರಿಸುತ್ತಿದೆ. ಆದರೆ ಈಗ ಇದೇ ಜಾಗದಲ್ಲಿ ಪ್ರತ್ಯೇಕ ದೇವಾಲಯ ನಿರ್ಮಾಣಕ್ಕೆ ಕೆಲವರು ಪ್ರಯತ್ನ ಮಾಡುತ್ತಿರುವದು ಸೂಕ್ತವಲ್ಲ ಎಂದು ವನ ದೇವತೆ ಉತ್ಸವದ ಉಸ್ತುವಾರಿ ವಿ.ವಿ. ಆನಂದ್ ಕುಮಾರ್ ಪತ್ರಿಕಾಗೋಷ್ಠಿ ಯಲ್ಲಿ ಆಗ್ರಹಿಸಿದ್ದಾರೆ.

ಲಿಂಗಾಯಿತರು ರಾಜರ ಕಾಲದಿಂದಲೂ ಇದೇ ಗ್ರಾಮದಲ್ಲಿ ನೆಲೆ ನಿಂತವರು. ಈ ಹಿಂದೆಯೇ ಸಮುದಾಯದ ಜಾಗದಲ್ಲಿ ಸರಕಾರಕ್ಕೆ 5.90ಏಕ್ರೆ ಜಾಗವನ್ನು ಉದಾರವಾಗಿ ನೀಡಲಾಗಿದೆ. ಆದರೆ ದೇವರ ಜಾಗದ ಪರಭಾರೆ ವಿವಾದ ನ್ಯಾಯಾಲಯದ ಮೆಟ್ಟಲೇರಿದ ನಂತರ ಸಮುದಾಯದ ಬೇಡಿಕೆ ಯನ್ನು ಮನ್ನಿಸಿ ಪೂಜೆ ಪುನಸ್ಕಾರ, ಉತ್ಸವ ನಡೆಸಲು ನ್ಯಾಯಾಲಯ 40 ಸೆಂಟು ಜಾಗವನ್ನು ಲಿಂಗಾಯಿತ ಸಮುದಾಯಕ್ಕೆ ನೀಡಿದೆ. ಅದರಂತೆ ಅನೇಕ ದಶಕಗಳಿಂದ ವನ ದೇವಿಯ ಆರಾಧನೆ, ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ.

ಲಿಂಗಾಯಿತ ಸಮುದಾಯ ಸರಕಾರಕ್ಕೆ ಉದಾರವಾಗಿ ನೀಡಿದ ಜಾಗದಲ್ಲಿ ಅದೇ ಗ್ರಾಮದ ಪರಿಶಿಷ್ಟ ಕುಟುಂಬಗಳಿಗೆÉ ನಿವೇಶನ ನೀಡಿತ್ತು. ಅದರಂತೆ ಇಂದು 300 ಕುಟುಂಬ ಗಳು ಗ್ರಾಮದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದೆ. ಈ ಸಮುದಾಯದ ಕೆಲ ಯುವಕರ ತಂಡ ಹಾಗೂ ಅದೇ ಕೋಮಿನ ಕೆಲವು ಆಸಕ್ತ ಗ್ರಾಮಸ್ಥರು, ಜಾಗವನ್ನು ಉದಾರವಾಗಿ ನೀಡಿದ ಲಿಂಗಾಯಿತ ಸಮುದಾಯ ಹಾಗೂ ಗ್ರಾಮಸ್ಥ ರೊಂದಿಗೆ ವಿಚಾರ ವಿನಿಮಯ ಮಾಡದೆ, ಚೌಡೇಶ್ವರಿ ವನ ದೇವತೆ ಗುಡಿ ನಿರ್ಮಿಸಲು ಮುಂದಾಗಿದ್ದಾರೆ. ಇದು ಗ್ರಾಮಸ್ಥರು ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಾಗಿದೆ. ಈ ವನ ದೇವತೆ ಗುಡಿ ಕಟ್ಟುವದನ್ನು ಆಸಕ್ತ ತಂಡ ತಕ್ಷಣ ಕೈ ಬಿಡಬೇಕು ಎಂದು ಲಿಂಗಾಯಿತ ಸಮುದಾಯದ ಹಿರಿಯರಾದ ವಿ.ವಿ. ಓಹಿಲಾಯ ಒತ್ತಾಯಿಸಿದ್ದಾರೆ. ಪ್ರತಿ ವರ್ಷ ಮೇ ತಿಂಗಳಲ್ಲಿ ಆಚರಿಸುವ ವನ ದೇವತೆಯ ಉತ್ಸವಕ್ಕೆ ಜಾತ್ಯತೀತವಾಗಿ ಎಲ್ಲ ಸಮುದಾಯದವರು, ಕುಟುಂಬಗಳು ಬೆಂಬಲ ನೀಡಿ ಭಾಗವಹಿಸುತ್ತಿದ್ದಾರೆ. ಆದರೂ ಈ ವನ ದೇವತೆ ಗುಡಿ ಕಟ್ಟುವ ಕಾರ್ಯ ಗ್ರಾಮಸ್ಥರಲ್ಲಿ, ಸಮುದಾಯಗಳಲ್ಲಿ ಒಡಕು ತರುವ ಕುಕೃತ್ಯವಾಗಿದೆ ಎಂದು ಓಹಿಲಾಯ ದೂರಿದ್ದಾರೆ.ಪವಿತ್ರ ವನ ಕಾಪಾಡಲು ಆಗ್ರಹಅಮ್ಮತ್ತಿ-ಕಾರ್ಮಾಡು ವನ ದೇವತೆ ಗುಡಿ ಅಗತ್ಯವಿಲ್ಲ