ಮಡಿಕೇರಿ, ಜ. 17: ಕರ್ನಾಟಕ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನೀಲ್ ಸುಬ್ರಮಣಿ ಜಿಲ್ಲೆಯ ಹೃದಯ ಭಾಗದಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಇಂದು ದಿಢೀರ್ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲಿಸಿದರು.
ಮೊದಲಿಗೆ ಆಸ್ಪತ್ರೆಯಲ್ಲಿರುವ ಪೆÇಲೀಸ್ ಉಪಕೇಂದ್ರಕ್ಕೆ ಭೇಟಿ ನೀಡಿದಾಗ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಕರ್ತವ್ಯದಲ್ಲಿರಲ್ಲ. ಈ ಹಿಂದೆಯೂ 2 ಬಾರಿ ಭೇಟಿ ನೀಡಿದಾಗ ಪೆÇಲೀಸ್ ಸಿಬ್ಬಂದಿ ಕರ್ತವ್ಯದಲ್ಲಿಲ್ಲದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಪ್ರತ್ಯಕ್ಷಗೊಂಡ ಪೆÇಲೀಸ್ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಅಪಘಾತ ಪ್ರಕರಣಗಳಲ್ಲಿ ಪೆÇೀಲೀಸ್ ಸಿಬ್ಬಂದಿ ಇಲ್ಲದಿದ್ದಲ್ಲಿ ದೂರು ದಾಖಲಿಸಲು ಹಾಗೂ ಮುಂದಿನ ಕ್ರಮ ವಹಿಸಲು ಸಾರ್ವಜನಿಕರಿಗೆ ತೊಂದರೆ ಯಾಗಲಿದೆ. ಕರ್ತವ್ಯದ ಅವಧಿಯಲ್ಲಿ ಕರ್ತವ್ಯಲೋಪ ಮಾಡಿದ್ದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವದು ಇನ್ನು ಮುಂದೆ ಈ ರೀತಿಯಾಗದಂತೆ ನಿಗಾವಹಿಸಲು ಎಚ್ಚರಿಕೆ ನೀಡಿದರು.
ತುರ್ತು ಚಿಕಿತ್ಸಾ ಘಟಕ, ಔಷಧ ಮಳಿಗೆ, ಸಿಬ್ಬಂದಿ ಕಚೇರಿಗೆ ಭೇಟಿ ಮಾಡಿ ಪರಿಶೀಲಿಸಿದರು. ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ. ಕಾರ್ಯಪ್ಪ, ಜಿಲ್ಲಾ ವೈದ್ಯಾಧಿಕಾರಿ ಗಳಾದ ಡಾ. ಸದಾಶಿವಪ್ಪ, ಡಾ. ಲೋಕೇಶ್, ಸಹಾಯಕ ಅಡಳಿತಾಧಿಕಾರಿ ಲಿಲ್ಲಿ ಮುಂತಾದ ವೈದ್ಯರ ತಂಡದೊಂದಿಗೆ ಸಮಾಲೋಚನೆ ಮಾಡಿ, ಸಾರ್ವಜನಿಕರ ಸೇವೆಗೆ ಬೇಕಾದ ಅವಶ್ಯಕತೆಗಳ ಬಗ್ಗೆ ಚರ್ಚಿಸಿದರು. ತುರ್ತು ಚಿಕಿತ್ಸಾ ವಾಹನಗಳ ಬಗ್ಗೆ ಮಾಹಿತಿ ಪಡೆದು, ವಾಹನಗಳ ಲಭ್ಯತೆಗಳನ್ನು ಪರಿಶೀಲಿಸಿದರು. ಸಾರ್ವಜನಿಕ ಆಸ್ಪತ್ರೆಗೆ ಹಾಗೂ ವೈದ್ಯಕೀಯ ಕಾಲೇಜಿಗೆ ಬೇಕಾದ ಅಗತ್ಯ ವ್ಯವಸ್ಥೆಗಳ ಬಗ್ಗೆ ಪಟ್ಟಿ ಮಾಡಿ ಕೂಡಲೇ ಕಛೇರಿಗೆ ಲಿಖಿತ ಮಾಹಿತಿ ನೀಡಲು ಸೂಚಿಸಿದರು. ನಂತರ ಸರ್ಕಾರದ ಹಂತದಲ್ಲಿ ಸಂಬಂಧ ಪಟ್ಟವರ ಜೊತೆ ವ್ಯವಹರಿಸಿ ಅನುದಾನ ತರಲು ಪ್ರಯತ್ನಿಸ ಲಾಗುವದು ಎಂದು ತಿಳಿಸಿದರು. ವೈದ್ಯಕೀಯ ಕಾಲೇಜು ಇಲ್ಲೇ ಇರುವದರಿಂದ ಸಾರ್ವಜನಿಕರಿಗೆ ಸಕಾರಾತ್ಮಕ ಸ್ಪಂದನ ನೀಡಿ ಸೂಕ್ತ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು. ಅಲ್ಲದೆ ಸಾರ್ವಜನಿಕ ರಿಗೆ ಯಾವದೇ ಸಮಸ್ಯೆಗಳಾಗದಂತೆ ನಿಗಾವಹಿಸಲು ವೈದ್ಯರಿಗೆ ಸೂಚಿಸಿದರು. ಭೇಟಿ ಸಂದರ್ಭ ಶಾಸಕರೊಂದಿಗೆ ನಗರಸಭಾ ಸದಸ್ಯ ಉಣ್ಣಿಕೃಷ್ಣ ಹಾಜರಿದ್ದರು.