ಮಡಿಕೇರಿ, ಜ. 16: ಜಿಲ್ಲಾ ಮಟ್ಟದ ತುಳುವೆರ ಜಾನಪದ ಕೂಟದ ಸಭೆಯು ಇತ್ತೀಚೆಗೆ ನಗರದ ಸಮುದ್ರ ಹೊಟೇಲ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ತುಳುವೆರ ಜಾನಪದ ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ ಮಾತನಾಡಿ, ಜಿಲ್ಲೆಯಲ್ಲಿ ತುಳುವೆರ ಜಾನಪದ ಕೂಟದ ದೊಡ್ಡ ಮಟ್ಟದ ಸಮಾವೇಶ ಆಗಬೇಕೆನ್ನುವ ಅಭಿಲಾಷೆಯಿದೆ. ಅಲ್ಲದೆ ಆಟಿಕೂಟದ ಬಗ್ಗೆ ಸರ್ಕಾರದಿಂದ ನೋಂದಣಿ ಮಾಡಿಸಿಕೊಂಡು ಸರ್ಕಾರದಿಂದ ಸೌಲಭ್ಯಗಳನ್ನು ಪಡೆದುಕೊಳ್ಳು ವಂತಾಗಬೇಕು. 10 - 13 ಸಮುದಾಯದ ಪ್ರಮುಖರನ್ನು ಸೇರಿಸಿ ಸಂಘವನ್ನು ರಚಿಸಲಾಗಿದ್ದು, ಕೊಡಗು ಜಿಲ್ಲಾ ತುಳುವೆರ ಜಾನಪದ ಕೂಟವನ್ನು ಬಲಿಷ್ಠ ಮಾಡಬೇಕು. ಗ್ರಾಮೀಣ ಮಟ್ಟದಲ್ಲೇ ಸಬಲರಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸು ವಂತಾಗಬೇಕು. ಅಕ್ಟೋಬರ್‍ನಲ್ಲಿ ಜಿಲ್ಲಾಮಟ್ಟದ ತುಳುವೆರ ಜಾನಪದ ಕೂಟ ಕ್ರೀಡಾಕೂಟವನ್ನು ಆಯೋಜಿಸ ಲಾಗುವದು ಎಂದರು.

ಅಧ್ಯಕ್ಷತೆ ವಹಿಸಿದ್ದ ತುಳುವೆರ ಜಾನಪದ ಕೂಟದ ಜಿಲ್ಲಾ ಉಪಾಧ್ಯಕ್ಷ ಬಿ.ಡಿ. ನಾರಾಯಣ ಮಾತನಾಡಿ, ತುಳುವೆರ ಜಾನಪದ ಕೂಟದ ವತಿಯಿಂದ ಆಟಿಕೂಟ ಮತ್ತು ಕ್ರೀಡಾಕೂಟವನ್ನು ಆಯೋಜಿಸ ಲಾಗುವದು ಎಂದರು.

ಸತೀಶ್ ಕುಂದರ್ ಸ್ವಾಗತಿಸಿ, ಪುರುಷೋತ್ತಮ್ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರು ಮತ್ತು ಸಲಹೆಗಾರರಾದ ಬಿ.ಬಿ. ಐತ್ತಪ್ಪ ರೈ, ಬಾಲಕೃಷ್ಣ ರೈ, ನಿರ್ದೇಶಕರು ಗಳಾದ ಎಂ.ಡಿ. ನಾಣಯ್ಯ, ದಿನೇಶ್, ಜೋಯಪ್ಪ ಮತ್ತು ಪ್ರಮುಖರಾದ ನಂದೀಶ್ ಆಚಾರ್ಯ, ಸುರೇಶ್, ಜೋಯಪ್ಪ, ಪ್ರಸಾದ್, ಬಿ.ಎನ್. ಪುಷ್ಪ ಉಪಸ್ಥಿತರಿದ್ದರು.