ಸುಂಟಿಕೊಪ್ಪ, ಜು. 16: ಮಳೆಗಾಲ ಮುಗಿದ ಕೂಡಲೇ ಹೋಬಳಿಯ ಉಳಿದಿರುವ ಎಲ್ಲ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗು ವದು ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.ಸಮೀಪದ ಹರದೂರು ಗ್ರಾ.ಪಂ. ವ್ಯಾಪ್ತಿಯ ಜಾರ್‍ಕೊಲ್ಲ್ಲಿಯಲ್ಲಿ ಬರ ಪರಿಹಾರ ಯೋಜನೆಯಡಿ ಕೊರೆಯಲಾದ ಕೊಳವೆ ಬಾವಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮಸ್ಥರ ಅಹವಾಲುಗಳನ್ನು ವೀಕ್ಷಿಸಿದ್ದೇನೆ. ಆದಷ್ಟು ಬೇಗನೆ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾ ಗುವದು ಎಂದು ಭರವಸೆ ನೀಡಿದರು.

ಪಂಚಾಯಿತಿ ವತಿಯಿಂದ ಸುಮಾರು ರೂ. 1 ಲಕ್ಷದ 50 ಸಾವಿರ ವೆಚ್ಚದಲ್ಲಿ ಪ್ಯೆಪ್ ಲೈನ್ ಅಳವಡಿಸಿ ನೀರು ಸಂಪರ್ಕ ಕಲ್ಪಿಸಿದ್ದು, ಇದರಿಂದ ಈ ಭಾಗದ ಜನರಿಗೆ ಹಲವಾರು ವರ್ಷಗಳಿಂದ ತಲೆದೊರಿದ್ದ ನೀರಿನ ಸಮಸ್ಶೆಗೆ ಪರಿಹಾರ ದೊರಕಿದೆ ಎಂದು ಈ ಭಾಗದ ಜನರು ಹರ್ಷ ವ್ಯಕ್ತ ಪಡಿಸಿದರು.

ಈ ಸಂದರ್ಭ ಹರದೂರು ಗ್ರಾ.ಪಂ. ಅಧ್ಯಕ್ಷೆ ಕೆ.ಸಿ. ಶೈಲಜಾ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ನಂದೀಶ್. ತಾ.ಪಂ. ಸದಸ್ಯೆ ಮಣಿ, ಪಂಚಾಯಿತಿ ಸದಸ್ಯರಾದ ಪೌಸಿಯ, ಸುಬ್ಬಯ್ಯ. ಇದ್ದರು.