ಮಡಿಕೇರಿ ಜು. 17 : ಯುವ ಸಮೂಹಕ್ಕೆ ಅರೆಭಾಷೆ ಸಂಸ್ಕøತಿ ಯನ್ನು ಪರಿಚಯಿಸುವ ಉದ್ದೇಶ ದಿಂದ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಮೈಸೂರಿನ ಕೊಡಗು ಗೌಡ ಸಮಾಜದ ವತಿಯಿಂದ ತಾ. 23 ರಂದು ಮೈಸೂರಿನಲ್ಲಿ ಅರೆಭಾಷೆ ಸಂಸ್ಕøತಿ ಪರಿಪಾಲಕರ ಸಮಾಗಮ ಕಾರ್ಯಕ್ರಮವನ್ನು ಆಯೋಜಿಸ ಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಗೌಡ ಸಮಾಜದಲ್ಲಿ ನಡೆಯುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಚಾಮರಾಜನಗರದ ಶಾಸಕ ವಾಸು ಕಾರ್ಯಕ್ರಮವನ್ನು ಉದ್ಘಾಟಿಸ ಲಿದ್ದು, ವಿಶೇಷ ಅತಿಥಿಯಾಗಿ ಶಾಸಕ ಕೆ. ಜಿ. ಬೋಪಯ್ಯ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಮಡಿಕೇರಿ ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಮೈಸೂರು ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಚೆಟ್ಟಿಮಾಡ ಜನಾರ್ಧನ, ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕುಂಜಿಲನ ಮುತ್ತಮ್ಮ ಹಾಗೂ ದೆಹಲಿ ಕನ್ನಡ ಸಂಘದ ಜಂಟಿ ಕಾರ್ಯದರ್ಶಿ ತಡಿಯಪ್ಪನ ಬೆಳ್ಳಿಯಪ್ಪ ಉಪಸ್ಥಿತರಿರುವರು.

ನಂತರ ನಡೆಯುವ ವಿಚಾರ ಗೋಷ್ಠಿಯಲ್ಲಿ ಅರೆಭಾಷಿಕರ ಹುಟ್ಟು ಮತ್ತು ಆಚರಣೆಯ ಬಗ್ಗೆ ಮದೆಮಹೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿ. ಜೋಯಪ್ಪ , ಪ್ರೌಢಾವಸ್ಥೆ ಮತ್ತು ಮದುವೆ ಆಚರಣೆ ಬಗ್ಗೆ ಅಕಾಡೆಮಿಯ ಸದಸ್ಯೆ ಡಾ| ಕೋರನ ಸರಸ್ವತಿ ಪ್ರಕಾಶ್ ಮಾತನಾಡಲಿದ್ದಾರೆ. ಮಧ್ಯಾಹ್ನದ ನಂತರ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಸಾವು ಮತ್ತು ವಿಧಿ ವಿಧಾನಗಳ ಆಚರಣೆ ಕುರಿತು ಉಪನ್ಯಾಸಕರಾದ ಪಟ್ಟಡ ಶಿವಕುಮಾರ್, ಹಬ್ಬ ಹರಿದಿನ ಮತ್ತು ಆಚರಣೆಗಳ ಕುರಿತು ನಿವೃತ್ತ ಪ್ರಾಂಶುಪಾಲ ಚೆರಿಯಮನೆ ರಾಮಚಂದ್ರ ಮಾತನಾಡಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗು ಗೌಡ ವಿದ್ಯಾಸಂಘದ ಹೊಸೂರು ರಮೇಶ್ ಜೋಯಪ್ಪ, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಮೈಸೂರು ಕೊಡಗು ಗೌಡ ಸಮಾಜದ ಮಾಜಿ ಅಧ್ಯಕ್ಷÀ ಕೂಡಕಂಡಿ ಗೋಪಾಲ, ಕುದುಪಜೆ ಕುಶಾಲಪ್ಪ, ನಿವೃತ್ತ ಪ್ರಾಂಶುಪಾಲರಾದ ಕಾನಡ್ಕ ಪದ್ಮಾಜಿ ಪಾಲ್ಗೊಳ್ಳಲಿದ್ದಾರೆ.

ಸಂಜೆ ಶಶಿಧರ ಮಾವಿನ ಕಟ್ಟೆ ಮತ್ತು ಬಳಗದಿಂದ ಅರೆಭಾಷೆ ಗೀತಗಾಯನ ಕಾರ್ಯಕ್ರಮ ನಡೆಯಲಿದೆ. ಅರೆಭಾಷೆ ಸಂಸ್ಕøತಿಗೆ ಸಂಬಂಧಿಸಿದ ಎಲ್ಲಾ ಆಚಾರ- ವಿಚಾರಗಳ ದಾಖಲೀಕರಣ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರು ಹಾಗೂ ಕಾರ್ಯಕ್ರಮದ ಸಂಚಾಲಕ ಮಂದ್ರೀರ ಮೋಹನ ದಾಸ್ ಹಾಗೂ ಸದಸ್ಯೆ ಡಾ| ಕೋರನ ಸರಸ್ವತಿ ಪ್ರಕಾಶ್ ಉಪಸ್ಥಿತರಿದ್ದರು.