ಮಡಿಕೇರಿ ಜು.17 : ಯುವ ಸಮೂಹಕ್ಕೆ ಅರೆಭಾಷೆ ಸಂಸ್ಕøತಿಯನ್ನು ಪರಿಚಯಿಸುವ ಉದ್ದೇಶದಿಂದ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಮೈಸೂರಿನ ಕೊಡಗು ಗೌಡ ಸಮಾಜದ ವತಿಯಿಂದ ಜು.23 ರಂದು ಮೈಸೂರಿನಲ್ಲಿ ಅರೆಭಾಷೆ ಸಂಸ್ಕøತಿ ಪರಿಪಾಲಕರ ಸಮಾಗಮ ಕಾರ್ಯಕ್ರಮವನ್ನು ಆಯೋಜಿಸ ಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷರಾದ ಕೊಲ್ಯದ ಗಿರೀಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಗೌಡ ಸಮಾಜದಲ್ಲಿ ನಡೆಯುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಚಾಮರಾಜನಗರದ ಶಾಸಕರಾದ ವಾಸು ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವಿಶೇಷ ಅತಿಥಿಯಾಗಿ ಶಾಸಕ ಕೆ.ಜಿ. ಬೋಪಯ್ಯ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷಸೂರ್ತಲೆ ಸೋಮಣ್ಣ, ಮಡಿಕೇರಿ ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಮೈಸೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ಚೆಟ್ಟಿಮಾಡ ಜನಾರ್ಧನ, ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷ ಕುಂಜಿಲನ ಮುತ್ತಮ್ಮ ಹಾಗೂ ದೆಹಲಿ ಕನ್ನಡ ಸಂಘದ ಜಂಟಿ ಕಾರ್ಯದರ್ಶಿ ತಡಿಯಪ್ಪನ ಬೆಳ್ಳಿಯಪ್ಪ ಉಪಸ್ಥಿತರಿರುವರು.
ನಂತರ ನಡೆಯುವ ವಿಚಾರಗೋಷ್ಠಿಯಲ್ಲಿ ಅರೆಭಾಷಿಕರ ಹುಟ್ಟು ಮತ್ತು ಆಚರಣೆಯ ಬಗ್ಗೆ ಮದೆಮಹೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಬಾರಿಯಮಡ ಜೋಯಪ್ಪ ಮಾತನಾಡಲಿದ್ದಾರೆ. ಪ್ರೌಢಾವಸ್ಥೆ ಮತ್ತು ಮದುವೆ ಆಚರಣೆ ಬಗ್ಗೆ ಅಕಾಡೆಮಿಯ ಸದಸ್ಯರಾದ ಡಾ| ಕೋರನ ಸರಸ್ವತಿ ಪ್ರಕಾಶ್ ಮಾತನಾಡಲಿದ್ದಾರೆ. ಮಧ್ಯಾಹ್ನದ ನಂತರ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಸಾವು ಮತ್ತು ವಿಧಿ ವಿಧಾನಗಳ ಆಚರಣೆ ಕುರಿತು ಉಪನ್ಯಾಸಕರಾದ ಪಟ್ಟಡ ಶಿವಕುಮಾರ್, ಹಬ್ಬ ಹರಿದಿನ ಮತ್ತು ಆಚರಣೆಗಳ ಕುರಿತು ನಿವೃತ್ತ ಪ್ರಾಂಶುಪಾಲರಾದ ಚೆರಿಯಮನೆ ರಾಮಚಂದ್ರ ಮಾತನಾಡಲಿದ್ದಾರೆ. ವಿಚಾರಗೋಷ್ಠಿ ಮತ್ತು ಸಂವಾದವನ್ನು ಪೋತಂಡ್ರ ತೇಜ ಪ್ರಸಾದ್ ಮತ್ತು ಕಟ್ಟೆಮನೆ ಸೋನಾಜಿತ್ ನಿರ್ವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗು ಗೌಡ ವಿದ್ಯಾಸಂಘದ ಹೊಸೂರು ರಮೇಶ್ ಜೋಯಪ್ಪ, ಕೊಡಗು ಗೌಡ
(ಮೊದಲ ಪುಟದಿಂದ) ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಮೈಸೂರು ಕೊಡಗು ಗೌಡ ಸಮಾಜದ ಮಾಜಿ ಅಧ್ಯಕ್ಷÀ ಕೂಡಕಂಡಿ ಗೋಪಾಲ, ಕುದುಪಜೆ ಕುಶಾಲಪ್ಪ, ನಿವೃತ್ತ ಪ್ರಾಂಶುಪಾಲ ಕಾನಡ್ಕ ಪದ್ಮಾಜಿ ಪಾಲ್ಗೊಳ್ಳಲಿದ್ದಾರೆ.ಸಂಜೆ ಶಶಿಧರ ಮಾವಿನ ಕಟ್ಟೆ ಮತ್ತು ಬಳಗದಿಂದ ಅರೆಭಾಷೆ ಗೀತಗಾಯನ ಕಾರ್ಯಕ್ರಮ ನಡೆಯಲಿದೆಯೆಂದು ಕೊಲ್ಯದ ಗಿರೀಶ್ ಮಾಹಿತಿ ನೀಡಿದರು. ಅರೆಭಾಷೆ ಸಂಸ್ಕøತಿಗೆ ಸಂಬಂಧಿಸಿದ ಎಲ್ಲಾ ಆಚಾರ- ವಿಚಾರಗಳ ದಾಖಲೀಕರಣ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರು ಹಾಗೂ ಕಾರ್ಯಕ್ರಮದ ಸಂಚಾಲಕರಾದ ಮಂದ್ರೀರ ಮೋಹನ ದಾಸ್ ಹಾಗೂ ಸದಸ್ಯರಾದ ಡಾ| ಕೋರನ ಸರಸ್ವತಿ ಪ್ರಕಾಶ್ ಉಪಸ್ಥಿತರಿದ್ದರು.