ಮಡಿಕೇರಿ, ಜ. 17: ಕೊಡಗಿನ ಕೆಲವು ವಿದ್ಯಾರ್ಥಿಗಳು ಮಾದಕ ದ್ರವ್ಯಗಳ ವ್ಯಸನಿಗಳಾಗುತ್ತಿದ್ದು, ಶಿಕ್ಷಣ ಸಂಸ್ಥೆಗಳು, ಪೆÇೀಷಕರು ಕೂಡಲೇ ಎಚ್ಚತ್ತುಕೊಳ್ಳದಿದ್ದರೆ ಯುವಪೀಳಿಗೆಗೆ ಗಂಡಾಂತರ ಖಂಡಿತಾ ಎಂದು ಕೊಡಗು ಮೆಡಿಕಲ್ ಕಾಲೇಜಿನ ಡೀನ್ ಡಾ.ಬಿ.ಜೆ. ಮಹೀಂದ್ರ ಆತಂಕ ವ್ಯಕ್ತಪಡಿಸಿದರು.
ವೀರಾಜಪೇಟೆ ರೋಟರಿ ಕ್ಲಬ್‍ನ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಇತ್ತೀಚಿಗೆ ಕೆಲವು ಶಿಕ್ಷಣ ಸಂಸ್ಥೆಗಳಿಂದ ತಮ್ಮಲ್ಲಿನ ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನ ಇರುವ ಬಗ್ಗೆ ಆತಂಕದ ಪ್ರಶ್ನೆಗಳು ಮೆಡಿಕಲ್ ಕಾಲೇಜಿನ ವೈದ್ಯರಿಗೆ ಬಂದಿದೆ. ಜಿಲ್ಲೆಯ ಕೆಲವೆಡೆ ಸುಲಭವಾಗಿ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳು ದೊರಕುತ್ತಿದೆ. ಈ ಬಗ್ಗೆ ಪೆÇೀಷಕರು ಮತ್ತು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಎಚ್ಚತ್ತುಕೊಂಡು ತುರ್ತು ಗಮನ ನೀಡಬೇಕು. ವಿದ್ಯಾರ್ಥಿಗಳನ್ನು ಮಾದಕ ಪದಾರ್ಥಗಳ ದಾಸರಾಗದಂತೆ ತಡೆಯುವದು ಸಾಮಾಜಿಕ ಹೊಣೆಗಾರಿಕೆಯಾಗಬೇಕು ಎಂದು ಕರೆ ನೀಡಿದರು.
ವೀರಾಜಪೇಟೆ ರೋಟರಿ ಕ್ಲಬ್‍ನ ನೂತನ ಆಡಳಿತ ಮಂಡಳಿ ಪದಗ್ರಹಣ ನೆರವೇರಿಸಿ ಮಾತನಾಡಿದ ಮಿಸ್ಟಿ ಹಿಲ್ಸ್ ನಿರ್ದೇಶಕ ಡಾ. ಸಿ.ಆರ್. ಪ್ರಶಾಂತ್, ರೋಟರಿಯ ಸಾಮಾಜಿಕ ಕಾರ್ಯ ಯೋಜನೆಗಳು ಸಮಾಜ ದಲ್ಲಿನ ನೈಜ ಫಲಾನುಭವಿಗಳಿಗೆ ಕಾಲಕ್ಕೆ ಸರಿಯಾಗಿ ದೊರಕುವಂತಾಗಬೇಕು. ನಮ್ಮ ಸುತ್ತಮುತ್ತ ಅನೇಕರಿಗೆ ಸಹಾಯದ ಅಗತ್ಯವಿರುತ್ತದೆ. ಅಂಥವರನ್ನು ಗುರುತಿಸುವಂತಾಗ ಬೇಕು. ಶಿಕ್ಷಣಕ್ಕೆ ಸಂಬಂಧಿಸಿದ ಯೋಜನೆಗಳನ್ನು ಒಂದೇ ಶಾಲೆಯನ್ನು ಆಯ್ಕೆ ಮಾಡಿಕೊಂಡು ಆ ಶಾಲೆಯನ್ನೇ ಮಾದರಿ ಶಾಲೆಯನ್ನಾಗಿ ಪರಿವರ್ತಿಸುವ ರೀತಿಯಲ್ಲಿ ಸಾಗಬೇಕೆಂದು ಕರೆ ನೀಡಿದರು.
ನೂತನ ಅಧ್ಯಕ್ಷ ಶಾಂತರಾಮ್ ಕಾಮತ್ ಮಾತನಾಡಿ, ವಿಭಿನ್ನ, ಅರ್ಥಪೂರ್ಣ ಸಂದೇಶವಾದ ಮೇಕಿಂಗ್ ಎ ಡಿಫÀರೆನ್ಸ್ ಸಂದೇಶದಡಿ ವೀರಾಜಪೇಟೆ ವ್ಯಾಪ್ತಿಯಲ್ಲಿ ಅನೇಕ ಸೇವಾ ಯೋಜನೆಗಳನ್ನು ಆಯೋಜಿಸುವದಾಗಿ ಭರವಸೆ ನೀಡಿದರು.
ಜಿಲ್ಲಾ ಸಹಾಯಕ ಗವರ್ನರ್ ಎನ್. ಮಹೇಶ್ ನಾಲ್ವಾಡೆ ಮಾತನಾಡಿ, ಈ ವರ್ಷ ಸ್ವಚ್ಛ ಭಾರತ್ ಅಭಿಯಾನ, ವನಸಂರಕ್ಷಣೆ, ಸಸ್ಯಪೆÇೀಷಣೆ ಮತ್ತು ಗ್ರಾಮೀಣ ಪ್ರದೇಶಗಳಿಗೆ ವಿದ್ಯುದ್ಧೀಕರಣದ ಯೋಜನೆಗಳನ್ನು ಜಿಲ್ಲಾ ರೋಟರಿ 3181 ನಿಂದ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ರೋಟರಿ ವೀರಾಜಪೇಟೆಯ ನಿರ್ಗಮಿತ ಅಧ್ಯಕ್ಷ ರಾಬಿನ್ ಮಂದಪ್ಪ, ನಿರ್ಗಮಿತ ಕಾರ್ಯದರ್ಶಿ ಚಿತ್ರಭಾನು, ಜೋನಲ್ ಲೆಫ್ಟಿನೆಂಟ್ ಪಿ.ಎನ್. ಹರಿಶಂಕರ್ ಪ್ರಸಾದ್ ಹಾಜರಿದ್ದ ಕಾಯಕ್ರಮದಲ್ಲಿ ನೂತನ ಕಾರ್ಯದರ್ಶಿ ಕೆ.ಹೆಚ್. ಆದಿತ್ಯ ವಂದಿಸಿದರು. ಡಾ. ಎಸ್.ವಿ. ನರಸಿಂಹನ್ ಅತಿಥಿ ಪರಿಚಯ ನೆರವೇರಿಸಿದರು. ಡಾ. ಪ್ರಿಯದರ್ಶಿನಿ ಸಂಪಾದಕತ್ವದಲ್ಲಿ ಪ್ರಕಟಿತವಾದ ವೈರೋಟರ್ ಸಂಚಿಕೆಯನ್ನು ಅತಿಥಿಗಳು ಅನಾವರಣಗೊಳಿಸಿದರು.