ಮಡಿಕೇರಿ, ಜು. 18: ನಗರಸಭೆಯ ಡಿಜಿಟಲ್ ಸ್ಕ್ರೀನ್‍ನಲ್ಲಿ ಅಶ್ಲೀಲ ಚಿತ್ರ ಪ್ರದರ್ಶನವಾಗಿದೆ ಎನ್ನುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಸೈಬರ್ ಕ್ರೈಂ ವಿಭಾಗದಿಂದ ತನಿಖೆ ನಿಷ್ಪಕ್ಷಪಾತವಾಗಿ ನಡೆಯುವದು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟಿರುವ ನಗರಸಭೆಯ ಬಿಜೆಪಿ ಸದಸ್ಯರು ತನಿಖೆÉಯ ಜವಾಬ್ದಾರಿಯನ್ನು ಬೆಂಗಳೂರು ಸೈಬರ್ ಕ್ರೈಂ ವಿಭಾಗಕ್ಕೆ ಒಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ಪಿ.ಡಿ.ಪೆÀÇನ್ನಪ್ಪ, ಅಶ್ಲೀಲ ಚಿತ್ರ ಪ್ರದರ್ಶನವಾಗಿಲ್ಲವೆಂದು ಅಧ್ಯಕ್ಷರು ಸಮರ್ಥನೆ ನೀಡುತ್ತಿದ್ದು, ಇದು ನಿಜವೇ ಆಗಿದ್ದಲ್ಲಿ ಸಂತೋಷವೆಂದರು. ಆದರೆ, ಕೆಲವು ಅಧಿಕಾರಿಗಳು ಪ್ರದರ್ಶನವಾದ ಚಿತ್ರದ ಫೋಟೋ ತೆಗೆದಿದ್ದಾರೆ. ವಿಚಾರಣೆ ವೇಳೆ ಫೋಟೋ ‘ಡಿಲೀಟ್’ ಆಗಿದೆಯೆಂದು ಸಮಜಾಯಿಸಿಕೆ ನೀಡಿದ್ದಾರೆ. ಇದು ಸಂಶಯಕ್ಕೆ ಎಡೆಮಾಡಿಕೊಟ್ಟಿದ್ದು, ಡಾಟಾ ಆಪರೇಟರ್ ಸಂಧ್ಯಾ ಅವರನ್ನು ಅಧ್ಯಕ್ಷರು ವಿಚಾರಣೆ ಮಾಡಬೇಕಾಗಿ ತ್ತೆಂದು ಅಭಿಪ್ರಾಯಪಟ್ಟರು.
ಎರಡನೇ ಬಾರಿಗೆ ನಗರಸಭಾ ಅಧ್ಯಕ್ಷರಾಗಿರುವ ಕಾವೇರಮ್ಮ ಸೋಮಣ್ಣ ಅವರಿಗೆ ಸಾಮಾನ್ಯ ಜ್ಞಾನ ಇರಬೇಕಾಗಿತ್ತೆಂದು ಅಸಮಾಧಾನ ವ್ಯಕ್ತಪಡಿಸಿದ ಪಿ.ಡಿ. ಪೊನ್ನಪ್ಪ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೌರಾಯುಕ್ತರು ಪೊಲೀಸರಿಗೆ ದೂರು ನೀಡಬೇಕೆ ಹೊರತು ಅಧ್ಯಕ್ಷರು ಅಲ್ಲವೆಂದು ಹೇಳಿದರು. ನಗರಸಭೆÉಯಲ್ಲಿ ಅಳವಡಿಸಲಾಗಿರುವ ಎಲ್ಲಾ ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಡಿಜಿಟಲ್ ಸ್ಕ್ರೀನ್ ಬಳಿಯ ಒಂದು ಕ್ಯಾಮೆರಾ ದುರಸ್ತಿಗೀಡಾಗಲು ಹೇಗೆ ಸಾಧ್ಯವೆಂದು ಪ್ರಶ್ನಿಸಿದರು.
ಒಟ್ಟು ಪ್ರಕರಣ ಅನೇಕ ಸಂಶಯಗಳನ್ನು ಹುಟ್ಟು ಹಾಕುತ್ತಿದ್ದು, ತನಿಖೆÉಯ ವರದಿ ಬರುವ ಮೊದಲೇ ಎಲ್ಲಾ ಘಟನಾವಳಿಗಳಿಗೆ ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಹೊಣೆÉಗಾರರನ್ನಾಗಿ ಮಾಡಿರುವದು ಸರಿಯಾದ ಕ್ರಮವಲ್ಲವೆಂದರು. ನಗರಸಭೆÉಯ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಅಧ್ಯಕ್ಷರಿಗೆ ಅಧ್ಯಕ್ಷ ಸ್ಥಾನದ ಮೇಲಷ್ಟೆ ಪ್ರೀತಿ ಇದ್ದರೆ ಸಾಲದೆಂದು ಪೆÀÇನ್ನಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ, ಅಶ್ಲೀಲ ಚಿತ್ರ ಪ್ರದರ್ಶನದ ಫೆÀÇೀಟೋವನ್ನು ತೆಗೆದ ಅಧಿಕಾರಿಗಳು ಇದೀಗ ಆಡಳಿತ ಪಕ್ಷದ ಬೆದರಿಕೆಗೆ ಮಣಿದು ಚಿತ್ರ ಪ್ರದರ್ಶನವನ್ನು ನೋಡಿಲ್ಲವೆಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಈ ವಿಚಾರ ತಿಳಿಸಿದ ಅಧಿಕಾರಿಯ ಬಳಿ ತಾನು ಪ್ರಶ್ನಿಸಿದಾಗ ನೋಡಬಾರದ ಚಿತ್ರ ಪ್ರದರ್ಶನವಾಗಿದೆ ಎಂದು ಹೇಳಿಕೊಂಡಿದ್ದರು. ಆದರೆ, ಇದೀಗ ಇಲ್ಲವೆಂದು ಹೇಳುತ್ತಿದ್ದಾರೆ. ಅಶ್ಲೀಲ ಚಿತ್ರ ಅಲ್ಲದಿದ್ದರೆ ಫೋಟೋ ತೆಗೆಯುವ ಅಗತ್ಯವೇನಿತ್ತು, ಡಾಟಾ ಆಪರೇಟರ್ ಸಂಧ್ಯಾ ಅವರ ಬಳಿ ವಿಷಯ ತಿಳಿಸಿ ಡಿಜಿಟಲ್ ಸ್ಕ್ರೀನ್ ಆಫ್ ಮಾಡಿಸಿದ್ದು ಯಾಕೆ ಎಂದು ಪ್ರಶ್ನಿಸಿದರು.
ಸರ್ಕಾರದ ನಿಯಮಾವಳಿಯಂತೆ ಕಾರ್ಯನಿರ್ವಹಿಸದ ಡಾಟಾ ಆಪರೇಟರ್ ವಿರುದ್ಧ ಬೊಟ್ಟು ಮಾಡಲೇಬೇಕಾಗಿದೆ. ಸಂಧ್ಯಾ ಅವರ ಸಹೋದರ ಸೈಬರ್ ಕ್ರೈಂ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವದರಿಂದ ನಿಷ್ಪಕ್ಷಪಾತ ತನಿಖೆ ನಡೆಯುವ ಬಗ್ಗೆ ಸಂಶಯವಿದೆ. ಆದ್ದರಿಂದ ಬೆಂಗಳೂರು ಸೈಬರ್ ಕ್ರೈಂ ವಿಭಾಗ ತನಿಖೆ ನಡೆಸಲಿ ಎಂದು ಆಗ್ರಹಿಸಿದರು. ಅಧ್ಯಕ್ಷರ ವಿರುದ್ಧ ಗೂಬೆ ಕೂರಿಸಿ ಕೆಟ್ಟ ರಾಜಕಾರಣ ಮಾಡುವ ಅಗತ್ಯವಿಲ್ಲವೆಂದ ರಮೇಶ್, ವೈಫೈ ಮೂಲಕ ಡಿಜಿಟಲ್ ಸ್ಕ್ರೀನ್‍ನಲ್ಲಿ ಚಿತ್ರ ಪ್ರದರ್ಶನವಾಗಲು ಸಾಧ್ಯವಿಲ್ಲವೆಂದರು.
ಕಾಂಗ್ರೆಸ್ ಸದಸ್ಯ ನಂದ ಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ತಾನು ಡಾಟಾ ಆಪರೇಟರ್‍ಗೆ ಕಿರುಕುಳ ನೀಡಿದ್ದೇ ಆಗಿದ್ದಲ್ಲಿ ತನ್ನ ವಿರುದ್ಧ ದೂರು ನೀಡಬಹುದಾಗಿತ್ತು. ಆದರೆ, ವಿನಾಕಾರಣ ಆರೋಪ ಹೊರಿಸ ಲಾಗುತ್ತಿದೆ. ಅಲ್ಲದೆ ನಂದಕುಮಾರ್ ಅವರು ಕೆಲವು ವ್ಯಕ್ತಿಗಳ ಮೂಲಕ ದೌರ್ಜನ್ಯ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದ ಕೆ.ಎಸ್.ರಮೇಶ್, ಎಲ್ಲಾ ಕೇಸ್‍ಗಳನ್ನು ಎದುರಿಸಲು ಸಿದ್ಧವೆಂದರು. ಸದಸ್ಯ ನಂದಕುಮಾರ್ ಅವರು ನಿಯಮ ಬಾಹಿರವಾಗಿ ನಗರದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಮುಂದಾಗಿರುವದು ಮತ್ತು ಅವರ ವಾಸದ ಮನೆ ಕಾನೂನಿಗೆ ವಿರುದ್ಧವಾಗಿ ನಿರ್ಮಾಣ ಗೊಂಡಿರುವ ಬಗ್ಗೆ ಅಗತ್ಯ ದಾಖಲೆ ಗಳು ತÀನ್ನ ಬಳಿಯಿದ್ದು, ಸದ್ಯದಲ್ಲೇ ಬಹಿರಂಗಪಡಿಸಲಿದ್ದೇನೆ ಎಂದರು.
ಅಧ್ಯಕ್ಷರು ಅಸಹಕಾರ ತೋರುತ್ತಿ ರುವದರಿಂದ ಹೊಂದಾಣಿಕೆಯಿಂದ ನಗರಸಭೆಯಲ್ಲಿ ಕಾರ್ಯನಿರ್ವಹಿಸಲು ತಮ್ಮಿಂದ ಸಾಧ್ಯವಾಗುತ್ತಿಲ್ಲವೆಂದು ರಮೇಶ್ ಅಸಹಾಯಕತೆ ವ್ಯಕ್ತಪಡಿಸಿದರು.
ನಗರಸಭಾ ಉಪಾಧ್ಯಕ್ಷ ಕೆ.ಎಸ್. ಪ್ರಕಾಶ್ ಮಾತನಾಡಿ, ನಗರಸಭೆಯ ವಿವಿಧ ಕೆಲಸ ಕಾರ್ಯಗಳ ಸಂದರ್ಭ ಅಧ್ಯಕ್ಷರು ವಿರೋಧ ಪಕ್ಷವಾದ ಬಿಜೆಪಿ ಸದಸ್ಯರೊಂದಿಗೆ ಪÀÇರಕವಾಗಿ ನಡೆದುಕೊಂಡಿಲ್ಲ. ಬದಲಾಗಿ ತಮ್ಮ ಅಗತ್ಯತೆಗಳ ಸಂದರ್ಭವಷ್ಟೆ ಮಾತುಕತೆ ನಡೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ಉಣ್ಣಿಕೃಷ್ಣನ್, ಅನಿತಾ ಪೂವಯ್ಯ ಹಾಗೂ ಲಕ್ಷ್ಮಿ ಉಪಸ್ಥಿತರಿದ್ದರು.