ಶನಿವಾರಸಂತೆ, ಜು. 18: ದುಂಡಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಪಂಚಾಯಿತಿ ಮಾಸಿಕ ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ವಹಿಸಿದ್ದರು.
ಚಿಕ್ಕಕೊಳತ್ತೂರು ಬಸವೇಶ್ವರ ನಗರಕ್ಕೆ ಮಾರ್ಗಸೂಚಿ ನಾಮಫಲಕ ಹಾಕಿರುವದಕ್ಕೆ ಶನಿವಾರಸಂತೆ ಗ್ರಾಮ ಪಂಚಾಯಿತಿ ತೊಂದರೆ ಕೊಡುತ್ತಿ ರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಶನಿವಾರಸಂತೆ ಗ್ರಾಮ ಪಂಚಾಯಿತಿ ಆಕ್ಷೇಪಣೆ ಮಾಡಿರುವ ದಕ್ಕೆ ತಾತ್ಕಾಲಿಕ ತಡೆಯಾಜ್ಞೆ ತರಲಾಗಿದೆ. ಶನಿವಾರಸಂತೆ ಮತ್ತು ದುಂಡಳ್ಳಿಗಳು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಹೋಗುವದು ಒಳ್ಳೆಯದು. ಶನಿವಾರಸಂತೆ ಪಂಚಾಯಿತಿಗೆ (ಸಾರ್ವಜನಿಕರಿಗೆ) ಕುಡಿಯುವ ನೀರಿನ ಸುಮಾರು 200 ನಲ್ಲಿ ಕನೆಕ್ಷನ್‍ಗಳನ್ನು ಕಡಿತ ಗೊಳಿಸಲಾಗುವದು ಹಾಗೂ ಇತರ ಎಲ್ಲಾ ಸೌಲಭ್ಯಗಳನ್ನು ಕಡಿತ ಗೊಳಿಸಲಾಗುವದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
2017-18 ನೇ ಸಾಲಿಗೆ ಹೊಸ ದಾಗಿ ಬಸವ ವಸತಿ ಯೋಜನೆಗೆ 26 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಸುಳುಗಳಲೆ ಕಾಲೋನಿಯಲ್ಲಿ ಖಾಲಿ ಇರುವ ಮನೆ ನಿವೇಶನದಲ್ಲಿ ಕಸ ಹಾಕುತ್ತಿರುವ ಆಕ್ಕ ಪಕ್ಕದವರಿಗೆ ತೊಂದರೆಯಾಗುತ್ತಿರುವ ಬಗ್ಗೆ ಕಸ ಹಾಕುತ್ತಿರುವವರಿಗೆ ನೋಟಿಸ್ ನೀಡುವಂತೆ ನಿರ್ಣಯಿಸಲಾಯಿತು. ಕಾಜೂರು ಹೊಳೆಯ ದಡದಲ್ಲಿ ಕಸ ಹಾಕುತ್ತಿರುವವರ ಬಗ್ಗೆ ಕ್ರಮ ಕೈಗೊಳ್ಳುವಂತೆ ತೀರ್ಮಾನಿಸ ಲಾಯಿತು. ಸುಳುಗಳಲೆ ಸಾರ್ವಜನಿಕ ಹಿಂದೂ ಸ್ಮಶಾನಕ್ಕೆ ವಿದ್ಯುತ್ ಸಂಪರ್ಕ ನೀಡಲು ಎನ್‍ಒಸಿ ನೀಡುವಂತೆ ತೀರ್ಮಾನಿಸಲಾಯಿತು. ಕಸ ವಿಲೇವಾರಿ ಬಗ್ಗೆ ಪ್ರಸ್ತಾಪಿಸಲಾಗಿ ಪೊನ್ನಂಪೇಟೆಯಲ್ಲಿರುವ ಕಸ ಸಂರಕ್ಷಣಾ ಘಟಕಕ್ಕೆ ಖುದ್ದು ಭೇಟಿ ಮಾಡಿ, ದುಂಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಜಾಗ ಗುರುತಿಸಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ರೂಪ ಪುಟ್ಟರಾಜ್, ಸದಸ್ಯರುಗಳಾದ ಎನ್.ಕೆ. ಸುಮತಿ ಸತ್ಯ, ನೇತ್ರಾವತಿ, ಬಿ.ಎಂ. ಪಾರ್ವತಿ, ಕಮಲಮ್ಮ, ಮನು ಹರೀಶ್, ಬಿಂದಮ್ಮ, ಎ.ಆರ್. ಸಂತೋಷ್, ಲೆಕ್ಕಾಧಿಕಾರಿ ಎಂ.ಎನ್ ದೇವರಾಜ್ ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಸ್ವಾಗತಿಸಿ, ವಂದಿಸಿದರು.