ಶನಿವಾರಸಂತೆ, ಜು. 18: ಅಸಂಘಟಿತ ಕಾರ್ಮಿಕರಿಗೆ ಸರಕಾರದಿಂದ ದೊರೆಯುವ ಸೌಲಭ್ಯ ಮತ್ತು ಯೋಜನೆಗಳ ಮಾಹಿತಿಯನ್ನು ತಲಪಿಸುವ ಮೂಲಕ ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್‍ನಲ್ಲಿ ನೋಂದಾಯಿಸಿ ಪಕ್ಷವನ್ನು ಬಲಪಡಿಸಬೇಕು ಎಂದು ಐ.ಎನ್.ಟಿ.ಯು.ಸಿ. ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಹೇಳಿದರು. ಕೊಡ್ಲಿಪೇಟೆ ಅಂಬೇಡ್ಕರ್ ಭವನದಲ್ಲಿ ಸಂಘಟನೆಯ ಜಿಲ್ಲಾ ಸಮಿತಿ ವತಿಯಿಂದ ನಡೆದ ಹೋಬಳಿಮಟ್ಟದ ಕಾರ್ಯಕರ್ತರು ಮತ್ತು ಕಾರ್ಮಿಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಯೋಜನೆಗಳ ಮಾಹಿತಿ ನೀಡಿದರು. ತಾಲೂಕು ಸಮಿತಿ ಅಧ್ಯಕ್ಷ ಬಿ.ಎಸ್. ಅನಂತಕುಮಾರ್, ಕಾಂಗ್ರೆಸ್ ಅಲ್ಪಸಂಖ್ಯಾತ ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಹಾಜಿ, ಮಹಿಳಾ ಘಟಕದ ಜಿಲ್ಲಾ ಕಾರ್ಯದರ್ಶಿ ಗೀತಾ ಹಾಗೂ ತಾ.ಪಂ. ಸದಸ್ಯ ಹೆಬ್ಬಾಲೆ ಧರ್ಮಪ್ಪ ಮಾತನಾಡಿದರು.
ಜಿಲ್ಲಾ ವಕ್ತಾರ ಅಜ್ಜಳ್ಳಿ ರವಿ, ಉಪಾಧ್ಯಕ್ಷ ಕಿಶೋರ್, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲ, ಜಿಲ್ಲಾ ಕಾರ್ಯದರ್ಶಿ ಗೋವಿಂದರಾಜ್ ದಾಸ್, ತಾಲೂಕು ಕಾರ್ಯದರ್ಶಿ ಗಿರೀಶ್, ಮಹಮದ್ ಹನೀಫ್, ಯತೀಶ್ ಕ್ಯಾತೆ, ಜನಾರ್ಧನ್, ಜಗದೀಶ್, ಹೆಚ್.ಕೆ. ಅಬೂಬಕರ್, ವಸಂತ್, ಹರೀಶ್ ಉಪಸ್ಥಿತರಿದ್ದರು.