ಮಡಿಕೇರಿ, ಜು. 18: ಕೊಡ್ಲಿಪೇಟೆ ಹಾಗೂ ಹಂಡ್ಲಿ ವಲಯ ಮಹಿಳಾ ಕಾಂಗ್ರೆಸ್ ಸಭೆ ಸೋಮವಾರಪೇಟೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ಹರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕೊಡ್ಲಿಪೇಟೆ ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಕವಿತಾ ಹಾಗೂ ಹಂಡ್ಲಿ ಮಹಿಳಾ ಕಾಂಗ್ರೆÀಸ್ ಅಧ್ಯಕ್ಷರನ್ನಾಗಿ ಕೆ.ಡಿ. ಶೋಭಾ ಅವರುಗಳನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜಿ.ಆರ್. ಪುಷ್ಪಲತಾ, ಕೊಡ್ಲಿಪೇಟೆ ಗ್ರಾ. ಪಂ. ಸದಸ್ಯೆ ಹೊನ್ನಮ್ಮ, ಫಾತಿಮಾ ಬಿ., ಶಶಿ ಮಹೇಶ್, ಹಂಡ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರೂಪ ದಿನೇಶ್, ನಿರ್ಮಲ, ಸಂಗೀತ ಇನ್ನಿತರರು ಹಾಜರಿದ್ದರು.
ಸಂಪಾಜೆ ವಲಯ ಮಹಿಳಾ ಕಾಂಗ್ರೆಸ್ ಸಭೆ ನಾಪೋಕ್ಲು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆÀ ಮಂಡ್ಯನ್ ಆಮಿನಾ ಮೊಯಿದು ಕುಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಪಾಜೆ ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಡಿ.ಡಿ. ಲೀಲಾವತಿ ಅವರನ್ನು ಇದೇ ಸಂದರ್ಭ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ರಾಜ್ಯ ಸಮಿತಿಯ ಕಾರ್ಯದರ್ಶಿ ಶೈಲಾ ಕುಟ್ಟಪ್ಪ, ಹಿರಿಯರಾದ ಬೊಳ್ಳಮ್ಮ ನಾಣಯ್ಯ, ನಾಪೋಕ್ಲು ವಲಯಾಧ್ಯಕ್ಷೆ ಲೀಲಾವತಿ, ಸಂಪಾಜೆ ಗ್ರಾ.ಪಂ. ಸದಸ್ಯೆ ರಾಜೇಶ್ವರಿ, ವೇದಾವತಿ, ಸುಬ್ಬಮ್ಮ, ರೂಯಿಲು, ಸಂಪಾಜೆ ವಲಯಾಧ್ಯಕ್ಷರಾದ ಸುರೇಶ್, ಪೆರಾಜೆಯ ಜಗದೀಶ್, ನಾಪೋಕ್ಲು ಬ್ಲಾಕ್ ಕಾರ್ಯದರ್ಶಿ ಪುರುಷೋತ್ತಮ ಹಾಗೂ ಸಫಿಯಾ ಹಾಗೂ ಇನ್ನಿತರರು ಹಾಜರಿದ್ದರು.
ಎಲ್ಲಾ ವಲಯ ಸಭೆಯಲ್ಲಿಯೂ ಜಿಲ್ಲಾಧ್ಯಕ್ಷೆ ಜಿ.ಆರ್. ಪುಷ್ಪಲತಾ ಉಪಸ್ಥಿತರಿದ್ದು, ಪಕ್ಷ ಸಂಘಟನೆಯ ಬಗ್ಗೆ ಮಾರ್ಗದರ್ಶನ ನೀಡಿದರು.