ನಾಪೆÇೀಕ್ಲು, ಜು. 18: ತಾ. 17ರಂದು ಚೇಲಾವರ ಗ್ರಾಮದಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತೆ ಜೈನಿರ ರಮ್ಯ ಅವರ ಪತಿ ಜೈನಿರ ಲೋಕೇಶ್ ವಿರುದ್ಧ ರಮ್ಯಳ ಸಹೋದರ ಚೇರಂಬಾಣೆ ಕೊಳಗದಾಳು ಗ್ರಾಮದ ಮುಕ್ಕಾಟಿರ ರಂಜಿತ್ ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಚೋದನೆ ದೂರು ದಾಖಲಿಸಿದ್ದಾರೆ.
ಗಂಡು ಮಗು ನೀಡಲಿಲ್ಲ. ವಯಸ್ಸಾಗಿದೆ. ತಾಯಿ ಮನೆಗೆ ಹೋಗಬಾರದು ಎಂದು ತಾ. 17ರಂದು ಗಂಡ ಲೋಕೇಶ್ ಜಗಳವಾಡಿದ ಕಾರಣ ಅಕ್ಕ ರಮ್ಯ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಗಂಡ ಲೋಕೇಶ್, ಅತ್ತೆ ಭವಾನಿ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ನಾಪೆÇೀಕ್ಲು ಪೊಲೀಸರು ರಮ್ಯ ಪತಿ ಲೋಕೇಶ್ ಅವರನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.