ವೀರಾಜಪೇಟೆ. ಜು. 18: ವೀರಾಜಪೇಟೆಯ ಕರ್ನಾಟಕ ಸಂಘದ ಇಂದಿನ ಮಹಾಸಭೆಯಲ್ಲಿ ಸಂಘದ ಸದಸ್ಯರು, ಸಂಘದ ಆಡಳಿತ ಮಂಡಳಿ ನೀಡಿದ ಲೆಕ್ಕ ಪತ್ರ ಹಾಗೂ ಹಿಂದೆ ನಡೆದÀ ಮಹಾಸಭೆ ನಡಾವಳಿಕೆಯನ್ನು ತಿರಸ್ಕಾರ ಮಾಡಿ ತಕ್ಷಣ ಚುನಾವಣೆಗೆ ಪಟ್ಟು ಹಿಡಿದ ಕಾರಣ ಇಂದಿನ ಮಹಾಸಭೆಯನ್ನು ರದ್ದು ಮಾಡಿ ಸೆಪ್ಟೆಂಬರ್ 20ಕ್ಕೆ ಚುನಾವಣೆ ನಿಗದಿಪಡಿಸಿ ಚುನಾವಣೆ ಬಳಿಕ ಮಹಾಸಭೆ ನಡೆಸಲು ತಿರ್ಮಾನಿಸಲಾಯಿತು.

ಕರ್ನಾಟಕ ಸಂಘದ ಅಧ್ಯಕ್ಷ ಚಿಲ್ಲವಂಡ ಕಾವೇರಪ್ಪ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನÀ ಪುರಭವನದಲ್ಲಿ ನಡೆದ ಸಭೆ ಆರಂಭದಲ್ಲಿಯೇ ಗೊಂದಲಮಯವಾಯಿತು. ಹತ್ತು ವರ್ಷದ ಬಳಿಕ ಮಹಾಸಭೆ ನಡೆಸುವದನ್ನು ಸಂಘದ ಸದಸ್ಯರುಗಳು ಸರ್ವ ಸಮ್ಮತವಾಗಿ ವಿರೋಧಿಸಿದಾಗ ಕಾವೇರಪ್ಪ ಅವರು ಸದಸ್ಯರೊಂದಿಗೆ ಕ್ಷಮೆಯಾಚಿಸಿದ ಪ್ರಸಂಗ ನಡೆಯಿತು.

ಆರಂಭದಲ್ಲಿ ಸಂಘದ ಸದಸ್ಯರಾದ ಮುಲ್ಲೇಂಗಡ ಶಂಕರಿ ಪೊನ್ನಪ್ಪ, ತಿತಿಮಾಡ ಶಂಕರಿ, ಕಂಜಿತಂಡ ಮಂದಣ್ಣ , ಚೇಂದ್ರಿಮಾಡ ಗಣೇಶ್ ನಂಜಪ್ಪ , ಬಾಚೀರ ಬಿದ್ದಪ್ಪ, ವಾಟೇರಿರ ಶಂಕರಿ, ವಕೀಲ ಪೂಳಂಡ ವಿನು ಮುಂತಾದ ಸದಸ್ಯರು, ಮಹಾಸಭೆಯ ನೋಟಿಸ್ ಸದಸ್ಯರಿಗೆ ಸಮರ್ಪಕವಾಗಿ ನೀಡದೆ ಉದ್ದೇಶ ಪೂರ್ವಕವಾಗಿ ಕೇವಲ ಶೇ20 ರಷ್ಟು ಸದಸ್ಯರಿಗೆ ಮಾತ್ರ ತಿಳಿಸಲಾಗಿದೆ. ಸಂಘದ ಆಡಳಿತ ಮಂಡಳಿಯವರ ಚಳಿ ಬಿಡಿಸಿ ಎಂದು ಏರಿದ ಧ್ವನಿಯಲ್ಲಿ ತರಾಟೆಗೆ ತೆಗೆದು ಕೊಂಡರು. ಸಂಘದಲ್ಲಿ ಸುಮಾರು 1,800 ಸದಸ್ಯರಿದ್ದು ಅವರಲ್ಲಿ ಎಲ್ಲರಿಗೂ ನೋಟಿಸ್ ನೀಡದೆ ಆಡಳಿತ ಮಂಡಳಿ ನುಣುಚಿಕೊಂಡಿದೆ. ಇದರ ಮರ್ಮವೇನು ಎಂದು ಕೇಳಿದರು. ಹತ್ತು ವರ್ಷದಿಂದ ಸಂಘಕ್ಕೆ ಚುನಾವಣೆ ನಡೆಯದೆ ಕಾನೂನು ಬಾಹಿರವಾಗಿ ಸಂಘದ ಆಡಳಿತ ಮಂಡಳಿ ಮುಂದುವರೆಯುತ್ತಿದೆ ಎಂದು ದೂರಿದರು. ಕಾರ್ಯದರ್ಶಿ ಮೂಕಚಂಡ ಅರುಣ್ ಅಪ್ಪಣ್ಣ 1000 ಸದಸ್ಯರಿಗೆ ನೋಟಿಸ್ ಕಳಿಸಿದ್ದು, ಒಂದು ಮನೆಯಲ್ಲಿ ನಾಲ್ಕಾರು ಸದಸ್ಯರಿದ್ದರೆ ಒಂದು ಕವರಿನಲ್ಲಿ ಅವುಗಳನ್ನು ಸೇರಿಸಿ ಕಳಿಸಲಾಗಿದೆ ಎಂದರು.

ಇದರ ನಡುವೆ ಆಡಳಿತ ಮಂಡಳಿಯವರು 2014- 15 ನೇ ಸಾಲಿನ ಮಹಾಸಭೆ ವರದಿ ಮಂಡಿಸಲು ಮುಂದಾದಾಗ ಸದಸ್ಯರು, ಅನೇಕ ವರ್ಷಗಳಿಂದ ಮಹಾಸಭೆ ನಡೆಸಿಲ್ಲ, ಚುನಾವಣೆ ಆಗಿಲ್ಲ ಇದು ಹೇಗೆ ಆಯಿತು ಎಂದು ಚೇಂದ್ರಿಮಾಡ ಗಣೇಶ್ ನಂಜಪ್ಪ, ವಾಟೇರಿರ ಶಂಕರಿ, ಮಲ್ಲೇಂಗಡ ಮಧೋಶ್ ಪೂವಯ್ಯ, ಅಂಜಪರವಂಡ ಅನಿಲ್, ಮಲ್ಲೇಂಗಡ ಶಂಕರಿ ಪೊನ್ನಪ್ಪ, ಕೂತಂಡ ಸಚಿನ್, ಕೋಲತಂಡ ರಘು ಮಾಚಯ್ಯ ಮುಂತಾದವರು ಆಡಳಿತ ಮಂಡಳಿವಯವರನ್ನು ತರಾಟೆಗೆ ತೆಗೆದುಕೊಂಡರು. ಸಂಘದ ಮಾಜಿ ಅಧ್ಯಕ್ಷ ಬೆಲ್ಲು ಬೋಪಯ್ಯ ಇದು ಸಂಘದ ಕಚೇರಿಯಲ್ಲಿ ನಡೆಸಿದ ಮಹಾÀಸಭೆ ಎಂದು ಸಮಜಾಯಿಷಿಕೆ ನೀಡಿದರು. ಸಭೆ ಒಪ್ಪಲಿಲ್ಲ. ಸಭೆಯ ವರದಿಯನ್ನು ಮಂಡಿಸಿದ ಬಳಿಕ ಮಾತನಾಡಿದ, ಸದಸ್ಯ ಕೋಲತಂಡ ರಘು ಮಾಚಯ್ಯ ಇದು ಏಕ ಪಾತ್ರಾಭಿನಯದ ಆಡಳಿತ ಮಂಡಳಿಯ ಸ್ವಾರ್ಥದ ಮಹಾಸಭೆ, ಸಂಘದ ಸದಸ್ಯರನ್ನು ಮೂರ್ಖ ರಾಗಿಸಬೇಡಿ, ಕುರುಡುತನದ ವಾದ ಬೇಡ ಎಂದರು. ಆಡಳಿತ ಮಂಡಳಿಯವರು ಯಾವ ಸಮಾಜಾಯಿಷಿಕೆ ನೀಡಿದರೂ ಸಭೆಯಲ್ಲಿ ಸದಸ್ಯರು ಒಪ್ಪದೆ ಮಹಾಸಭೆ ಮುಂದುವರೆಸಲು ಆಕ್ಷೇಪಿಸಿದರು. ಈ ಸಾಲಿನ ಲೆಕ್ಕಪತ್ರ ಮಂಡನೆ ಸಾಲದು, ಹತ್ತು ವರ್ಷದ ಲೆಕ್ಕಪತ್ರ ನೀಡುವಂತೆ ಆಗ್ರಹಿಸಿದಾಗ ಸದಸ್ಯರುಗಳ ಗೊಂದಲದ ನಡುವೆಯೇ ನೂತನ ಆಡಳಿತ ಮಂಡಳಿಯ ಚುನಾವಣೆ ನಡೆಸಲು ಆಡಳಿತ ಮಂಡಳಿ ಸಮ್ಮತಿಸಿತು. ನೂತನ ಆಡಳಿತ ಮಂಡಳಿಯ ಅಧಿಕಾರ ವಹಿಸಿಕೊಂಡ ನಂತರ ಮಹಾಸಭೆ ಕರೆಯಲು ಸದಸ್ಯರುಗಳು ಸಮ್ಮತಿ ನೀಡಿದರು.

ಕೊನೆಗೆ ಸಭೆಯಲ್ಲಿದ್ದ ಸದಸ್ಯರ ಬಿಗಿ ಪಟ್ಟಿನಿಂದ ಸೆ. 20 ಕ್ಕೆ ಚುನಾವಣೆಗೆ ದಿನಾಂಕ ನಿಗದಿ ಮಾಡುವ ಭರವಸೆಯೊಂದಿಗೆ ಮಹಾಸಭೆಯನ್ನು ಮುಂದೂಡ ಲಾಯಿತು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸಿ. ಗಿರೀಶ್ ಪೂಣಚ್ಚ ಸಹಕಾರ್ಯದರ್ಶಿ ಮುಲ್ಲೇಂಗಡ ಅಶೋಕ್, ಖಜಾಂಚಿ ಕೋಟೆರ ಗಣೇಶ್ ತಮ್ಮಯ್ಯ ಹಾಗೂ ಆಡಳಿತ ಮಂಡಳಿಯ ಇತರ ಸದಸ್ಯರುಗಳು ಹಾಜರಿದ್ದರು.