ಸುಂಟಿಕೊಪ್ಪ,ಜು.18: ಕಾಡುಗಳಲ್ಲಿ ಪಾಳುಬಿದ್ದ ಗದ್ದೆಗಳಲ್ಲಿ ಮಳೆಗಾಲದಲ್ಲಿ ಹಾವುಗಳು ಪ್ರತ್ಯಕ್ಷವಾಗುವುದು ಸಹಜ. ಆದರೆ ಶಾಲಾ ಕಾಲೇಜಿನಲ್ಲಿ ಪಾಠÀ ಪ್ರವಚನ ನಡೆಯುತ್ತಿರುವಾಗಲೇ ಉರಗ ಪ್ರತ್ಯಕ್ಷವಾದರೆ ಏನಾಗಬೇಡ...........!

ಸುಂಟಿಕೊಪ್ಪದ ಉಲುಗುಲಿ ರಸ್ತೆಯಲಿ ಕಳೆದ ವರ್ಷದಿಂದ ನೂತನ ಸುಸಜ್ಜಿತ ಕಟ್ಟಡದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ತಲೆ ಎತ್ತಿ ನಿಂತಿದೆ.

ಈ ಕಾಲೇಜಿಗೆ ತಡೆಗೋಡೆ ನಿರ್ಮಿಸಿಲ್ಲ. ಇದರಿಂದಾಗಿ ರಾತ್ರಿ ಪುಂಡ ಪೋಕರಿಗಳು ಬಂದು ಮದ್ಯ ಸೇವಿಸಿ ಬಾಟಲಿಗಳನ್ನು ಒಡೆದು ಹಾಕಿ ದುಷ್ಕøತ್ಯ ಎಸಗುವದು ಮಾಮೂಲಿ. ಬೀಡಾಡಿ ದನಗಳು ರಾತ್ರಿ ವೇಳೆ ಕಾಲೇಜಿನ ಆವರಣದಲ್ಲಿ ಬೀಡು ಬಿಟ್ಟಿರುತ್ತವೆ.

ಈಗ ಉರಗಗಳ ಸರದಿ ತಡೆಗೋಡೆ ನಿರ್ಮಿಸಲು ಆಡಳಿತ ಮಂಡಳಿಯವರು ಕಲ್ಲುಗಳನ್ನು ಶಾಲೆ ಕಟ್ಟಡದ ಒತ್ತಿನಲ್ಲಿ ತಂದು ಹಾಕಿದ್ದಾರೆ. ಆ ಕಲ್ಲಿನೊಳಗೆ ಆಶ್ರಯ ಪಡೆದ ವಿಷಕಾರಿಕ ಹಾವುಗಳು ಕಾಲೇಜಿನಲ್ಲಿ ಪಾಠ ಪ್ರವಚನದಲ್ಲಿ ಉಪನ್ಯಾಸಕರು ತೊಡಗಿದ್ದಾಗ ಕಿಟಕಿ ಮೂಲಕ ಪಾಠಕೇಳಲು ಇಣುಕಿ ನೋಡುತ್ತವೆ! ವಿದ್ಯಾರ್ಥಿಗಳು ಹಾವನ್ನು ನೋಡಿ ತರಗತಿಯಿಂದ ಎದ್ದು ಬಿದ್ದು ಓಡಿದ ಘಟನೆಯೂ ನಡೆದಿದೆ.

ಇದರ ಅಂಚಿನಲ್ಲಿಯೇ ಪುಟಾಣಿ ಕಂದಮ್ಮಗಳ ಅಂಗನವಾಡಿ ಕೇಂದ್ರವೂ ಕಾರ್ಯಾಚರಿಸುತ್ತಿದ್ದು, ಅನಾಹುತ ಸಂಭವಿಸುವ ಮುನ್ನ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.