ಸೋಮವಾರಪೇಟೆ, ಜು. 18: ಕಳೆದ ಕೆಲ ದಿನಗಳಿಂದ ಬೀಗ ಜಡಿಯದೇ ಭದ್ರತೆಯ ಕೊರತೆ ಎದುರಿಸುತ್ತಿದ್ದ ಇಲ್ಲಿನ ತಾಲೂಕು ಕಚೇರಿಯ ಆರ್.ಟಿ.ಸಿ. ವಿತರಣಾ ಕೇಂದ್ರಕ್ಕೆ ಕೊನೆಗೂ ಬೀಗದ ಭಾಗ್ಯ ದೊರೆತಿದೆ.
ಸರ್ಕಾರಿ ಕಚೇರಿಯಾಗಿದ್ದು ಸಾರ್ವಜನಿಕರ ಹಲವಷ್ಟು ದಾಖಲೆಗಳು, ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ಇನ್ನಿತರ ಸ್ವತ್ತುಗಳನ್ನು ಒಳಗೊಂಡಿರುವ ಆರ್ಟಿಸಿ ವಿತರಣಾ ಕೇಂದ್ರಕ್ಕೆ ಬೀಗ ಜಡಿಯದೇ ಸಿಬ್ಬಂದಿಗಳು ತೆರಳುತ್ತಿದ್ದ ಬಗ್ಗೆ ‘ಶಕ್ತಿ’ಯಲ್ಲಿ ವರದಿಯಾದ ಮರುದಿನವೇ ಕಚೇರಿಗೆ ಬೀಗದ ಆಗಮನವಾಗಿದೆ.