ಮಡಿಕೇರಿ, ಜು. 19: ಸಂಪಾಜೆ ಸಮೀಪದ ಕೋಪಟ್ಟಿಮಲೆಯಲ್ಲಿ ಹೊಂದಿದ್ದ ಸುಮಾರು 18.12 ಕೋಟಿ ಮೌಲ್ಯದ 151.03 ಎಕರೆ ಜಾಗವನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆ ಮಹಿಳಾ ಮಾಲೀಕರಿಗೆ ಸೂಚಿಸಿದೆ.ಕೇರಳದ ಹಿರಿಯ ಪೊಲೀಸ್ ಅಧಿಕಾರಿ ಜಾಕೋಬ್ ಥೋಮಸ್ ಅವರ ಪತ್ನಿ ಡೈಸಿ ಎಂಬವರು 1990ರಲ್ಲಿ ಈ ಜಾಗವನ್ನು 15 ಲಕ್ಷ ರೂಪಾಯಿಗೆ ಖರೀದಿಸಿದ್ದರು. ಈ ಜಾಗವು ಮೀಸಲು ಅರಣ್ಯವೆಂದು ಪ್ರತಿಪಾದಿಸಿದ್ದ ಅರಣ್ಯ ಇಲಾಖೆ 2016ರಲ್ಲಿ ಜಾಗ ತೆರವುಗೊಳಿಸುವಂತೆ ಸೂಚಿಸಿತ್ತು. ಜಾಗದ ಮಾಲೀಕರು ಈ ಬಗ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಆದರೆ ಇದೇ ತಾ. 7ರಂದು ಹಿಂದಿನ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಅವರು ಆದೇಶ ಹೊರಡಿಸಿ ಆಗಸ್ಟ್ 7ರ ಒಳಗೆ ಎಲ್ಲ ಜಾಗವನ್ನು ತೆರವುಗೊಳಿಸುವಂತೆ ಸೂಚಿಸಿದ್ದಾರೆ. ಪ್ರಸ್ತುತ ಮೌಲ್ಯ ರೂ. 18.12 ಕೋಟಿ ಎಂದು ಅಂದಾಜಿಸಲಾಗಿದೆ.