ಮಡಿಕೇರಿ, ಜು. 19: ಕೊಡಗು ಪ್ರೆಸ್ ಕ್ಲಬ್ನ 2017-2018ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ವಿಜಯವಾಣಿ ಹಿರಿಯ ವರದಿಗಾರ ಅಜ್ಜಮಾಡ ರಮೇಶ್ ಕುಟ್ಟಪ್ಪ ಆಯ್ಕೆಯಾಗಿದ್ದಾರೆ. ನಿರ್ಗಮಿತ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಪತ್ರಿಕಾ ಭವನದಲ್ಲಿ ನಡೆದ ನೂತನ ಆಡಳಿತ ಮಂಡಳಿ ಸಭೆಯಲ್ಲಿ ಪದಾಧಿಕಾರಿ ಗಳನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಟಿವಿ9 ವರದಿಗಾರ ಕೆ.ಬಿ. ಮಂಜುನಾಥ್, ಹಿರಿಯ ಉಪಾಧ್ಯಕ್ಷರಾಗಿ ವಿಜಯ ಕರ್ನಾಟಕ ವರದಿಗಾರ ಬಿ.ಎಸ್. ಲೋಕೇಶ್ ಸಾಗರ್, ಉಪಾಧ್ಯಕ್ಷರಾಗಿ ಸಂಯುಕ್ತ ಕರ್ನಾಟಕ ವರದಿಗಾರ ಆರ್. ಸುಬ್ರಮಣಿ, ಖಜಾಂಚಿಯಾಗಿ ವಿಶ್ವವಾಣಿ ವರದಿಗಾರ ರೆಜಿತ್ ಕುಮಾರ್ ಗುಹ್ಯ, ಸಂಘಟನಾ ಕಾರ್ಯದರ್ಶಿಯಾಗಿ ವಿಜಯವಾಣಿ ವರದಿಗಾರ ಎಂ.ಎ. ಅಜೀಜ್, ಸಹ ಕಾರ್ಯದರ್ಶಿಯಾಗಿ ಕನ್ನಡಪ್ರಭ ಜಿಲ್ಲಾ ವರದಿಗಾರ ವಿಘ್ನೇಶ್ ಎಂ. ಭೂತನಕಾಡು ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ನೂತನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಪ್ರೆಸ್ಕ್ಲಬ್ನಲ್ಲಿ ಪ್ರತಿಯೊಬ್ಬ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ ನೀಡುವ
(ಮೊದಲ ಪುಟದಿಂದ) ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗುವದು. ಹಿರಿಯರ ಮಾರ್ಗದರ್ಶನದೊಂದಿಗೆ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಚಟುವಟಿಕೆ ಆಯೋಜಿಸಲಾಗುವದು ಎಂದರು.
ನಾಮನಿರ್ದೇಶಕ ಸದಸ್ಯರಾಗಿ ಕನ್ನಡಪ್ರಭ ವರದಿಗಾರ ಎಸ್.ಎ. ಮುರ ಳೀಧರ್, ವಿಜಯಕರ್ನಾಟಕ ವರದಿಗಾರ ಎಸ್.ಎಂ. ಮುಬಾರಕ್, ಶಕ್ತಿ ವರದಿಗಾರ ನಾಗರಾಜ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ನಿರ್ದೇಶಕರಾದ ರಫೀಕ್ ತೂಚಮಕೇರಿ, ಬಿ.ಎಂ. ಮನು ಶೆಣೈ, ಎನ್.ಎನ್. ದಿನೇಶ್, ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಬಿ.ಸಿ. ದಿನೇಶ್ ಹಾಜರಿದ್ದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಅಜ್ಜಮಾಡ ಕುಟ್ಟಪ್ಪ