ಮಡಿಕೇರಿ, ಜು.20: ರೋಟರಿ ಕುಶಾಲನಗರ ಇವರ ವತಿಯಿಂದ ಕೃತಕ ಕಾಲು ಜೋಡಣೆ ಉಚಿತ ಶಿಬಿರವು ತಾ. 23 ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಕುಶಾಲನಗರದ ರೋಟರಿ ಭವನದಲ್ಲಿ ಏರ್ಪಡಿಸಲಾಗಿದೆ.

ಕೃತಕ ಕಾಲುಗಳ ಅವಶ್ಯಕತೆ ಇರುವವರು ಈ ಶಿಬಿರಕ್ಕೆ ಹಾಜರಾಗಿ ತಮ್ಮ ಕಾಲುಗಳ ಅಳತೆಗಳನ್ನು ನೀಡಬಹುದಾಗಿದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳಲು ಇಚ್ಚಿಸುವ ವಿಕಲಚೇತನರು ಮೊಬೈಲ್ ಸಂಖ್ಯೆ: 9449818835, 9448896332, 9845102311, ಸಂಪರ್ಕಿಸಬಹುದಾಗಿದೆ. ಈ ಶಿಬಿರದಲ್ಲಿ ಪಾಲ್ಗೊಳ್ಳುವ ವಿಕಲಚೇತನರು ಶೇ.40 ಹಾಗೂ ಅದಕ್ಕೂ ಹೆಚ್ಚು ವಿಕಲತೆ ಇರುವ ಬಗ್ಗೆ ಗುರುತಿನ ಚೀಟಿಯನ್ನು ಹಾಗೂ ವಿಳಾಸದ ದೃಢೀಕರಣಕ್ಕಾಗಿ ಚುನಾವಣಾ ಗುರುತಿನ ಚೀಟಿ/ಪಡಿತರ ಚೀಟಿ/ಆಧಾರ್ ಕಾರ್ಡ್ ಹಾಗೂ 2 ಭಾವಚಿತ್ರದೊಂದಿಗೆ ವಿಕಲಚೇತನ ವ್ಯಕ್ತಿಯೇ ಖುದ್ದಾಗಿ ಶಿಬಿರದಲ್ಲಿ ಹಾಜರಾಗಿ ಈ ಸೌಲಭ್ಯ ಪಡೆದುಕೊಳ್ಳಬೇಕೆಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ಕೊಡಗು ಜಿಲ್ಲೆ, ಮಡಿಕೇರಿ ಇವರು ಕೋರಿದ್ದು ಹೆಚ್ಚಿನ ಮಾಹಿತಿಗೆ ವಿಕಲಚೇತನರ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ. 08272 222830ಕ್ಕೆ ಕರೆಮಾಡಿ ಮಾಹಿತಿ ಪಡೆಯಬಹುದಾಗಿದೆ.